ಸೋಮವಾರ , ಜೂನ್ 5 2023
kn
Breaking News

ಪ್ರಾದ್ಯಾಪಕ ಹಾಗೂ ಪ್ರಾಚಾರ್ಯ ವೃತ್ತಿ ನನ್ನ ಬದುಕಿನಲ್ಲಿ ಸಂತ್ರಪ್ತಿ ಜಿವನ ಒದಗಿಸಿದೆ: ಡಾ. ಶಾಸ್ತ್ರಿಮಠ

Spread the love

ಮೂಡಲಗಿ: ನನ್ನ ಬುದುಕಿನಲ್ಲಿ ಸುದೀರ್ಘ ೩೭ ವರ್ಷಗಳ ಕಾಲ ಪ್ರಾಧ್ಯಾಪಕ ಹಾಗೂ ಪ್ರಾಚಾರ್ಯ ವೃತ್ತಿ, ಬದುಕಿನಲ್ಲಿ ನನಗೆ ಸಂತ್ರಪ್ತಿ ಹಾಗೂ ನೇಮ್ಮದಿಯ ಜಿವನವನ್ನು ಒದಗಿಸಿತು ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಆರ್.ಎ.ಶಾಸ್ತ್ರಿಮಠ ಅಭಿಪ್ರಾಯಪಟ್ಟರು.
ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸುದಿರ್ಘ ೩೭ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಮತ್ತು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಹಾಗೂ ಅವರ ಅಭಿಮಾನಿ ಬಳಗದವರು ಎರ್ಪಡಿಸಿದ ಸತ್ಕಾರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿ ಅವರು, ಮುಡಲಗಿ ಶಿಕ್ಷಣ ಸಂಸ್ಥೆ ನನಗೆ ಪ್ರಾಧ್ಯಾಪಕ ವೃತ್ತಿ ಪ್ರಾಚಾರ್ಯ ಹುದ್ದೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಸೇವೆ ಸಲ್ಲಿಸುವ ಅವಕಾಶಕೊಟ್ಟು ಬೆಳೆಸಿತು. ಶಿಕ್ಷಣ ಸಂಸ್ಥೆಯ ಋಣ ನನ್ನ ಜೀವನ ಇರುವವರೆಗೆ ಮರೆಯುವದಿಲ್ಲ ಹಾಗೂ ಅದಕ್ಕೆ ಸದಾ ಚಿರಋಣಿಯಾಗಿರುತ್ತೆನೆ ಎಂದರು.
ಪ್ರೊ.ಸಂಜಯ ಖೋತ ಮಾತನಾಡಿ, ಪ್ರಾಚಾರ್ಯ ಡಾ.ಆರ್.ಎ.ಶಾಸ್ತ್ರಿಮಠ ಅವರು ಶಿಸ್ತು ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸಿದರು ಎಂದರು. ಗ್ರಂಥಪಾಲಕ ಬಸವಂತ ಬರಗಾಲಿ ಮಾತನಾಡಿ, ಡಾ. ಶಾಸ್ತ್ರಿಮಠ ಅವರು ಕಾಲೇಜಿನ ಸಿಬ್ಬಂದಿಯೊAದಿಗೆ ಆತ್ಮೀಯ ಒಡನಾಟ ಹೊಂದಿ ಕೆಲಸ ಕಾರ್ಯಗಳನ್ನು ಮಾಡಿಸುವ ಕಲೆ ಮೈಗೂಡಿಸಿಕೊಂಡಿದ್ದರು ಎಂದರು.
ಹಳೇ ವಿದ್ಯಾರ್ಥಿ ಶ್ರೀಶೈಲ್ ನೇಮಗೌಡ್ರ ಮತ್ತು ಪ್ರೊ.ಸಂಗಮೇಶ ಗುಜಗೊಂಡ ಮಾತನಾಡಿದರು.
ಸಂಸ್ಥೆಯ ಚೇರಮನ್ನ ವಿಜಯಕುಮಾರ ಸೋನವಾಲ್ಕರ, ಉಪಾಧ್ಯಕ್ಷ ಎಸ್.ಆರ್.ಸೋನವಾಲ್ಕರ ಮತ್ತು ನಿರ್ದೇಶಕರಾದ ವೀರಣ್ಣಾ ಹೊಸುರ, ಆರ.ಪಿ.ಸೊನವಲ್ಕರ, ಬಿ.ಎಚ್.ಸೋನವಾಲ್ಕರ, ಪ್ರದೀಪ ಲಂಕೆಪ್ಪನವರ, ಅನೀಲ ಸತರಡ್ಡಿ ಅವರು ಡಾ. ಶಾಸ್ತ್ರಿಮಠ ಅವರನ್ನು ಸತ್ಕರಿಸಿ ಗೌರವಿಸಿದರು.
ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಡಾ.ಬಿ.ಸಿ.ಪಾಟೀಲ, ಮಲ್ಲಪ್ಪ ನೇಮಗೌಡ್ರ, ಎಸ್.ಬಿ.ಕದಂ, ಬಾಲಶೇಖರ ಬಂದಿ ಮತ್ತಿತರು ಇದ್ದರು. ಐಶ್ವರ್ಯ ತಳವಾರ ಪ್ರಾರ್ಥಿಸಿದಳು, ನಿಯೋಜಿತ ಪ್ರಾಚಾರ್ಯ ಪ್ರೊ.ಎ.ಪಿ.ರಡ್ಡಿ ಸ್ವಾಗತಿಸಿದರು, ಪ್ರೊ.ಎಸ್.ಜಿ.ನಾಯಿಕ ನಿರೂಪಿಸಿದರು, ಪ್ರೊ.ಎಸ್.ಎಲ್.ಚಿತ್ರಗಾರ ವಂದಿಸಿದರು.


Spread the love

About gcsteam

Check Also

ಹಳೆಯ ಪಿಂಚಣಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ:ಬೀರಪ್ಪ ಅಂಡಗಿ

Spread the loveಕೊಪ್ಪಳ: ೧ನೇ ಏಪ್ರೀಲ್ ೨೦೦೬ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಲಾಗಿರುವ ನೂತನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page