ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ ೭೪ನೇ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಿದ್ದರು.
ಮೂಡಲಗಿಯ ಹಿರಿಯ ವೈದ್ಯ ಡಾ. ಶ್ರೀಶೈಲ್ ಎಂ. ಬರಗಿ ಅವರು ಅನ್ನದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿ ‘ಅನ್ನದಾನವು ಶ್ರೇಷ್ಠ ದಾನವಾಗಿದೆ, ಹಸಿದವರಿಗೆ ಅನ್ನ ನೀಡುವುದು ಮಾನವೀಯತೆಯ ಪ್ರತೀಕವಾಗಿದೆ’ ಎಂದರು.
ಕಲ್ಲೋಳಿಯ ವೈದ್ಯ ಡಾ. ಅಶೋಕ ಪಾಟೀಲ ಮಾತನಾಡಿ ಮೂಡಲಗಿ ಲಯನ್ಸ್ ಕ್ಲಬ್‌ವು ಪ್ರತಿ ತಿಂಗಳದಲ್ಲಿ ಎರಡು ಬಾರಿ ರೋಗಿಗಳಿಗೆ ಅನ್ನದಾಸೋಹ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಲಯನ್ಸ್ ಕ್ಲಬ್ ಸದಸ್ಯ ನೇತ್ರ ತಜ್ಞ ಡಾ. ಸಚಿನ ಟಿ. ಅವರು ತಮ್ಮ ಹಿರಿಯ ಮಗ ಸಕ್ಷಮ ಮೂರನೇ ವರ್ಷದ ಹುಟ್ಟು ಹಬ್ಬ ಮತ್ತು ಸೃಜನಿಕಾ ಮೊದಲ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಅನದಾಸೋಹವನ್ನು ಏರ್ಪಡಿಸಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿ ಪ್ರತಿ ತಿಂಗಳದಲ್ಲಿ ಎರಡು ಬಾರಿ ಅನ್ನದಾಸೋಹವನ್ನು ನಡೆಸಿಕೊಂಡು ಬರುತ್ತಿರುವೆವು, ಲಯನ್ಸ್ ಕ್ಲಬ್ ಸದಸ್ಯರಲ್ಲದೆ ಬೇರೆಯವರು ಸಹ ಅನ್ನದಾಸೋಹವನ್ನು ಮಾಡಬಹುದಾಗಿದೆ. ದಾಸೋಹದ ನಿರ್ವಹಣೆಯನ್ನು ಲಯನ್ಸ್ ಕ್ಲಬ್‌ವು ಮಾಡುವುದು ಎಂದರು.
ಮುಖ್ಯ ಅತಿಥಿಯಾಗಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ನಾಗರತ್ನಾ ಅಶೋಕ ಪಾಟೀಲ, ಡಾ. ಸಚಿನ ಟಿ. ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಸುಪ್ರೀತ ಸೋನವಾಲಕರ, ಸಂಜಯ ಮೋಕಾಶಿ, ಎನ್.ಟಿ. ಪಿರೋಜಿ, ಶಿವಾನಂದ ಕಿತ್ತೂರ, ಸಂಗಮೇಶ ಕೌಜಲಗಿ, ಮಹಾಂತೇಶ ಹೊಸೂರ ಇದ್ದರು.
೩೫೦ಕ್ಕೂ ಅಧಿಕ ಸಂಖ್ಯೆಯಲ್ಲಿ ರೋಗಿಗಳು ಅನ್ನದಾಸೋಹದಲ್ಲಿ ಭಾಗವಹಿಸಿದ್ದರು.
