ಮೂಡಲಗಿ: ಪುರಸಭೆಯ ವಿವಿಧ ವಿಭಾಗಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳು ನೇರ ವೇತನಕ್ಕೆ ಒಳಪಡಿಸಬೇಕು ಹಾಗೂ ವಿಶೇಷ ನಿಯಮಾವಳಿಯನುಸಾರ ಖಾಯಂಗೊಳಿಸುವಂತೆ ಆಗ್ರಹಿಸಿ ಗುರುವಾರ ಪುರಸಭೆ ಮುಖ್ಯಾಧಿಕಾರಿ ದೀಪಕ್ ಹರ್ದಿ ಹಾಗೂ ತಹಸೀಲ್ದಾರ ಡಿ ಜಿ ಮಹಾತ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ,ಪುರಸಭೆ, ಪಟ್ಠಣ ಪಂಚಾಯಿತಿ ಹೊರ ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಮ್ ಬಿ ನಾಗಣ್ಣಗೌಡ ಅವರ ನಿರ್ದೇಶನದ …
Read More »ವಿದ್ಯಾರ್ಥಿಗಳಲ್ಲಿ ನಿರಂತರ ಪ್ರಯತ್ನವಿದ್ದರೆ ಯಶಸ್ಸು ಬೆನ್ನಹಿಂದೆ ಬರುತ್ತದೆ : ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ
ಮೂಡಲಗಿ: ‘ವಿದ್ಯಾರ್ಥಿಗಳಲ್ಲಿ ಪ್ರಖರವಾದ ಗುರಿ, ಶ್ರದ್ಧೆ ಹಾಗೂ ನಿರಂತರವಾದ ಪ್ರಯತ್ನವಿದ್ದರೆ ಯಶಸ್ಸು ಬೆನ್ನಹಿಂದೆ ಬರುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು. ತಾಲ್ಲೂಕಿನ ನಾಗನೂರದ ಮೊರಾರ್ಜಿ ವಸತಿ ಶಾಲೆಯ ಸಭಾ ಭವನದಲ್ಲಿ ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯಲ್ಲಿ ೨೦೨೧-೨೨ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೦ಕ್ಕೂ ಅಧಿಕ ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ನಂತರ ಕಲಿಕೆಗೆ ಇರುವ ಅವಕಾಶಗಳನ್ನು ಗಮನದಲ್ಲಿಟ್ಟು ಯಶಸ್ಸಿನತ್ತ ಸಾಗಬೇಕು ಎಂದರು. …
Read More »ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂಡಲಗಿ ಶೈಕ್ಷಣಿಕ ವಲಯ ಮತ್ತೇ ಅಗ್ರ ಸ್ಥಾನ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹರ್ಷ
ಮೂಡಲಗಿ : ಕಳೆದ ಮಾರ್ಚ-ಎಪ್ರೀಲ್ ತಿಂಗಳಲ್ಲಿ ಜರುಗಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂಡಲಗಿ ಶೈಕ್ಷಣಿಕ ವಲಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿರುವುದಕ್ಕೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿಯೇ ಮೂಡಲಗಿ ಶೈಕ್ಷಣಿಕ ವಲಯ ಈ ಬಾರಿಯೂ ಪ್ರಥಮ ರ‍್ಯಾಂಕ್ ಗಳಿಸಿದ್ದು, ಶೇ ೯೩.೭೦ ರಷ್ಟು ಫಲಿತಾಂಶ ಬಂದಿದೆ. ಮೂಡಲಗಿ ವಲಯ ಪ್ರಥಮ ಸ್ಥಾನ ಗಿಟ್ಟಿಸಲು ಕಾರಣೀಕರ್ತರಾದ ಎಲ್ಲ ವಿದ್ಯಾರ್ಥಿ …
Read More »ಶಿಕ್ಷಕರ, ಪಾಲಕ, ಪೋಷಕರ ಹಾಗೂ ವಿದ್ಯಾರ್ಥಿಗಳ ಪರಿಶ್ರಮದ ಫಲವಾಗಿ ಮೂಡಲಗಿ ಶೈಕ್ಷಣಿಕ ವಲಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ: ಬಿಇಒ ಅಜಿತ ಮನ್ನಿಕೇರಿ
ಮೂಡಲಗಿ : ಶಿಕ್ಷಕರ, ಪಾಲಕ, ಪೋಷಕರ ಹಾಗೂ ವಿದ್ಯಾರ್ಥಿಗಳ ಪರಿಶ್ರಮದ ಫಲವಾಗಿ ಮೂಡಲಗಿ ಶೈಕ್ಷಣಿಕ ವಲಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ೨೦೨೧-೨೨ ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಪರೀಕ್ಷೆಗೆ ದಾಖಲಾದ ೭೦೩೯ ವಿದ್ಯಾರ್ಥಿಗಳ ಪೈಕಿ ೬೭೩೭ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಮೂಡಲಗಿ ಶೈಕ್ಷಣಿಕ ವಲಯದ ಕೀರ್ತಿ ಹೆಚ್ಚಿಸಿದ್ದಾರೆಂದು ಬಿಇಒ ಅಜಿತ ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವರು ಗುರುವಾರ ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಳಿ ಪ್ರಕಟಿಸಿದ ಫಲಿತಾಂಶದ …
Read More »ಶೈಕ್ಷಣಿಕ ವರ್ಷಾರಂಭವು ಶೈಕ್ಷಣಿಕ ವಲಯದಲ್ಲಿ ಅದ್ಧೂರಿ ಆಚರಣೆ. ಮಕ್ಕಳ, ಪಾಲಕರ, ಶಿಕ್ಷಕರ ಹಾಗೂ ಸಮುದಾಯದ ಪಾಲ್ಗೋಳ್ಳುವಿಕೆ ಹರ್ಷದಾಯಕ : ಬಿಇಒ ಅಜಿತ ಮನ್ನಿಕೇರಿ
ಮೂಡಲಗಿ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಾರಂಭವು ಶೈಕ್ಷಣಿಕ ವಲಯದಲ್ಲಿ ಅದ್ಧೂರಿಯಾಗಿ ಜರುಗಿತು. ಮಕ್ಕಳ, ಪಾಲಕರ, ಶಿಕ್ಷಕರ ಹಾಗೂ ಸಮುದಾಯದ ಪಾಲ್ಗೋಳ್ಳುವಿಕೆಯು ಹರ್ಷದಾಯಕವಾಗಿತ್ತು ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಅಭಿಪ್ರಾಯ ವ್ಯಕ್ತಪಡಿದರು. ಅವರು ಸೋಮವಾರ ಜರುಗಿದ ಶಾಲಾ ಪ್ರಾರಂಭೋತ್ಸವ ಹಾಗೂ ಕಲಿಕಾ ಚೇತರಿಕೆ ಕಾರ್ಯಕ್ರಮ ನಿಮಿತ್ಯ ಶೈಕ್ಷಣಿಕ ವಲಯದ ಪಟಗುಂದಿಯ ಸರಕಾರಿ ಹಿರಿಯ ಕನ್ನಡ ಮತ್ತು ಉರ್ದು ಶಾಲೆ, ಬಳೋಬಾಳ ಗ್ರಾಮದ ಸರಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆ, …
Read More »ನಮ್ಮದು ವಿವಿಧತೆಯಲ್ಲಿ ಏಕತೆ ಸಾರುವ ರಾಷ್ಟ್ರ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಘಟಪ್ರಭಾ : ಪ್ರಾಚೀನ ಕಾಲದಿಂದಲೂ ನಾವು ದೈವ ಭಕ್ತರು. ದೇವರನ್ನು ನಂಬಿ ಬದುಕುತ್ತಿರುವವರು. ದೇವರಿಂದಲೇ ಈ ಜಗತ್ತು ನಡೆದಿದೆ. ದೇಶವು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಿರುವುದರಿಂದ ನಮ್ಮದು ಜಾತ್ಯಾತೀತ ರಾಷ್ಟ್ರವೆಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಸೋಮವಾರ ಸಂಜೆ ಸಮೀಪದ ಗಣೇಶವಾಡಿ ಗ್ರಾಮದ ಲಕ್ಷ್ಮಿದೇವಿ ದೇವಸ್ಥಾನದ ೨೫ ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರು ದೇವರ ಮೇಲೆ ಶ್ರದ್ಧೆ, …
Read More »ಶೈಕ್ಷಣಿಕ ವಲಯಾದ್ಯಂತ ಮೇ. 16 ರಿಂದ ಶೈಕ್ಷಣಿಕ ಕಾರ್ಯಚಟುವಟಿಕೆಗಳು ನಡೆಯುವಂತೆ ಅಗತ್ಯ ಕ್ರಮ : ಬಿಇಒ ಮನ್ನಿಕೇರಿ
ಮೂಡಲಗಿ: ಪ್ರಸಕ್ತ 2022-23 ನೇ ಸಾಲಿನ ಶೈಕ್ಷಣಿಕ ಸಾಲಿನ ಕಲಿಕಾ ಚೇತರಿಕೆ ಕಾರ್ಯಕ್ರಮ ಅನುಷ್ಠಾನಗೊಳಿಸುವದರ ಜೊತೆಗೆ ಶಾಲಾ ಪ್ರಾರಂಭೋತ್ಸವವನ್ನು ಶೈಕ್ಷಣಿಕ ವಲಯಾದ್ಯಂತ ಮೇ. 16 ರಿಂದ ಶೈಕ್ಷಣಿಕ ಕಾರ್ಯಚಟುವಟಿಕೆಗಳು ನಡೆಯುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು. ಅವರು ರವಿವಾರದಂದು ಪಟ್ಟಣದ ಸರಕಾರಿ ಮಾದರಿ ಹಿರಿಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಜರುಗಿದ ಸ್ವಚ್ಚತಾ ಕಾರ್ಯದಲ್ಲಿ ಶ್ರಮದಾನ ಮಾಡಿದರು. ಮೂಡಲಗಿ ವಲಯವು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ …
Read More »ವಿದ್ಯಾರ್ಥಿಗಳನ್ನು ವಿನೂತನವಾಗಿ ಸ್ವಾಗತಿಸುವ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ : ಬಿಇಒ ಮನ್ನಿಕೇರಿ
ಮೂಡಲಗಿ : ಮೇ ೧೬ರಂದು ಕಲಿಕಾ ಚೇತರಿಕೆಗೋಸ್ಕರ ಶೈಕ್ಷಣಿಕ ವರ್ಷ ಆರಂಭದಲ್ಲಿ ವಿದ್ಯಾರ್ಥಿಗಳನ್ನು ವಿನೂತನವಾಗಿ ಸ್ವಾಗತಿಸುವ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಮೂಡಲಗಿ ವಲಯದ ಎಲ್ಲ ಶಾಲೆಗಳು, ಶಿಕ್ಷಕರು ಸಿದ್ಧಗೊಂಡಿದ್ದಾರೆ. ತುಕ್ಕಾನಟ್ಟಿ ಶಾಲಾ ಶಿಕ್ಷಕರು ಪಾಲಕರಿಗೆ ಮಮತೆಯ ಕರೆಯೋಲೆಯೊಂದಿಗೆ ಅಂಚೆ ಪತ್ರ ಬರೆಯುವ ಮೂಲಕ ತಮ್ಮ ಮಕ್ಕಳ ದಾಖಲಾತಿ ಮಾಡುವಂತೆ ಮನವಿ ಮಾಡಿಕೊಂಡಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಿಜಿಒ ಅಜೀತ ಮನ್ನಿಕೇರಿ ಹೇಳಿದರು. ಪಟ್ಟಣದ ಬಿಇಒ ಕಾರ್ಯಲಯದಲ್ಲಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದ …
Read More »ಸತ್ತಿಗೇರಿ ತೋಟದಲ್ಲಿ ಕಿಡಿಗೇಡಿಗಳಿಂದ ಮಸೀದಿ ಮೇಲೆ ಧ್ವಜ.. ಉಭಯ ಸಮುದಾಯಗಳ ಶಾಂತಿ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ.
ಗೋಕಾಕ : ಸಮೀಪದ ಅರಭಾವಿ ಸತ್ತಿಗೇರಿ ತೋಟದ ಮಸೀದಿ ಹತ್ತಿರ ಕೆಲ ಕಿಡಗೇಡಿಗಳು ಕಳೆದ ರಾತ್ರಿ ಕೇಸರಿ ಧ್ವಜ ಕಟ್ಟಿದ್ದರಿಂದ ಕೆಲ ಕಾಲ ಪರಿಸ್ಥಿತಿ ಉದ್ವಿಘ್ನಗೊಂಡಿದ್ದು, ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸಿಬ್ಬಂದಿಗಳ ಮೂಲಕ ಸತ್ತಿಗೇರಿ ತೋಟದ ಉಭಯ ಸಮುದಾಯಗಳ ಸಭೆ ನಡೆಸುವ ಮೂಲಕ ಯಶಸ್ವಿಯಾಗಿ ಸಂಧಾನ ನಡೆಸಿದ್ದಾರೆ. ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಬುಧವಾರದಂದು ಅಲ್ಲಿನ ನಿವಾಸಿಗಳ ಸಭೆ ನಡೆಸಿ ತಪ್ಪಿತಸ್ಥರು ಯಾರೇ …
Read More »ಕೊಳಚೆ ಪ್ರದೇಶದ ನಿವಾಸಿಗಳಿಗೆ ಪಿಎಂ ಆವಾಸ್ ಯೋಜನೆಯಡಿಯಲ್ಲಿ ೧೪೨೯ ಮನೆಗಳ ಮಂಜೂರು.- ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಮೂಡಲಗಿ ಪಟ್ಟಣ ವ್ಯಾಪ್ತಿಯಲ್ಲಿ ಘೋಷಿತ ಕೊಳಚೆ ಪ್ರದೇಶಗಳಿಗೆ ಪ್ರಧಾನ ಮಂತ್ರಿ ಆವಾಸ ಯೋಜನೆ ಹಾಗೂ ಎಚ್‌ಎಫ್‌ಎ ಯೋಜನೆಯಡಿಯಲ್ಲಿ 1429 ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಮಂಗಳವಾರ ಸಂಜೆ ಇಲ್ಲಿಯ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಜರುಗಿದ ಪಟ್ಟಣದ ಕೊಳಚೆ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೊಳಚೆ ಪ್ರದೇಶಗಳಲ್ಲಿ ಸುಂದರವಾದ ವಸತಿ ಸೌಲಭ್ಯಗಳನ್ನು …
Read More »