SUBSCRIBE YOUTUBE CHANNEL
ಬೆಳಗಾವಿ: ಮಹಾಮಾರಿ ಕೊರೋನಾ ದಿನದಿಂದ ದಿನಕ್ಕೆ ಬೆಳಗಾವಿ ಜಿಲ್ಲೆಯಿಂದ ದೂರವಾಗುತ್ತಿದೆ ಕಳೆದ ಒಂದು ವಾರದಿಂದ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಕಡಿಮೆ ಆಗುತ್ತಲೇ ಇದೆ, ಎನ್ನುವಷ್ಟರಲ್ಲಿ ಜಿಲ್ಲೆಯಲ್ಲಿ ಇಂದು ಶುಕ್ರವಾರ ಮಧ್ಯಾಹ್ನದ ಹೆಲ್ತ ಬುಲಿಟೀನ್ ನಲ್ಲಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಎರಡು ಪಾಸಟೀವ್ ಕೇಸ್ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 45ಕ್ಕೇರಿದೆ.
ಜಿಲ್ಲೆಯಲ್ಲಿ ಹೊಸದಾಗಿ ಸೋಂಕು ಬಾಧಿಸಿರುವವರಲ್ಲಿ ಒಬ್ಬರು 10 ವರ್ಷ ವಯಸ್ಸಿನ ಬಾಲಕಿಯಾಗಿದ್ದರೆ, ಇನ್ನೊಬ್ಬ 15 ವರ್ಷದ ಬಾಲಕನಾಗಿದ್ದಾನೆ. ಇಬ್ಬರೂ ರಾಯಬಾಗ ತಾಲೂಕು ಕುಡಚಿಯವರು ಎಂದು ತಿಳಿದಿದೆ.
ರಾಜ್ಯದಲ್ಲಿ ಇಂದು ಬೆಳಿಗ್ಗೆ ಒಟ್ಟು 18 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಅವರಲ್ಲಿ 11 ಮಂದಿ ಬೆಂಗಳೂರಿಗರು. ಉಳಿದಂತೆ ಬಾಗಲಕೋಟೆಯಲ್ಲಿ ಇಬ್ಬರು ಮತ್ತು ವಿಜಯಪುರ, ಚಿಕ್ಕಬಳ್ಳಾಪುರ ಮತ್ತು ತುಮಕೂರಿನ ಒಬ್ನರಲ್ಲಿ ಸೋಂಕು ಪತ್ತೆಯಾಗಿದೆ.
Sarvavani Latest Kannada News