ಭಾನುವಾರ , ಡಿಸೆಂಬರ್ 22 2024
kn
Breaking News

gcsteam

ಪ್ರಸಕ್ತ ದಿನಗಳಲ್ಲಿ ನಮ್ಮ ಹಕ್ಕನ್ನು ಪಡೆಯುವದು ನಮ್ಮೆಲ್ಲರ ಕರ್ತವ್ಯ: ಡಾ. ರಾಜೇಂದ್ರ ಸಣ್ಣಕ್ಕಿ

ಮೂಡಲಗಿ: ಪ್ರಸಕ್ತ ದಿನಗಳಲ್ಲಿ ನಮ್ಮ ಹಕ್ಕನ್ನು ಪಡೆಯುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹೋರಾಟದ ಮೂಲಕ ಸರಕಾರದ ಗಮನ ಸೆಳೆದು ಕುರುಬ ಸಮುದಾಯಕ್ಕೆ ಪರಿಶಿಷ್ಠ ಪಂಗಡ (ಎಸ್.ಟಿ) ಮೀಸಲಾತಿ ಅತ್ಯಾವಶ್ಯಕವಾಗಿದೆ ಎಂದು ಕರ್ನಾಟಕ ರಾಜ್ಯ ಎಸ್.ಟಿ ಹೋರಾಟ ಸಮೀತಿ ಕಾರ್ಯದರ್ಶಿ ಹಾಗೂ ಮಾಜಿ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಹೇಳಿದರು. ಅವರು ಪಟ್ಟಣದ ಶ್ರೀ ಶಿವಬೋಧರಂಗ ಅರ್ಬನ್ ಸೊಸೈಟಿಯಲ್ಲಿ ಜರುಗಿದ ‘ಬಾಗಲಕೋಟೆಯಲ್ಲಿ ನಂ. 29 ರಂದು ಜರುಗುವ …

Read More »

ಪಿಕೆಪಿಎಸ್‍ಗಳು ರೈತರ ಜೀವನಾಡಿಗಳು : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರಿಗೆ ಕಷ್ಟಕರ ಸಮಸ್ಯೆಗಳು ಎದುರಾದಾಗ ಅವರಿಗೆ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ರೈತರ ಜೀವನಾಡಿಗಳು’ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಮಂಗಳವಾರ ಸಂಜೆ ತಾಲೂಕಿನ ಕಲ್ಲೋಳಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಲ್ಲೋಳಿ ಪಿಕೆಪಿಎಸ್ 100 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಈ …

Read More »

ಯುವಕರ ಭವಿಷ್ಯಕ್ಕೆ ಜಿಟಿಟಿಸಿ ಸಂಸ್ಥೆಯು ಉತ್ತಮ ಬುನಾದಿ : ಡಿಸಿಎಂ ಡಾ.ಅಶ್ವತ್ಥ್ ನಾರಾಯಣ.

ಮೂಡಲಗಿ : ನುರಿತ ಮಾನವ ಸಂಪನ್ಮೂಲವನ್ನು ಕೈಗಾರಿಕಾ ಕ್ಷೇತ್ರಕ್ಕೆ ಒದಗಿಸಿ ಆ ಮೂಲಕ ಕೈಗಾರಿಕಾ ಸಂಸ್ಥೆಗಳ ಅಭಿವೃದ್ಧಿಗೆ ತಂತ್ರಜ್ಞಾನ ಮತ್ತು ತರಬೇತಿಗಳ ನೆರವು ನೀಡುವುದು ಜಿಟಿಟಿಸಿ ಸಂಸ್ಥೆಯ ಉದ್ಧೇಶವಾಗಿದ್ದು, ಈ ಸಂಸ್ಥೆಯಲ್ಲಿ ಓದುತ್ತಿರುವ ಮಕ್ಕಳಿಗೆ ಉದ್ಯೋಗಾವಕಾಶಗಳು ಸಿಗುವುದು ಖಚಿತವೆಂದು ಉಪಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಅಶ್ವತ್ಥ್ ನಾರಾಯಣ ಹೇಳಿದರು. ಮಂಗಳವಾರದಂದು ತಾಲೂಕಿನ ಅರಭಾವಿ ಪಟ್ಟಣದ ನಾಡ …

Read More »

ಹಾಲುಮತ ಬಂಧುಗಳ ಎಸ್.ಟಿ ಹೋರಾಟದ ಪೂರ್ವಭಾವಿ ಸಭೆ

ಮೂಡಲಗಿ: ನಂ 29 ರಂದು ಬಾಗಕೋಟೆಯಲ್ಲಿ ಜರುಗಲಿರುವ ಎಸ್.ಟಿ ಮೀಸಲಾತಿ ಹೋರಾಟದ ಸಲುವಾಗಿ ಮೂಡಲಗಿ ತಾಲೂಕಿನ ಹಾಲುಮತ ಬಂಧುಗಳ ಪೂರ್ವಭಾವಿ ಸಭೆಯನ್ನು ನಂ. 25 ಬುಧವಾರ ರಂದು 10:00 ಘಂಟೆಗೆ ಸ್ಥಳೀಯ ಶ್ರೀ ಶಿವಬೋಧರಂಗ ಅರ್ಬನ್ ಕೋ ಆಪ್ ಬ್ಯಾಂಕನಲ್ಲಿ ಕರೆಯಲಾಗಿದೆ ಎಂದು ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ಎಸ್.ಎಸ್ ಪಾಟೀಲ, ಕಾರ್ಯದರ್ಶಿ ಭೀಮಶಿ ಮಗದುಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪೂರ್ವಭಾವಿ ಸಭೆಯಲ್ಲಿ ರಾಜ್ಯ ಎಸ್.ಟಿ ಹೋರಾಟ ಸಮೀತಿ ಪ್ರಧಾನ ಕಾರ್ಯದರ್ಶಿ …

Read More »

ಮೂಡಲಗಿ: ಶ್ರೀ ಸಾಯಿ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಎಸ್‍ಜಿ ಢವಳೇಶ್ವರ ಅವರಿಗೆ ಸನ್ಮಾನ

ಮೂಡಲಗಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಹಕಾರದೊಂದಿಗೆ ರೈತರಿಗೆ ಅನುಕೂಲುವಾಗುವ ನಿಟ್ಟಿನಲ್ಲಿ ಮತ್ತು ಸಹಕಾರಿ ಸಂಘಗಳ ಪ್ರಗತಿಗೆ ಶ್ರಮಿಸುವುದಾಗಿ ಹಾಗೂ ಸಾಯಿ ಸೌಹಾರ್ದ ಸಹಕಾರಿಯ ಮಾರ್ಗದರ್ಶಕ ಹಾಗೂ ಮುಖಂಡರಾದ ವೀರಣ್ಣ ಹೊಸೂರ ನೇತೃತ್ವದಲ್ಲಿ ಮೂಡಲಗಿಯಲ್ಲಿ ಇನ್ನೊಂದು ಕೃಷಿ ಪತ್ತಿನ ಸಹಕಾರಿ ಸಂಘ ಸ್ಥಾಪನೆ ಮಾಡುವುದಾಗಿ ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ,ಹಾಗೂ ದಿ.ಮೂಡಲಗಿ ಸಹಕಾರಿ ಬ್ಯಾಂಕ ಅಧ್ಯಕ್ಷ ಸುಭಾಸ ಢವಳೇಶ್ವರ ಹೇಳಿದರು. ಅವರು ಸೋಮವಾರ ಪಟ್ಟಣದ ಶ್ರೀ ಸಾಯಿ ಸೌಹಾರ್ದ ಸಹಕಾರಿ …

Read More »

ಶಿಕ್ಷಣದಿಂದ ಮಾತ್ರ ಸಮಾಜದ ಪರಿವರ್ತನೆ ಸಾಧ್ಯ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ಧೇಶದಿಂದ ಅಖಂಡ ಗೋಕಾಕ ತಾಲೂಕಿನಲ್ಲಿ ಇಲ್ಲಿಯವರೆಗೆ 15 ವಸತಿ ಶಾಲೆಗಳನ್ನು ಪ್ರಾರಂಭಿಸಿದ್ದು, ಇದರ ಮೂಲಕ ಬಡ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಪೂರಕವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ತಾಲೂಕಿನ ಅರಭಾವಿ ಪಟ್ಟಣದ ನಾಡಕಛೇರಿ ಬಳಿ ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅನುದಾನದಡಿ ಮಂಜೂರಾದ 20.50 ಕೋಟಿ …

Read More »

ಹಿಡಕಲ್ ಜಲಾಶಯದಿಂದ ಇಂದಿನಿಂದ 15 ದಿನಗಳವರೆಗೆ 6.80 ಟಿಎಂಸಿ ನೀರು ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಘಟಪ್ರಭಾ : ಹಿಡಕಲ್ ಜಲಾಶಯದಿಂದ ಇಂದಿನಿಂದ 15 ದಿನಗಳವರೆಗೆ ರೈತರ ಕೃಷಿ ಜಮೀನುಗಳಿಗೆ ನೀರು ಹಾಯಿಸಲು 6.80 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಈ ಬಗ್ಗೆ ಅಧಿಕಾರಿಗಳಿಗೆ ಆದೇಶ ನೀಡಿದ್ದು, ಶನಿವಾರ ಬೆಳಿಗ್ಗೆ 10.30 ಗಂಟೆಗೆ ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆಯಾಗಿದೆ ಎಂದು ಅವರು …

Read More »

ಭಕ್ತರ ಆಚರಣೆಗಳಿಂದ ಜಂಗಮ ಸಂಸ್ಕøತಿ ಉಳಿಯುತ್ತದೆ : ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ

ಮೂಡಲಗಿ: ‘ಶುದ್ಧವಾದ ಭಕ್ತಿ ಹಾಗೂ ಭಕ್ತರ ಧಾರ್ಮಿಕ ಆಚರಣೆಗಳಿಂದ ಜಂಗಮ ಸಂಸ್ಕøತಿಯು ಉಳಿಯುತ್ತದೆ’ ಎಂದು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಅಕಾಲಿಕವಾಗಿ ಇತ್ತಿಚೆಗೆ ನಿಧನರಾದ ಸ್ಥಳೀಯ ಕುರುಹಿನಶೆಟ್ಟಿ ಕೋ.ಆಪ್ ಸೊಸೈಟಿ ನಿರ್ದೇಶಕ ಸದಾಶಿವ ಶೀಲವಂತ ಅವರಿಗೆ ಏರ್ಪಡಿಸಿದ್ದ ನುಡಿ ನಮನ ಮತ್ತು ಸ್ವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು ಶ್ರದ್ಧೆ, ಭಕ್ತಿ ಮತ್ತು ಆಚಾರ ಇವು ಶಾಶ್ವತ ಮೌಲ್ಯಗಳಾಗಿವೆ ಎಂದರು. ಆಧುನಿಕತೆಯ …

Read More »

ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ

ಬೆಳಗಾವಿ : ಕಳೆದ ವರ್ಷ ಪ್ರವಾಹ ಹಾಗೂ ನಿರಂತರ ಮಳೆಯಿಂದ ಹಾನಿಗೀಡಾಗಿರುವ ಸಂತ್ರಸ್ತರ ಕುಟುಂಬಗಳಿಗೆ 15 ದಿನಗಳೊಳಗಾಗಿ ವಸತಿ ಸೌಕರ್ಯ ಕಲ್ಪಿಸಿಕೊಡುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜಿಲ್ಲಾಧಿಕಾರಿಗಳನ್ನು ಕೋರಿದರು. ನಗರದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಅವರು, ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ನೆರೆ ಸಂತ್ರಸ್ತರ ಬೇಡಿಕೆಗಳಿಗೆ ಸ್ಪಂದಿಸಿ ತಕ್ಷಣ ಪರಿಹಾರ ಕಂಡುಕೊಳ್ಳಬೇಕೆಂದು ಅವರು ಹೇಳಿದರು. 2019 ರ ಅಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ …

Read More »

ವಿಧಾನಮಂಡಲ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿ – ಶಿವರಡ್ಡಿ

ಮೂಡಲಗಿ: ‘ಮರಾಠ ಅಭಿವೃದ್ದಿ ಪ್ರಾಧಿಕಾರ ರಚಿಸಿರುವ ರಾಜ್ಯ ಸರ್ಕಾರ, ಭಾಷೆಯ ವರ್ಗಿಕರಣ ಕೈ ಬಿಟ್ಟು ಕನ್ನಡಿಗರಪರ ಸರ್ಕಾರವೆಂದು ಸಾಬೀತು ಪಡಿಸುವುದಕ್ಕೆ ಮುಂದಾಗಲಿ ಹಾಗೂ ಈ ಬಾರಿಯ ಛಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿಯೇ ನಡೆಸಲಿ ಎಂದು ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಮುಖಂಡ ಶಿವರಡ್ಡಿ ಹುಚರಡ್ಡಿ ಹೇಳಿದರು. ಬುಧವಾರ ಪ್ರೆಸ್‍ಕ್ಲಬ್ ಕಾರ್ಯಾಲಯದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಾಠ ಸಮುದಾಯದ ಅಭಿವೃದ್ದಿಗಾಗಿ ಅಭಿವೃದ್ದಿ ಪ್ರಾಧಿಕಾರ ರಚಿಸಿದಂತೆ ಇನ್ನುಳಿದ ಸಮುದಾಯಗಳಿಗೂ ಪ್ರಾಧಿಕಾರ ರಚಿಸಲಿ. …

Read More »

You cannot copy content of this page