ಭಾನುವಾರ , ಮೇ 28 2023
kn
Breaking News

ಶೈಕ್ಷಣಿಕ ವಲಯಾದ್ಯಂತ ಮೇ. 16 ರಿಂದ ಶೈಕ್ಷಣಿಕ ಕಾರ್ಯಚಟುವಟಿಕೆಗಳು ನಡೆಯುವಂತೆ ಅಗತ್ಯ ಕ್ರಮ : ಬಿಇಒ ಮನ್ನಿಕೇರಿ

Spread the love

ಮೂಡಲಗಿ: ಪ್ರಸಕ್ತ 2022-23 ನೇ ಸಾಲಿನ ಶೈಕ್ಷಣಿಕ ಸಾಲಿನ ಕಲಿಕಾ ಚೇತರಿಕೆ ಕಾರ್ಯಕ್ರಮ ಅನುಷ್ಠಾನಗೊಳಿಸುವದರ ಜೊತೆಗೆ ಶಾಲಾ ಪ್ರಾರಂಭೋತ್ಸವವನ್ನು ಶೈಕ್ಷಣಿಕ ವಲಯಾದ್ಯಂತ ಮೇ. 16 ರಿಂದ ಶೈಕ್ಷಣಿಕ ಕಾರ್ಯಚಟುವಟಿಕೆಗಳು ನಡೆಯುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.
ಅವರು ರವಿವಾರದಂದು ಪಟ್ಟಣದ ಸರಕಾರಿ ಮಾದರಿ ಹಿರಿಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಜರುಗಿದ ಸ್ವಚ್ಚತಾ ಕಾರ್ಯದಲ್ಲಿ ಶ್ರಮದಾನ ಮಾಡಿದರು. ಮೂಡಲಗಿ ವಲಯವು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳ ಕಲಿಕಾ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಶಿಕ್ಷಕರಿಗೆ ಪುನಶ್ಚೇತನ ತರಬೇತಿ, ಅಗತ್ಯ ಕಲಿಕೋಪಕರಣಗಳು, ದಾಖಲಾತಿ ಹೆಚ್ಚಿಸಲು, ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಠಿಯಲ್ಲಿ ಕ್ರಮವಹಿಸಿದೆ. ಶಾಲಾರಂಭಕ್ಕೆ ಅಗತ್ಯ ತಯಾರಿಗೆ ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಎಸ್.ಡಿ.ಎಮ್.ಸಿ, ಚುನಾಯಿತ ಜನಪ್ರತಿನಿದಿಗಳು, ಶಿಕ್ಷಣ ಪ್ರೇಮಿಗಳು ಹಾಗೂ ಅಡುಗೆ ಸಿಬ್ಬಂದಿಯವರಿಗೆ ಅಗತ್ತ ಸೂಚನೆಗಳನ್ನು ನೀಡಲಾಗಿದೆ ಎಂದರು.
ಶಾಲಾ ಪ್ರಾರಂಭೋತ್ಸವದಂದು, ನಮ್ಮ ನಡೆ ಅಂಗನವಾಡಿ ಕಡೆ, ಪಾಲಕ ಪೋಷಕರ ಮನೆ ಭೇಟಿ ಮಾಡುವ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಪುಷ್ಪ ಹಾಗೂ ಮಂಗಳಾರತಿಯೊಂದಿಗೆ ಸಂತಸದಾಯಕ ಕಲಿಕೆಯೆಡೆಗೆ ಆಕರ್ಷಿಸಲು ತಿಳಿಸಲಾಗಿದೆ. ಸರಕಾರದಿಂದ ದೊರೆಯುವ ಪ್ರತಿಯೊಂದು ಯೋಜನೆಗಳು ಮಗುವಿಗೆ ತಲುಪುವಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್-19 ದಿಂದಾಗಿ ಮಕ್ಕಳ ಕಲಿಕೆಯಲ್ಲಾಗಿರುವ ತೊಂದರೆಗಳನ್ನು ನಿವಾರಿಸಿ ಭಯ ಮುಕ್ತ ಶಾಲಾ ಶೈಕ್ಷಣಿಕ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಅವರು ಮೂಡಲಗಿ ವಲಯದ ಕೆ.ಜಿ.ಎಸ್, ರಾಜಾಪೂರ, ದಂಡಾಪೂರ ಹಾಗೂ ಸುತ್ತಲಿನ ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡುವ ಮೂಲಕ ಶಾಲಾ ಪ್ರಾರಂಭೋತ್ಸವದ ಪೂರ್ವ ತಯಾರಿ ಕುರಿತು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಸತೀಶ ಬಿ.ಎಸ್, ಪ್ರಧಾನ ಗುರುಗಳಾದ ಬಿ.ಎಚ್ ಹುಲ್ಯಾಳ, ವಿಠ್ಠಲ ಹುಲ್ಲಾರ, ಎಮ್. ಆರ್ ನಡುವಿನಮನಿ, ಕವಣಿ, ಶಿಕ್ಷಕರ ಸಂಘದ ಕಾರ್ಯದರ್ಶಿ ಎಡ್ವಿನ್ ಪರಸನ್ನವರ, ಉಪಾಧ್ಯಕ್ಷ ಬಿ.ಎ ಡಾಂಗೆ, ಸಿ.ಆರ್.ಪಿ ಎಸ್.ಕೆ ಮುಸೆಪ್ಪಗೋಳ ಹಾಗೂ ಶಿಕ್ಷಕ ಸಿಬ್ಬಂದಿ, ಅಡುಗೆ ಸಿಬ್ಬಂದಿಗಳು ಹಾಜರಿದ್ದರು.


Spread the love

About gcsteam

Check Also

ಹಳೆಯ ಪಿಂಚಣಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ:ಬೀರಪ್ಪ ಅಂಡಗಿ

Spread the loveಕೊಪ್ಪಳ: ೧ನೇ ಏಪ್ರೀಲ್ ೨೦೦೬ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಲಾಗಿರುವ ನೂತನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page