ಮೂಡಲಗಿ: ದಿ. ವಾಯ್ ಎಲ್ ಸಣ್ಣಕ್ಕಿ ಮೆಮೋರಿಯಲ್ ಟ್ರಸ್ಟ ಕೌಜಲಗಿ ವತಿಯಿಂದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಕೊರೋನಾ ಸಹಾಯವಾಣಿಯಲ್ಲಿ ಬಿಇಒ ಎ.ಸಿ ಮನ್ನಿಕೇರಿಯವರ ನೇತೃತ್ವದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಪಿ.ಜೆ ಕಳ್ಳಿಮನಿ, ಎಮ್.ಎಲ್ ಅಮಣಿ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗುತ್ತಿದೆ. ಮೂಡಲಗಿ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪ ಈರಣ್ಣನ ಗುಡಿಯಲ್ಲಿ ಸ. 5 ರಂದು ಜರುಗುವ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವದು …
Read More »Yearly Archives: 2021
ಧಾರವಾಡದ ಡೆಪ್ಯೂಟಿ ಚನ್ನಬಸಪ್ಪ ದತ್ತಿ ಪ್ರತಿಷ್ಠಾನವತಿಯಿಂದ ಭೂತನ್ನವರ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಮೂಡಲಗಿ: ಡೆಪ್ಯೂಟಿ ಚನ್ನಬಸಪ್ಪ ದತ್ತಿ ಪ್ರತಿಷ್ಠಾನ ಧಾರವಾಡ ವತಿಯಿಂದ ದಿ. ಶ್ಯಾಮರಾವ್ ನರಸೋಪಂತ ಕುಲಕರ್ಣಿ ಅವರ ಸ್ಮರನಾರ್ಥ ನಿವೃತ್ತ ಗುರುಮಾತೆ ಸರೋಜಿನಿ ಶ್ಯಾಮರಾವ್ ಕುಲಕರ್ಣಿ ಇವರು ನೀಡುವ ಸನ್ 2021-22 ನೇಯ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಬಿಲಕುಂದಿಯ ಸವದತ್ತಿ ತೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹ ಶಿಕ್ಷಕ ಬಿ.ಪಿ ಭೂತನ್ನವರ ರವರಿಗೆ ನೀಡಲಾಗಿದೆ. ಮೂಡಲಗಿ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪ ಈರಣ್ಣನ ಗುಡಿಯಲ್ಲಿ ಸ. 5 ರಂದು ಜರುಗುವ …
Read More »30 ವರ್ಷಗಳ ಕಾಲ ತಾಯ್ನಾಡಿಗೆ ಸುಧೀರ್ಘ ಸೇವೆ ಸಲ್ಲಿಸಿದ ವೀರಯೋದ ಸುಬೇದಾರ ಉದ್ದನ್ನವರ ಕುರಿತಾದ ಮಾಹಿತಿ
“ ದೇಶ ಸೇವೆಯ ಹೊಣೆ ಹೊತ್ತು ಸುಧೀರ್ಘ 30 ವರ್ಷಗಳ ಕಾಲ ಸಿಪಾಯಿ ಹುದ್ದೆಯಿಂದ ಸುಬೇದಾರ ಹಂತದವರೆಗೆ ಬಡ್ತಿ ಪಡೆದು ಆಗಷ್ಟ 31 ರಂದು ನಿವೃತ್ತರಾಗುತ್ತಿಯಾದ ಸುಬೇದಾರ ಮಾರುತಿ ಶಿವಲಿಂಗಪ್ಪ ಉದ್ದನ್ನವರ ಅವರ ಕೀರು ಚಿತ್ರಣ” ವರದಿ: ಕೆ.ಎಲ್ ಮೀಶಿ(ಮೂಡಲಗಿ) ಮೂಡಲಗಿ ತಾಲೂಕಿನ ಖಾನಟ್ಟಿ ಗ್ರಾಮದ ಸುಬೇದಾರ ಮಾರುತಿ ಉದ್ದನ್ನವರ ಅವರು ತಂದೆ ಶಿವಲಿಂಗಪ್ಪ ತಾಯಿ ಬಾಳವ್ವ ಉದರದಲ್ಲಿ ಜೂನ್ 1 1971 ರಂದು ಖಾನಟ್ಟಿಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು …
Read More »ವೀರಯೋದ ಸುಬೇದಾರ ಮಾರುತಿ ಉದ್ದನ್ನವರ ಗ್ರಾಮಸ್ಥರಿಂದ ಅಭಿನಂದನಾ ಹಾಗೂ ಪ್ರತಿಭಾ ಪುರಸ್ಕಾರ
ಮೂಡಲಗಿ: ತಾಲೂಕಿನ ಖಾನಟ್ಟಿ ಗ್ರಾಮದ ವೀರಯೋಧ ಸುಬೇದಾರ ಮಾರುತಿ ಶಿವಲಿಂಗಪ್ಪ ಉದ್ದನ್ನವರ ಸುಧೀರ್ಘ 30 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ತಾಯ್ನಾಡಿಗೆ ಆಗಮಿಸುತ್ತಿದ್ದಾರೆ. ಯಶಸ್ವಿ ಸೇವೆ ಸಲ್ಲಿಸಿರುವ ಪ್ರಯುಕ್ತ ಗ್ರಾಮಸ್ಥರಿಂದ ಅಭಿನಂದನಾ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಸ. 3 ಶುಕ್ರವಾರದಂದು ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ಜೋಡಕುರಳಿಯ ಚಿದ್ಘನಾನಂದ ಸ್ವಾಮಿಗಳು, ಉದ್ಘಾಟಕರಾಗಿ ಕೆಎಮ್‍ಎಫ್ ಅಧ್ಯಕ್ಷರು …
Read More »ಆರೋಗ್ಯಯುತ ಶರೀರವಿದ್ದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ : ನಾಗಪ್ಪ ಶೇಖರಗೋಳ
ಮೂಡಲಗಿ: ಆರೋಗ್ಯಯುತ ಶರೀರವಿದ್ದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾದ್ಯವಾಗುವದು. ಜನ ಸಾಮಾನ್ಯರಿಗೆ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಸರಕಾರವು ಆರೋಗ್ಯ ಇಲಾಖೆಗೆ ನೀಡಿರುವ ಸೌಲಭ್ಯಗಳನ್ನು ಉಪಯೋಗ ಪಡೆದುಕೊಳ್ಳ ಬೇಕು ಎಂದು ಅರಭಾಂವಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು. ಅವರು ಪಟ್ಟಣದ ಮೇಲ್ದರ್ಜೆಗೆರಿದ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಸೊನೋಗ್ರಾಫಿ ಯಂತ್ರವನ್ನು ಉದ್ಘಾಟಿಸಿ ಮಾತನಾಡಿದರು. ಅತ್ಯಾಧುನಿಕ ರೋಗ ಪರೀಶೋಧಕ ಯಂತ್ರದಿಂದಾಗಿ ಸ್ತ್ರೀಯರ ಪ್ರಸವ ಪೂರ್ವ ನಂತರದ ದಿನಗಳಲ್ಲಿ …
Read More »ಅಪ್ರಾಪ್ತ ದಲಿತ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪಿಗಳನ್ನ ಗಲ್ಲು ಶಿಕ್ಷೆಗೆ ಒಳಪಡಿಸಲು ಒತ್ತಾಯ
ಮೂಡಲಗಿ: ತಾಲೂಕಿನ ರಾಜಾಪೂರ ಗ್ರಾಮದ ಅಪ್ರಾಪ್ತ ವಯಸ್ಕ ದಲಿತ ಹೆಣ್ಣುಮಗಳ ಮೇಲೆ ಜುಲೈ 12ರಂದು ಐದು ಜನ ದುಷ್ಕರ್ಮಿಗಳು ಸೇರಿ ಸಾಮೂಹಿಕ ಅತ್ಯಾಚಾರ ವ್ಯಸಗಿದ್ದರು. ಇದನ್ನ ಖಂಡಿಸಿದ ಮೂಡಲಗಿ ತಾಲೂಕಾ ದಲಿತ ಸಂಘಟನೆಗಳ ಒಕ್ಕೂಟ, ಪಟ್ಟಣದ ಕಲ್ಮೇಶ್ವರ ವೃತ್ತವನ್ನು ಬಂದ ಮಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಕೃತ್ಯಗಳು ಮೇಲೆಂದ ಮೇಲೆ ದಲಿತ ಸಮುದಾಯದ ಮಹಿಳೆಯರನ್ನೆ ಗುರಿಯಾಗಿಸಿಕೊಂಡು ಇಂತಹ ಕೃತ್ಯಗಳು ಜರಗುತ್ತದ್ದು, ಭಾರತ ದೇಶದಲ್ಲಿ ಇಂತಹ ಅಮಾನವೀಯ ಘಟನೆಗಳನ್ನ ತಡೆಗಟ್ಟುವಲ್ಲಿ ರಾಜ್ಯ …
Read More »ಇಂದಿನ ವಿದ್ಯಾರ್ಥಿ ಮುಂದಿನ ಪ್ರಜೆ, ಸೂಕ್ತ ಶೈಕ್ಷಣಿಕ ಭದ್ರ ಬುನಾದಿ ಹಾಕಿಕೊಟ್ಟಾಗ ಭವ್ಯ ಭಾರತದ ಕನಸು ನನಸಾಗುತ್ತದೆ : ಬಿಇಒ ಅಜಿತ ಮನ್ನಿಕೇರಿ
ಮೂಡಲಗಿ: ಸರಕಾರವು ಹತ್ತು ಹಲವು ಯೋಜನೆಗಳನ್ನು ಜಾರಿಯಲ್ಲಿ ತಂದಿದೆ. ಅವುಗಳನ್ನು ಸೂಕ್ತ ಸಮರ್ಪಕ ರೀತಿಯಲ್ಲಿ ಬಳಕೆ ಮಾಡಿಕೊಂಡು ಜೀವನ ಸಾಗಿಸಬೇಕು. ಇಂದಿನ ವಿದ್ಯಾರ್ಥಿಗಳು ಮುಂದಿನ ಪ್ರಜೆಗಳು. ಅವರಿಗೆ ಸೂಕ್ತ ರೀತಿಯಲ್ಲಿ ಶೈಕ್ಷಣಿಕವಾಗಿ ಭದ್ರ ಬುನಾದಿ ಹಾಕಿಕೊಟ್ಟಾಗ ಮಾತ್ರ ಭವಿಷ್ಯತ್ತಿನ ಭವ್ಯ ಭಾರತದ ಕನಸು ನನಸಾಗುವದು ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು. ಅವರು ತಾಲೂಕಿನ ನಾಗನೂರಿನ ಮೇಘಾ ವಸತಿ ಶಾಲೆಯಲ್ಲಿ ಜರುಗಿದ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ಪೂರ್ವಭಾವಿ ತಾಲೂಕಾ …
Read More »ಹಳ್ಳಿಗಳು ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ : ಜಿಪಂ ಉಪಕಾರ್ಯದರ್ಶಿ ಹೆಗ್ಗನಾಯಕ
ಮೂಡಲಗಿ: ಭಾರತ ದೇಶವು ಹಳ್ಳಿಗಳಿಂದ ಕೂಡಿದ ದೇಶ. ಹಳ್ಳಿಗಳ ಅಭಿವೃದ್ಧಿಗಾಗಿ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆಯಿಂದ ಸಾಕಷ್ಟು ಯೋಜನೆಗಳಿವೆ. ಗ್ರಾಮಸ್ಥರು, ಚುನಾಯಿತ ಪ್ರತಿನಿಧಿಗಳು ಹಾಗೂ ಪಂಚಾಯತ ಸಿಬ್ಬಂದಿಯವರು ಇವುಗಳ ಉಪಯೋಗ ಪಡೆದುಕೊಂಡಾಗ ಮಾತ್ರ ಹಳ್ಳಿಗಳ ಅಭಿವೃದ್ಧಿಯಾಗಿ ಗಾಂಧೀಜಿಯವರ ಕನಸು ನನಸಾಗಲು ಸಾಧ್ಯವಾಗುವದು ಎಂದು ಬೆಳಗಾವಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಸಮೀಪದ ಹಳ್ಳೂರ ಗ್ರಾಮ ಪಂಚಾಯತ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಯಾನವನ …
Read More »ವಿವಿಧ ಬೇಡಿಕೆ ಈಡೇರಿಕೆಗಾಗಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಪತ್ರ ಸಲ್ಲಿಕೆ
ಕೊಪ್ಪಳ: ವಿಕಲಚೇತನರ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ವಿಕಲಚೇತನ ನೌಕರರ ಸಂಘದ ವತಿಯಿಂದ ವಸತಿ ಸಚಿವರಾದ ವಿ.ಸೋಮಣ್ಣ ಅವರಿಗೆ ಇಂದು ಬೆಂಗಳೂರಿನ ಅವರ ನಿವಾಸದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು. ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಸರಕಾರದಿಂದ ನೀಡಲಾಗುವ ಮನೆಗಳಲ್ಲಿ ವಿಕಲಚೇತನರಿಗೆ ಮೀಸಲಿಡಬೇಕಾದ ಮನೆಗಳನ್ನು ಮೀಸಲಿಡದೇ ಪ್ರಭಾವ ಬಳಿಸಿ ಬೇರೆಯವರು ಅದರ ಸೌಲಭ್ಯವನ್ನು ಪಡೆಯುತ್ತಿದ್ದು,ಕೂಡಲೇ ಸರಕಾರವು ವಿಕಲಚೇತನರಿಗೆ ಕಡ್ಡಾಯವಾಗಿ ವಿವಿಧ ಯೋಜನೆಗಳನ್ನು ನೀಡಲಾಗುವ ಮನೆಗಳ …
Read More »ಕಾರ್ಯಾಧ್ಯಕ್ಷರಾಗಿ ನಿಂಗಪ್ಪ ಪಿರೋಜಿ ನೇಮಕ
ಮೂಡಲಗಿ: ಸ್ಥಳೀಯ ಮುಖಂಡ ಹಾಗೂ ರಾಜಕೀಯ ಧುರಿಣರಾದ ನಿಂಗಪ್ಪ ಫಿರೋಜಿಯವರನ್ನು ಬೆಳಗಾವಿ ಜಿಲ್ಲಾ ಅಖಿಲ ಭಾರತ ಪಂಚಮಸಾಲಿ ಮಹಾಸಭಾದ ಕಾರ್ಯಾಧ್ಯಕ್ಷರನ್ನಾಗಿ ನಿಯಮಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಜರುಗಿದ ಕಾರ್ಯಕಾರಣಿ ಸಭೆಯಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯೊಂಜಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ ನೇಮಕಗೋಳಿಸಿ ಸಂಘಟನೆಯಲ್ಲಿ ಸಕ್ರೀಯ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಸೂಚಿಸಿದ್ದಾರೆ.
Read More »