ಮಂಗಳವಾರ , ಏಪ್ರಿಲ್ 30 2024
kn
Breaking News

Recent Posts

ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಹೃದಯವಂತ ಶಾಸಕರು : ಪಿಕೆಪಿಎಸ್ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ

ಮೂಡಲಗಿ : ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಹುಣಶ್ಯಾಳ ಪಿವಾಯ್‍ದಿಂದ ಬೀಸನಕೊಪ್ಪವರೆಗಿನ ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ ಎಂದು ಹುಣಶ್ಯಾಳ ಪಿವಾಯ್ ಪಿಕೆಪಿಎಸ್ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ ತಿಳಿಸಿದರು. ಶುಕ್ರವಾರದಂದು ತಾಲೂಕಿನ ಹುಣಶ್ಯಾಳ ಪಿವಾಯ್ ಗ್ರಾಮದಲ್ಲಿ ಜರುಗಿದ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 4 ಕೋಟಿ ರೂ. ಮೊತ್ತದ ಹುಣಶ್ಯಾಳ ಪಿವಾಯ್-ಬೀಸನಕೊಪ್ಪ ರಸ್ತೆ ಸುಧಾರಣೆ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು …

Read More »

ಸನ್ಮಾನ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ:ಬೀರಪ್ಪ ಅಂಡಗಿ

ಕೊಪ್ಪಳ:ಸನ್ಮಾನದಿoದ ನನ್ನ ಜವಾಬ್ದಾರಿಯು ಹೆಚ್ಚಾಗಿದೆ ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು. ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಕರುನಾಡು ಸಾಧಕರು ಪ್ರಶಸ್ತಿಯು ಲಭಿಸಿದ ಅಂಗವಾಗಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ,ಸನ್ಮಾನ ಎಂಬ ಕಾರ್ಯಕ್ರಮದಿಂದ ನನ್ನ ಕಾರ್ಯ ಕ್ಷೇತ್ರದಲ್ಲಿನ ಜವಾಬ್ದಾರಿಯು ಹೆಚ್ಚಾಗಿದೆ ಅಲ್ಲದೇ ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಲು ಪ್ರೋತ್ಸಾಹ ನೀಡಿದಂತೆ ಆಗುತ್ತದೆ.ವಿಕಲಚೇತನರ ಕ್ಷೇತ್ರದಲ್ಲಿ ಮಾಡಿದ ಅಳಿಲು ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು …

Read More »

ಮೂಡಲಗಿ ಹಳ್ಳದಲ್ಲಿ ಏಳು ಭ್ರೂಣಗಳ ಪತ್ತೆ ಜನರಲ್ಲಿ ಆತಂಕ

ಮೂಡಲಗಿ:ಮೂಡಲಗಿ ಪಟ್ಟಣದೊಳಗೆ ಹರಿದ ಹಳ್ಳದಲ್ಲಿ ಶುಕ್ರವಾರ ಮಧ್ಯಾಹ್ನ ಹತ್ಯೆ ಮಾಡಲಾದ ಏಳು ಭ್ರೂಣಗಳು ಪತ್ತೆಯಾಗಿವೆ. ಈ ದೃಶ್ಯ ಕಂಡು ಪಟ್ಟಣದ ಜನರು ಬೆಚ್ಚಿಬಿದ್ದರು. ಹಳ್ಳದಲ್ಲಿ ಕಂಡ ಪ್ಲಾಸ್ಟಿಕ್ ಡಬ್ಬಿಗಳು ಕಂಡಬಂದವು. ಸಮೀಪದ ಹೋಗಿ ನೋಡಿದಾಗ ಮಗುವಿನ ಆಕಾರದ ಭ್ರೂಣಗಳನ್ನು ಹಾಕಿ ಮುಚ್ಚಳ ಮುಚ್ಚಿದ್ದು ಗೊತ್ತಾಯಿತು. ವಿಷಯ ತಿಳಿದ ತಕ್ಷಣ ಪಟ್ಟಣದಲ್ಲಿ ಜನಸ್ತೋಮ ಸೇರಿತು. ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಏಳು ಭ್ರೂಣಗಳನ್ನು ತುರಕಲಾಗಿದೆ. ಸ್ಥಳಕ್ಕೆ ಬಂದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು …

Read More »

ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿ ಕಡಿಮೆ ಇರುವ ಶಾಲೆಗಳಲ್ಲಿ ‘ಶಾಲಾ ದಾಖಲಾತಿ ಹೆಚ್ಚಳ ಆಂದೊಲನ ಅಭಿಯಾನ’ : ಬಿಇಓ ಅಜಿತ ಮನ್ನಿಕೇರಿ

ಮೂಡಲಗಿ: ಶೈಕ್ಷಣಿಕವಾಗಿ ಮೂಡಲಗಿ ವಲಯವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿ ಕಡಿಮೆ ಇರುವ ಶಾಲೆಗಳಲ್ಲಿ ಶಾಲಾ ದಾಖಲಾತಿ ಹೆಚ್ಚಳ ಆಂದೊಲನ ಅಭಿಯಾನ ಹಮ್ಮಿಕೊಂಡಿರುವದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ತಿಳಿಸಿದ್ದಾರೆ. ಅವರು ಶುಕ್ರವಾರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಜರುಗಿದ ಕಡಿಮೆ ದಾಖಲಾತಿ ಹೊಂದಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ಪ್ರಧಾನ ಗುರುಗಳ ಸಭೆಯಲ್ಲಿ ಮಾತನಾಡಿ, ವಲಯದಲ್ಲಿರುವ ಶಾಲೆಗಳಲ್ಲಿ ಗುಣಾತ್ಮಕ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ. ಕಾರಣಾಂತರಗಳಿoದ ಕೇಲವು …

Read More »

ಅನ್ನದಾನವು ಮಾನವೀಯತೆಯ ಪ್ರತೀಕ :ಡಾ ಶ್ರೀಶೈಲ್ ಬರಗಿ

ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ ೭೪ನೇ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಿದ್ದರು. ಮೂಡಲಗಿಯ ಹಿರಿಯ ವೈದ್ಯ ಡಾ. ಶ್ರೀಶೈಲ್ ಎಂ. ಬರಗಿ ಅವರು ಅನ್ನದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿ ‘ಅನ್ನದಾನವು ಶ್ರೇಷ್ಠ ದಾನವಾಗಿದೆ, ಹಸಿದವರಿಗೆ ಅನ್ನ ನೀಡುವುದು ಮಾನವೀಯತೆಯ ಪ್ರತೀಕವಾಗಿದೆ’ ಎಂದರು. ಕಲ್ಲೋಳಿಯ ವೈದ್ಯ ಡಾ. ಅಶೋಕ ಪಾಟೀಲ ಮಾತನಾಡಿ ಮೂಡಲಗಿ ಲಯನ್ಸ್ ಕ್ಲಬ್‌ವು ಪ್ರತಿ ತಿಂಗಳದಲ್ಲಿ ಎರಡು …

Read More »

ಮಲೇರಿಯಾ ವಿರೋಧಿ ದಿನಾಚರಣೆ ಆಚರಣೆ

ಮೂಡಲಗಿ : ‘ಪರಿಸರರವನ್ನು ಎಷ್ಟು ಸ್ವಚ್ಚವಾಗಿ ಇಟ್ಟು ಕೊಳ್ಳುತ್ತವೇ ಅಷ್ಟು ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಕಸ ಕಡ್ಡಿ ಚರಂಡಿ ನೀರು, ನಮ್ಮ ಮುತ್ತಲಿನ ವಾತಾರವರಣ ಮಲೀನವಾದಷ್ಟು ನಾವು ರೋಗದ ಗುಡಾಗುತ್ತವೆ ಎಂದು ಮುಸಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಪನ್ಮೂಲ ವ್ಯಕ್ತಿ ಆರೋಗ್ಯ ನಿರೀಕ್ಷಣಾಧಿಕಾರಿ ರಾಮಚಂದ್ರ ಸಣ್ಣಕ್ಕಿ ಹೇಳಿದರು, ತಾಲೂಕಿನ ಮುಸಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರದಿoದ ಇಂದು ಗುರುವಾರ ಆಯೋಜಿಸಿದ ಮಲೇರಿಯಾ ವಿರೋದಿ ಮಾಸಾಚರಣೆ ನಿಮಿತ್ಯ ದರ್ಮಟ್ಟಿ ಗ್ರಾಮದಲ್ಲಿ ಜಾಗೃತಿ ಜಾಥಾ …

Read More »

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಇಡೀ ಕ್ಷೇತ್ರ ಅಭಿವೃದ್ಧಿ ಪಥದತ್ತ ಕಳ್ಳಿಗುದ್ದಿ-ಕೌಜಲಗಿ ರಸ್ತೆ ಸುಧಾರಣಾ ಕಾಮಗಾರಿಗೆ ೪ ಕೋಟಿ ರೂ. ಅನುದಾನ : ಬಾಳಪ್ಪ ಗೌಡರ

ಗೋಕಾಕ : ಕಳ್ಳಿಗುದ್ದಿ, ರಡ್ಡೇರಹಟ್ಟಿ ಮತ್ತು ಮನ್ನಿಕೇರಿ ಗ್ರಾಮಗಳ ಅಭಿವೃದ್ಧಿಗಾಗಿ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದ ಸಾಕಷ್ಟು ಪ್ರಗತಿಪರ ಯೋಜನೆಗಳನ್ನು ಸಾಕಾರಗೊಳಿಸಿದ್ದು, ಕಳ್ಳಿಗುದ್ದಿಯಿಂದ ಕೌಜಲಗಿವರೆಗಿನ ರಸ್ತೆ ಕಾಮಗಾರಿಗೆ ೪ ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದ್ದಾರೆಂದು ಕಳ್ಳಿಗುದ್ದಿ ಗ್ರಾಪಂ ಅಧ್ಯಕ್ಷ ಬಾಳಪ್ಪ ಗೌಡರ ತಿಳಿಸಿದರು. ಇತ್ತೀಚೆಗೆ ಲೋಕೋಪಯೋಗಿ ಇಲಾಖೆಯ ಎಸ್‌ಎಚ್‌ಡಿಪಿ ಯೋಜನೆಯಡಿ ಮಂಜೂರಾದ ೪ ಕೋಟಿ ರೂ. ವೆಚ್ಚದ ಕಳ್ಳಿಗುದ್ದಿ-ಕೌಜಲಗಿ ರಸ್ತೆ ಸುಧಾರಣಾ …

Read More »

ಯಾದವಾಡ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಿಂದ ಯೋಗ ದಿನಾಚರಣೆ

ಮೂಡಲಗಿ: ಇಂದಿನ ಅವಸರದ ಜೀವನದಲ್ಲಿ ಕೆಲಸದ ಜೊತೆಗೆ ನಮ್ಮ ಆರೋಗ್ಯವನ್ನು ಯೋಗ ಮತ್ತು ದ್ಯಾನದಿಂದ ಕಾಪಾಡಿಕೊಳ್ಳಲು ಸಾಧ್ಯ ಎಂದು ಯಾದವಾಡ ದಾಲ್ಮಿಯಾ ಸಿಮೆಂಟ್ ಕಾರ್ಖಾನೆ ಮುಖ್ಯಸ್ಥ ಪ್ರಭಾತ್‌ಕುಮಾರ್ ಸಿಂಗ್ ಹೇಳಿದರು. ಅವರು ತಾಲೂಕಿನ ಯಾದವಾಡ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಿಂದ ಅರಳಿಕಟ್ಟಿ ಫೌಂಡೇಶನ್ ಆವರಣದಲ್ಲಿ ಆಯೋಜಿಸಿದ ೮ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದರು. ಅರಳಿಕಟ್ಟಿ ಫೌಂಡೇಶನ್ ಚೇರ್ಮನ್ ಡಾ. ಟಿ.ವ್ಹಿ.ಅರಳಿಕಟ್ಟಿ ಅವರು ಯೋಗ ದಿನಾಚರಣೆ ಆಚರಣೆ ಆಗಿರದೆ ವರ್ಷದ ೩೬೫ ದಿನವೂ …

Read More »

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಅವರಾದಿ-ತಿಮ್ಮಾಪೂರ ರಸ್ತೆ ಅಭಿವೃದ್ಧಿಗೆ ೧೮ ಕೋಟಿ ರೂ ಅನುದಾನ ಮಂಜೂರು : ಸವಿತಾ ನಾಯಿಕ

ಮೂಡಲಗಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದಾಗಿ ಅವರಾದಿ-ತಿಮ್ಮಾಪೂರ ರಸ್ತೆ ಅಭಿವೃದ್ಧಿಗೆ ೧೮ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಅವರಾದಿ ಗ್ರಾಪಂ ಅಧ್ಯಕ್ಷೆ ಸವಿತಾ ಚಂದ್ರಶೇಖರ ನಾಯಿಕ ತಿಳಿಸಿದರು. ತಾಲೂಕಿನ ಅವರಾದಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ೧೮ ಕೋಟಿ ರೂ ವೆಚ್ಚದ ಅವರಾದಿ-ತಿಮ್ಮಾಪೂರ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ರಸ್ತೆ ಕಾಮಗಾರಿಯಿಂದ ಅವರಾದಿಯಿಂದ ಹಳೇಯರಗುದ್ರಿ, ಹೊಸಯರಗುದ್ರಿ ಮೂಲಕ ತಿಮ್ಮಾಪೂರ …

Read More »

ಉತ್ತಮ ಆರೋಗ್ಯಕ್ಕಾಗಿ ಯೋಗ ಅತ್ಯವಶ್ಯಕ -ಅರವಿಂದ ದಳವಾಯಿ

ಮೂಡಲಗಿ: ಸಮೀಪದ ಕೌಜಲಗಿಯ ಡಾ. ಮಹಾದೇವಪ್ಪ ಮಡ್ಡೆಪ್ಪ ದಳವಾಯಿ ಪ್ರೌಢಶಾಲೆ ಮತ್ತು ಸಿಂದೂ ಮಾಧವ ಪಬ್ಲಿಕ್ ಸ್ಕೂಲ್ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಯೋಗ ದಿನ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾದ ಸಂಸ್ಥೆಯ ಧರ್ಮದರ್ಶಿಗಳಾದ ಅರವಿಂದ ದಳವಾಯಿಯವರು ಉತ್ತಮ ಆರೋಗ್ಯಕ್ಕಾಗಿ ಯೋಗ ಅತ್ಯವಶ್ಯವೆಂದು ಹೇಳಿದರು. ಮುಂದುವರೆದು ಯೋಗದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ, ದೈಹಿಕ ಕ್ಷಮತೆ, ಮಾನಸಿಕ ಆರೋಗ್ಯ ಹೀಗೆ ಸರ್ವ ರೀತಿಯಿಂದಲೂ ಆರೋಗ್ಯಯುತ ಜೀವನಶೈಲಿ ನಡೆಸಬಹುದೆಂದು ತಿಳಿಸಿದರು. ಪ್ರತಿನಿತ್ಯವೂ ಯೋಗ ಮಾಡುವುದರಿಂದ …

Read More »

You cannot copy content of this page