ಗೋಕಾಕ : ಮೂಡಲಗಿ ವಲಯದ ತಪಸಿ ಮತ್ತು ಗೋಸಬಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಪಸಿ ಮತ್ತು ಗೋಸಬಾಳ ಗ್ರಾಮಸ್ಥರ ಒತ್ತಾಸೆಯಂತೆ ಎರಡೂ ಹಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ ಪ್ರೌಢ ಶಾಲೆಗಳನ್ನಾಗಿ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ತಮ್ಮ ಮನವಿಯ ಮೇರೆಗೆ ಮೂಡಲಗಿ ವಲಯದಲ್ಲಿರುವ ತಪಸಿ ಮತ್ತು …
Read More »Yearly Archives: 2022
ಪ್ರಾದ್ಯಾಪಕ ಹಾಗೂ ಪ್ರಾಚಾರ್ಯ ವೃತ್ತಿ ನನ್ನ ಬದುಕಿನಲ್ಲಿ ಸಂತ್ರಪ್ತಿ ಜಿವನ ಒದಗಿಸಿದೆ: ಡಾ. ಶಾಸ್ತ್ರಿಮಠ
ಮೂಡಲಗಿ: ನನ್ನ ಬುದುಕಿನಲ್ಲಿ ಸುದೀರ್ಘ ೩೭ ವರ್ಷಗಳ ಕಾಲ ಪ್ರಾಧ್ಯಾಪಕ ಹಾಗೂ ಪ್ರಾಚಾರ್ಯ ವೃತ್ತಿ, ಬದುಕಿನಲ್ಲಿ ನನಗೆ ಸಂತ್ರಪ್ತಿ ಹಾಗೂ ನೇಮ್ಮದಿಯ ಜಿವನವನ್ನು ಒದಗಿಸಿತು ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಆರ್.ಎ.ಶಾಸ್ತ್ರಿಮಠ ಅಭಿಪ್ರಾಯಪಟ್ಟರು. ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸುದಿರ್ಘ ೩೭ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಮತ್ತು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ …
Read More »ರೈತರ ನೀರಿನ ಸಮಸ್ಯೆ ನೀಗಿಸಲು ಶಾಶ್ವತ ಪರಿಹಾರ: ಶಾಸಕ ಪಿ.ರಾಜೀವ್
ಹಳ್ಳೂರ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಭಾಗದ ವತಿಯಿಂದ ಮರಾಕುಡಿ ಗ್ರಾಮದ ಹಳ್ಳಕ್ಕೆ ಸರಣಿ ಚೆಕ್ ಡ್ಯಾಮ್ ನಿರ್ಮಿಸುವುದು ಹಾಗೂ ಏತ ನೀರಾವರಿ ಯೋಜನೆ ಮೂಲಕ ಚೆಕ್ ಡ್ಯಾಂ ತುಂಬಿಸುವ ಕಾಮಗಾರಿಗೆ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕುಡಚಿ ಶಾಸಕ ಪಿ.ರಾಜೀವ್ ಶಂಕು ಸ್ಥಾಪನೆ ನೇರವೇರಿಸಿದರು. ಮರಾಕುಡಿ ಗ್ರಾಮದಲ್ಲಿ ಶನಿವಾರರಂದು ನಡೆದ ಬ್ರಿಜ್ ಕಮ್ ಬ್ಯಾರೇಜ್ ಹಾಗೂ ಚೆಕ್ಕ ಡ್ಯಾಮ್ ಕಾಮಗಾರಿಗಳ ಶಂಕು ಸ್ಥಾಪನಾ ಸಮಾರಂಭದ …
Read More »ಪತ್ರಿಕಾರಂಗವು ಒಂದಿಷ್ಟು ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಸ್ವಯಂ ಪರಿವೀಕ್ಷಣೆ, ಸ್ವಯಂ ನಿಯಂತ್ರಣದಲ್ಲಿರಲಿ: ಜ್ಯೋತಿ ಪಾಟೀಲ
ಮೂಡಲಗಿ: ನಮ್ಮದು ದೊಡ್ಡ ಪ್ರಜಾಪ್ರಭುತ್ವ ಅದರಲ್ಲಿ ಮಾಧ್ಯಮ ನಾಲ್ಕನೆಯ ಅಂಗ. ಪತ್ರಿಕಾರಂಗವು ಒಂದಿಷ್ಟು ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಸ್ವಯಂ ಪರಿವೀಕ್ಷಣೆ, ಸ್ವಯಂ ನಿಯಂತ್ರಣದಲ್ಲಿ ಇರಬೇಕು ಎಂದು ಮೂಡಲಗಿ ದಿವಾಣಿ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಧೀಶೆ ಜ್ಯೋತಿ ಪಾಟೀಲ ಹೇಳಿದರು. ಅವರು ಪಟ್ಟಣದ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಆವರಣದಲ್ಲಿ ಮೂಡಲಗಿ ತಾಲೂಕಾ ಪತ್ರಿಕಾ ಬಳಗ,ಮೂಡಲಗಿ ತಾಲೂಕು ಪ್ರೆಸ್ ಅಸೋಸಿಯೇಷನ್, ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘ, ಶ್ರೀ …
Read More »ಪ್ರ.ಕಾರ್ಯದರ್ಶಿಯಿಂದ ಅರಬಾವಿ ಕ್ಷೇತ್ರಕ್ಕೂ ತಟ್ಟಿತು: ಬಾಜಪ ಪದಾಧಿಕಾರಿಯ ರಾಜಿನಾಮೆ ಬಿಸಿ
ಮೂಡಲಗಿ: ರಾಜ್ಯದಲ್ಲಿ ಹಿಂದೂಪರ ಸರ್ಕಾರ ಎನಿಸಿಕೊಳ್ಳುವ, ಬಾಜಪ ಸರ್ಕಾರ ಅಧಿಕಾರದಲ್ಲಿದ್ದರೂ ಕಳೆದ ಹತ್ತು ದಿನಗಳಲ್ಲಿ ಮೂರು ಹತ್ಯೆಗಳಾಗಿರುವುದು ರಾಜ್ಯ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿರೊದನ್ನ ಅಲ್ಲಗಳಿಯುವಂತಿಲ್ಲಾ. ಇದೆ ಸಂಧರ್ಬದಲ್ಲಿ ಸರ್ಕಾರದ ನಡುವಳಿಕೆಗೆ ಬೇಸತ್ತು, ರಾಜ್ಯದಲ್ಲಿ ಕಳೇದ ದಿನಗಳಿಂದ ಆಗಿರುವಂತಹ ಬೀಕರ ಹತ್ಯಗಳನ್ನ ಖಂಡಿಸಿ, ರಾಜ್ಯದ ಬಾಜಪ ಹಲವಾರು ಕಾರ್ಯಕರ್ತರು, ಪದಾಧಿಕಾರಿಗಳು ರಾಜಿನಾಮೆ ನೀಡಿರುವುದು ಸರ್ಕಾರಕ್ಕೆ ಎಚ್ಚರಿಕೆಯ ಘಂಟೆಯಾಗಿದೆ. ಅರಭಾವಿ ಕ್ಷೇತ್ರದ ಬಾಜಪ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ಮಹಾಂತೇಶ ಕುಡಚಿ ಎಂಬುವವರು …
Read More »ತುಕ್ಕಾನಟ್ಟಿ ಸರ್ಕಾರಿ ಶಾಲೆಯ ಕಾರ್ಯವೈಖರಿ ಶ್ಲಾಘನೀಯ- ಜಿ.ಪಂ.ಸಿ.ಇ.ಒ. ದರ್ಶನ್
ಮೂಡಲಗಿ: ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಹೊಂದಿದಲ್ಲಿ ಮಾತ್ರ ಉತ್ತಮ ಶಿಕ್ಷಣ ಪಡೆಯಲು ಸಾದ್ಯ. ಈ ನಿಟ್ಟಿನಲ್ಲಿ ತುಕ್ಕಾನಟ್ಟಿಯ ಸರ್ಕಾರಿ ಶಾಲೆಯ ಕಾರ್ಯವೈಖರಿ ತುಂಬಾ ಶ್ಲಾಘನೀಯವಾಗಿದೆ ಎಂದು ಬೆಳಗಾವಿ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಹೇಳಿದರು. ಅವರು ತುಕ್ಕಾನಟ್ಟಿ ಶಾಲೆಯಲ್ಲಿ ಪ್ರಧಾನಮಂತ್ರಿ ಪೋಷನ್ ಶಕ್ತಿ ನಿರ್ಮಾಣ ಯೋಜನೆಯಡಿ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ವಿತರಿಸಿ ಹಾಗೂ ತರಗತಿಗಳನ್ನು ವೀಕ್ಷ್ಷಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕಾಂಶವುಳ್ಳ ಆಹಾರವನ್ನು ಮದ್ಯಾಹ್ನದ ಬಿಸಿಯೂಟದೊಂದಿಗೆ ಒದಗಿಸುವ …
Read More »ಶಾಲಾಭಿವೃದ್ಧಿ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಉತ್ತಮವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು : ದರ್ಶನ್ ಎಚ್. ವಿ
ಮೂಡಲಗಿ: ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಶಾಲಾಭಿವೃದ್ಧಿ ಕಾಮಗಾರಿಗಳನ್ನು ಬುಧವಾರ ಜಿಪಂ ಸಿಇಒ ದರ್ಶನ್ ಎಚ್.ವಿ. ಅವರು ಭೇಟಿ ನೀಡಿ ಪರಿಶೀಲಿಸಿದರು. ರಾಜಾಪುರ, ತುಕ್ಕಾನಟ್ಟಿ, ಗುಜನಟ್ಟಿ, ಹಳ್ಳೂರ, ಶಿವಾಪುರ ಎಚ್, ಖಾನಟ್ಟಿ, ಮುಸಗುಪ್ಪಿ ಗ್ರಾಮ ಪಂಚಾಯತ್ ಗಳಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಆಟದ ಮೈದಾನ, ಶೌಚಾಲಯ, ಕಂಪೌಂಡ, ಪೇವರ್ಸ್, ಭೋಜನಾಲಯ ಸೇರಿದಂತೆ ಶಾಲಾ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸಿಇಒ ದರ್ಶನ್ ಎಚ್.ವಿ. …
Read More »ಸದೃಢ ಶರೀರ ರೂಪಗೊಳ್ಳುವ ನಿಟ್ಟಿನಲ್ಲಿ ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ಮಾತ್ರ ಸಾಧ್ಯ : ಅಶೋಕ ಮಲಬನ್ನವರ
ಮೂಡಲಗಿ: ಸರಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಉತ್ತಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳಬೇಕು. ಸದೃಢ ಶರೀರ ರೂಪಗೊಳ್ಳುವ ನಿಟ್ಟಿನಲ್ಲಿ ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ಮಾತ್ರ ಸಾಧ್ಯವಾಗುವದು ಎಂದು ಮೂಡಲಗಿ/ಗೋಕಾಕ ತಾಪಂ ಸಹಾಯಕ ಮದ್ಯಾಹ್ನ ಉಪಹಾರ ಯೋಜನೆ ಸಹ ನಿರ್ದೇಶಕ ಅಶೋಕ ಮಲಬನ್ನವರ ಹೇಳಿದರು. ಅವರು ಗುರುವಾರ ಪಟ್ಟಣದ ಕೆ.ಎಚ್.ಎಸ್ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ ಪ್ರಧಾನ ಮಂತ್ರಿ ಪೋಷನ್ ಶಕ್ತಿ ನಿರ್ಮಾಣ ಯೋಜನೆಯಡಿ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆ ಹಣ್ಣು, …
Read More »ಪ್ರತಿ ಮನೆಗೆ ಒಬ್ಬರಂತೆ ಯೋಧರಾಗಬೇಕು : ನಿವೃತ್ತ ಕರ್ನಲ್ ಪ್ರಭಾಕರ ದಳವಾಯಿ
ಮೂಡಲಗಿ:ಸದೃಡ ದೇಶ ನಿರ್ಮಾಣಕ್ಕೆ ಯೋಧರ ಪಾತ್ರ ಮುಖ್ಯವಾಗಿದೆ ಯುವಕರು ದುಶ್ಚಟಕ್ಕೆ ಒಳಗಾಗದೇ ದೇಶದ ರಕ್ಷಣೆಗೆ ಮುಂದಾಗಬೇಕು,ಪ್ರತಿ ಮನೆಗೆ ಒಬ್ಬರಂತೆ ಯೋಧರು ರಡಿಯಾಗಬೇಕು ಎಂದು ನಿವೃತ್ತ ಕರ್ನಲ್ ಪ್ರಭಾಕರ ದಳವಾಯಿ ಆಶಯ ವ್ಯಕ್ತಪಡಿಸಿದರು. ಮಂಗಳವಾರ ಜು-೨೬ ರಂದು ಕಲ್ಲೋಳಿ ಪಟ್ಟಣದಲ್ಲಿ ಮೂಡಲಗಿ ತಾಲೂಕ ಮಾಜಿ ಸೈನಿಕರ ಸಂಘ ಆಯೋಜಿಸಿದ ಕಾರ್ಗಿಲ್ ವಿಜಯೋತ್ಸವವನ್ನು ಹುತಾತ್ಮ ಯೋಧ ಜೋತೆಪ್ಪ ಗುಂಡಪ್ಪಗೋಳ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು ನಂತರ ಮಾತನಾಡಿದ ದಳವಾಯಿ …
Read More »ಶಿಕ್ಷಣದ ಜೊತೆಗೆ ನೈತಿಕ ಮೌಲ್ಯ ಅಳವಡಿಸಿಕೊಂಡು ಶ್ರದ್ಧೆ, ನಿಷ್ಠೆಯಿಂದ ಓದಿ ಸಫಲರಾಗಬೇಕು : ಡಾ. ಸಂಜಯ ಶಿಂಧಿಹಟ್ಟಿ
ಮೂಡಲಗಿ: ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ನೈತಿಕ ಮೌಲ್ಯ ಅಳವಡಿಸಿಕೊಂಡು ಶ್ರದ್ಧೆ, ನಿಷ್ಠೆಯಿಂದ ಓದಿ ಸಫಲರಾಗಬೇಕು ಎಂದು ಕಸಪಾ ತಾಲೂಕಾ ಘಟಕದ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಹೇಳಿದರು. ಪಟ್ಟಣದ ಕೆ.ಎಚ್.ಸೋನವಾಲ್ಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಹಾಗೂ ೮ನೇ ವರ್ಗದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡಪ್ರಭದ ಯುವ …
Read More »