ವಿಧಾನಮಂಡಲ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿ – ಶಿವರಡ್ಡಿ
gcsteam
ನವೆಂಬರ್ 19, 2020
Recent Posts
473 Views
- ಮೂಡಲಗಿ: ‘ಮರಾಠ ಅಭಿವೃದ್ದಿ ಪ್ರಾಧಿಕಾರ ರಚಿಸಿರುವ ರಾಜ್ಯ ಸರ್ಕಾರ, ಭಾಷೆಯ ವರ್ಗಿಕರಣ ಕೈ ಬಿಟ್ಟು ಕನ್ನಡಿಗರಪರ ಸರ್ಕಾರವೆಂದು ಸಾಬೀತು ಪಡಿಸುವುದಕ್ಕೆ ಮುಂದಾಗಲಿ ಹಾಗೂ ಈ ಬಾರಿಯ ಛಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿಯೇ ನಡೆಸಲಿ ಎಂದು ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಮುಖಂಡ ಶಿವರಡ್ಡಿ ಹುಚರಡ್ಡಿ ಹೇಳಿದರು.
ಬುಧವಾರ ಪ್ರೆಸ್‍ಕ್ಲಬ್ ಕಾರ್ಯಾಲಯದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಾಠ ಸಮುದಾಯದ ಅಭಿವೃದ್ದಿಗಾಗಿ ಅಭಿವೃದ್ದಿ ಪ್ರಾಧಿಕಾರ ರಚಿಸಿದಂತೆ ಇನ್ನುಳಿದ ಸಮುದಾಯಗಳಿಗೂ ಪ್ರಾಧಿಕಾರ ರಚಿಸಲಿ. ಭಾಷಾವಾರು ಪ್ರಾಂತ್ಯಗಳನ್ನು ವಿಂಗಡನೆ ಮಾಡಿ ಸ್ಥಳೀಯ ಭಾಷೆ,ಸಾಹಿತ್ಯ, ಸಂಸ್ಕøತಿ, ಕಲೆ, ಇತಿಹಾಸ ಇತ್ಯಾದಿಗಳನ್ನು ಉಳಿಸಿ ಬೆಳೆಸಬೇಕಾದ ಸರ್ಕಾರಗಳು ರಾಜಕೀಯವಾಗಿ ಕೆಲವು ಸಮಸ್ಯೆಗಳನ್ನು ಸೃಷ್ಟಿಮಾಡಿ ಸಮಾಜದ ಸ್ವಾಸ್ಥ್ಯವನ್ನು ಕಲುಷಿತಗೊಳಿಸುತ್ತಿರುವುದು ದುರದೃಷ್ಟಕರವಾಗಿದೆ ಎಂದರು.
ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮರಾಠರಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚಿಸಿ 50 ಕೋಟಿ ರೂ ಅನುದಾನ ನೀಡಿರುವ ಸರಕಾರ ಮೊದಲು ಈಗಿರುವ ಪ್ರಾಧಿಕಾರದ ಮಂಡಳಿಗಳನ್ನು ಅಭಿವೃದ್ದಿ ಪಡಿಸಲು ಆದ್ಯತೆ ನೀಡಲಿ.
ಸರಕಾರ ಈ ಕುರಿತು ಇನ್ನೊಮ್ಮೆ ನುರಿತ ಅಧಿಕಾರಗಳ ತಂಡದೊಂದಿಗೆ ಸಮಾಲೋಚಿಸಿ ಮರಾಠ ಅಭಿವೃದ್ದಿ ಪ್ರಾಧಿಕಾರ ಕೈ ಬಿಡದಿದ್ದಲ್ಲಿ ನಾಡಿನ ಜನತೆಯ ಹಿತಾಸಕ್ತಿಗಾಗಿ ನಮ್ಮ ವೇದಿಕೆಯಿಂದ ಹೋರಾಟ ಮಾಡುವುದಾಗಿ ಹೇಳಿದರು.
ಗೋಷ್ಠಿಯಲ್ಲಿ ಸಂಘಟನೆಯ ತಾಲೂಕಾಧ್ಯಕ್ಷ ಶಿವನಗೌಡ ಪಾಟೀಲ,ವೆಂಕಟಾಪೂರ ಘಟಕದ ಅಧ್ಯಕ್ಷ ತಿಮ್ಮಣ್ಣ ಕೋಳಿಗುಡ್ಡ,ರಾಮಚಂದ್ರ ಮಳವಾಡ,ಅಪ್ಪಾಸಾಬ ನದಾಫ್ ಇದ್ದರು.