ಸೋಮವಾರ , ಜೂನ್ 5 2023
kn
Breaking News

ಭಕ್ತರ ಆಚರಣೆಗಳಿಂದ ಜಂಗಮ ಸಂಸ್ಕøತಿ ಉಳಿಯುತ್ತದೆ : ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ

Spread the love

ಮೂಡಲಗಿ: ‘ಶುದ್ಧವಾದ ಭಕ್ತಿ ಹಾಗೂ ಭಕ್ತರ ಧಾರ್ಮಿಕ ಆಚರಣೆಗಳಿಂದ ಜಂಗಮ ಸಂಸ್ಕøತಿಯು ಉಳಿಯುತ್ತದೆ’ ಎಂದು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅಕಾಲಿಕವಾಗಿ ಇತ್ತಿಚೆಗೆ ನಿಧನರಾದ ಸ್ಥಳೀಯ ಕುರುಹಿನಶೆಟ್ಟಿ ಕೋ.ಆಪ್ ಸೊಸೈಟಿ ನಿರ್ದೇಶಕ ಸದಾಶಿವ ಶೀಲವಂತ ಅವರಿಗೆ ಏರ್ಪಡಿಸಿದ್ದ ನುಡಿ ನಮನ ಮತ್ತು ಸ್ವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು ಶ್ರದ್ಧೆ, ಭಕ್ತಿ ಮತ್ತು ಆಚಾರ ಇವು ಶಾಶ್ವತ ಮೌಲ್ಯಗಳಾಗಿವೆ ಎಂದರು.
ಆಧುನಿಕತೆಯ ಒತ್ತಡದಲ್ಲಿ ಧಾರ್ಮಿಕ ಆಚರಣೆಗಳು ಕಡಿಮೆಯಾಗುತ್ತಿದ್ದು, ಶೀಲವಂತ ಕುಟುಂಬವು ಧಾರ್ಮಿಕ ಸಂಸ್ಕಾರಗಳನ್ನು ಉಳಿಸಿಕೊಂಡು ಬಂದಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಸುಣಧೋಳಿಯ ಶಿವಾನಂದ ಸ್ವಾಮೀಜಿ, ಕಕಮರಿಯ ಜಗದ್ಗುರು ಅಭಿನವ ಗುರುಲಿಂಗಜಂಗಮ ಸ್ವಾಮೀಜಿ ಆಶೀರ್ವಚನ ನೀಡಿ, ಇಂದು ನಡೆ, ನುಡಿ, ಸಂಸ್ಕಾರಗಳು ಮರೆಯಾಗುತ್ತಲಿವೆ. ಸದಾಶಿವ ಶೀಲವಂತ ಅವರು ಎಲ್ಲರಲ್ಲಿ ಒಂದಾಗಿ ಸರಳ, ಸಜ್ಜನ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು ಎಂದರು.
ಜನರಲ್ಲಿ ಭಕ್ತಿ ಉಳಿದರೆ ಮಾತ್ರ ಧರ್ಮ, ಆಧ್ಯಾತ್ಮಿಕ ಮತ್ತು ಸಂಸ್ಕಾರ ಉಳಿಯುತ್ತದೆ ಎಂದು ಶ್ರೀಗಳು ಹೇಳಿದರು.
ಬಳೋಬಾಳದ ಬಸವಯೋಗ ಮಂಟಪದ ಮಾತಾ ನೀಲಾಂಬಿಕಾದೇವಿ, ದುಪದಾಳದ ಬಸವಯೋಗ ಮಂಟಪದ ಸಂಗನಬಸವ ಸ್ವಾಮೀಜಿ, ಪ್ರಜಾಪಿತ ಬ್ರಹ್ಮಕುಮಾರ ರೇಖಾ ಅಕ್ಕನವರು, ಕಂಕಣವಾಡಿಯ ಮಾರುತಿ ಶರಣರು, ಮಾತೋಶ್ರೀ ದಾನಮ್ಮದೇವಿ, ಶಿವಪುತ್ರಯ್ಯ ಮಠಪತಿ, ನಾಗನೂರಿನ ಶರಣೆ ಕಾವ್ಯಶ್ರೀ ಆಧ್ಯಾತ್ಮಿಕ ಚಿಂತನದ ನುಡಿಗಳನ್ನು ಹೇಳಿದರು.
ಅಲ್ಲಪ್ಪ ಶೀಲವಂತ ಮತ್ತು ಮಾತೋಶ್ರೀ ಸುಮಿತ್ರಾ ಶೀಲವಂತ ಅವರ 11ನೇ ಪುಣ್ಯಸ್ಮರಣೆಯನ್ನು ಆಚರಿಸಿದರು.
ಕುರುಹಿನಶೆಟ್ಟಿ ಕೋ.ಆಪ್ ಸೊಸೈಟಿ ಅಧ್ಯಕ್ಷ ಬಸವಣ್ಣಿ ಮುಗಳಖೋಡ, ಬಣಜಿಗ ಸಮಾಜದ ಅಧ್ಯಕ್ಷ ಸಿ.ಎಸ್. ಅಂಗಡಿ, ನಿವೃತ್ತ ಶಿಕ್ಷಕ ಜಿ.ಕೆ. ಮುರಗೋಡ, ಪ್ರೊ. ಸಂಗಮೇಶ ಗುಜಗೊಂಡ, ಬಾಲಶೇಖರ ಬಂದಿ, ಮಹಾದೇವ ಹುನ್ನೂರ ನುಡಿನಮನ ಸಲ್ಲಿಸಿದರು.
ಗಾಯಕ ಶ್ರೀಕಾಂತ ನಾಯಕ, ಶ್ರೀಧರ ಪೀರೋಜಿ, ಆಕಾಶವಾಣಿ ಭಜನಾ ಕಲಾವಿದ ನಾಗೇಶ ಐಹೊಳೆ, ಅರ್ಜುನ ತುಪ್ಪದ, ಮಹಾಲಿಂಗಪ್ಪ ಮುಗಳಖೋಡ, ಶಿವಲಿಂಗಪ್ಪ ಮುಗಳಖೋಡ, ಮುತ್ತಪ್ಪ ಮುಗಳಖೋಡ, ಸತ್ಯಪ್ಪ ಮುಗಳಖೋಡ ಸ್ವರ ಶ್ರದ್ಧಾಂಜಲಿ ಅರ್ಪಿಸಿದರು.
ಎ.ವಿ. ಹೊಸಕೋಟಿ, ಭೀಮಶಿ ಗಡಾದ, ಶಂಕರ ತಾಂವಶಿ, ಶಿವಬಸು ನೀಲಣ್ಣವರ, ಸುಭಾಷ ಬೆಳಕೂಡ, ಇಸ್ಮಾಯಿಲ್ ಕಳ್ಳಿಮನಿ, ಪಾಂಡುರಂಗ ಭಸ್ಮೆ, ಬಸೆಟೆಪ್ಪ ಗಾಡವಿ, ಎನ್.ಟಿ. ಪಿರೋಜಿ, ವಿಜಯ ಸೋನವಾಲಕರ, ಪುಲಕೇಶ ಸೋನವಾಲಕರ, ವೆಂಕಟೇಶ ಸೋನವಾಲಕರ, ಶ್ರೀಶೈಲ್ ಲೋಕನ್ನವರ, ಸುಪ್ರೀತ ಸೋನವಾಲಕರ, ವಿದ್ಯಾಧರ ಗುಳ್ಳ, ಎಂ.ಆರ್. ಶೆಟ್ಟಿ, ರಮೇಶ ಒಂಟಗೂಡಿ, ಮಲ್ಲು ಢವಳೇಶ್ವರ, ಪ್ರಕಾಶ ಕಾಳಪ್ಪಗೋಳ, ಪ್ರಕಾಶ ಮುಧೋಳ, ಆನಂದ ಗಿರಡ್ಡಿ, ಗೋಪಾಲ ಪೀರೋಜಿ, ಕೃಷ್ಣಪ್ಪ ನಾಯಿಕ ಹಾಗೂ ಶೀಲವಂತ ಸಹೋದರರು ಭಾಗವಹಿಸಿದ್ದರು.


Spread the love

About gcsteam

Check Also

ಹಳೆಯ ಪಿಂಚಣಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ:ಬೀರಪ್ಪ ಅಂಡಗಿ

Spread the loveಕೊಪ್ಪಳ: ೧ನೇ ಏಪ್ರೀಲ್ ೨೦೦೬ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಲಾಗಿರುವ ನೂತನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page