ಬುಧವಾರ , ಅಕ್ಟೋಬರ್ 9 2024
kn
Breaking News

ಮಹಿಳೆಯರ ಸಾಧನಿಯ ಕಾರ್ಯ: ಪಾರ್ವತಿ ಮಲಗೌಡರ

Spread the love

ಅಥಣಿ : ಮಹಿಳಾ ಸಂಘಟನೆಗಳು ಸಾಧಕ ಮಹಿಳೆಯರನ್ನು ಗುರುತಿಸಿ ಗೌರವಿಸುವ ಸಂಪ್ರದಾಯ ಇತ್ತೀಚಿನ ವರುಷಗಳಲ್ಲಿ ‘ ಮಹಿಳಾ ದಿನಾಚರಣೆ ‘ ಸಂದರ್ಭದಲ್ಲಿ ಬೆಳೆದುಕೊಂಡು ಬರುತ್ತಿರುವುದು , ನಮ್ಮ ನಡುವಿನ ಅನೇಕ ಸೂಪ್ತ ಪ್ರತಿಭೆಯ ಸಾಧಕಿಯರನ್ನು ಗುರುತಿಸಿ ಪ್ರೋತ್ಸಾಹಿ ಸ್ಪೂರ್ತಿತುಂಬುವ ಕಾರ್ಯ ವಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಆಥಣಿ ಬಿಸಿಎಂ ವಿದ್ಯಾರ್ಥಿನಿಯರ ವಸತಿ ಮೇಲ್ವಿಚಾರಕಿ ಪಾರ್ವತಿ ಎಸ್ . ಮಲಗೌಡರ ನಿಲಯದ ಅಭಿಪ್ರಾಯಪಟ್ಟರು .
ಅಖಿಲ ಭಾರತ ವೀರಶೈವ ಮಹಿಳಾ ಘಟಕ , ಸಿರಿಗನ್ನಡ ವೇದಿಕೆ ಹಾಗೂ ಲೇಖಕಿಯರ ಸಂಘ ಅಥಣಿ ಘಟಕಗಳ ಸಹಯೋಗದಲ್ಲಿ ಅಥಣಿಯ ಬಿಸಿಎಂ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಎರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಸಂಘಟನೆಗಳ ಸನ್ಮಾನ ಸ್ವೀಕರಿಸಿ ಮೇಲಿನಂತೆ ಮಾತನಾಡಿದರು . ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಭಾವಿ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಡಾ.ಪ್ರಿಯಂವದಾ ಹುಲಗಬಾಳಿ ಅವರು ಮಾತನಾಡಿ ವಿದ್ಯಾರ್ಥಿನಿಯವರು ಉತ್ತಮ ಓದು , ನಡತೆಯಿಂದ ಜ್ಞಾರ್ನಾಜಿಸಿಕೊಂಡು ಸಾಧನೆಯ ಗುರಿಯಲ್ಲಿ ಲಿಂಗ ಸಮಾನತೆಯಡಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದರು . ಇನ್ನೋರ್ವ ಅತಿಥಿಗಳಾಗಿ ಸಿರಿಗನ್ನಡ ವೇದಿಕೆ ಅಥಣಿ ಘಟಕದ ಅಧ್ಯಕ್ಷೆ ರೋಹಿಣಿ ಯಾದವಾಡ ಮಾತನಾಡಿ ಲಿಂಗಸಮಾನತೆ ಈ ವರುಷದ ನೋಡಿದರೆ ಘೋಷಣೆಯಾಗಿರುವುದು ಹನ್ನೆರಡನೆ ಶತಮಾನದಲ್ಲಿಯೇ ಇದನ್ನು ಬಸವಾದಿ ಶಿವಶರಣರು ಸಾಧಿಸಿದ್ದಾರೆ ಒಂಬತ್ತುನೂರು ವರುಷಗಳ ನಂತರವೂ ಅದಕ್ಕಾಗಿಯೇ ಹೊರಾಡುತ್ತಿರುವದು ವಿಪರ್ಯಾಸ ಎಂದರು . ಲೇಖಕಿಯರ ಸಂಘದ ಅಧ್ಯಕ್ಷೆ ಪ್ರಭಾವತಿ ಬೋರಗಾಂವಕರ ದೇಶದ ಮೊಟ್ಟಮೊದಲ ಶಿಕ್ಷಕಿ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ ಜೀವನಸಾಧನೆ ಕುರಿತು ಮಾತನಾಡಿದರು . ಸರೋಜಾ ಕಲ್ಯಾಣಿ ಸಮಾನತೆ ಮಹಿಳಾ ಕುರಿತು ಮಾತನಾಡಿದರು . ಅಭಾವೀ ಅಧ್ಯಕ್ಷತೆಯನ್ನು ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಶೈಲಾ ನೇಮಗೌಡ ವಹಿಸಿದ್ದರು . ಸಮಾರಂಭದಲ್ಲಿ ಘಟಕಗಳ ಸದಸ್ಯರಾದ ವಿಶಾಲಾಕ್ಷಿ ಅಂಬಿ , ಯಶೋಧಾ ಕುಲಗೋಡೆ , ಭಾಗಶ್ರೀ ಕಮತಗಿ , ಶ್ವೇತಾ ಅಣೆಪ್ಪನವರ , ಶಶಿಕಲಾ ಹರ್ತಿ , ಸುಧಾ ಆಣೆಪ್ಪನವರ , ಅರ್ಚನಾ ಭೂಸನೂರ , ದೀಪಾ ಚೊಳ್ಳಿ , ಇರಾವತಿ ಕವಲಾಪೂರ , ಭಾರತಿ ಕೋರಿ ಇತರರು ಉಪಸ್ಥಿತರಿದ್ದರು . ಈ ಸಮಯದಲ್ಲಿ ನಿಲಯ ವಿಧ್ಯಾರ್ಥಿನಿಯರಾದ ಸೌಮ್ಯ ಸಕಲಕನವರ ಹಾಗೂ ಪ್ರಿಯಾ ಮಾಳಿ ಇವರಿಂದ ಪ್ರಾರ್ಥನೆ , ಸ್ವಾಗತಗೀತೆಯಾಯಿತು . ಭವಾನಿ ಹುಡೇದ ರೂಪಾ ಮಾಳಿ ಮಹಿಳಾ ಹಾಗೂ ದಿನಾಚರಣೆ ಔಚಿತ್ಯ ಕುರಿತು ಮಾತನಾಡಿದರು . ಪ್ರಿಯಾಂಕ ಪೂಜಾರಿ ಜಾನಪದ ಗೀತೆ ಹಾಡಿದರು . ಎಲ್ಲ ವಿದ್ಯಾರ್ಥಿನಿಯರಿಗೆ ವಚನ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಲಾಯಿತು . ಪ್ರೀತಿ ನಿಲಜಗಿ ಸ್ವಾಗತಿಸಿದಳು , ರುಚಿತಾ ಕಾಂಬಳೆ ವಂದಿಸಿದಳು , ಬಿ.ಎಡ್ ಪ್ರಶಿಕ್ಷಣಾರ್ಥಿ ದರ್ಶನ


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page