ಬುಧವಾರ , ಡಿಸೆಂಬರ್ 11 2024
kn
Breaking News

ಆರೋಗ್ಯಯುತ ಶರೀರವಿದ್ದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ : ನಾಗಪ್ಪ ಶೇಖರಗೋಳ

Spread the love

ಮೂಡಲಗಿ: ಆರೋಗ್ಯಯುತ ಶರೀರವಿದ್ದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾದ್ಯವಾಗುವದು. ಜನ ಸಾಮಾನ್ಯರಿಗೆ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಸರಕಾರವು ಆರೋಗ್ಯ ಇಲಾಖೆಗೆ ನೀಡಿರುವ ಸೌಲಭ್ಯಗಳನ್ನು ಉಪಯೋಗ ಪಡೆದುಕೊಳ್ಳ ಬೇಕು ಎಂದು ಅರಭಾಂವಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು.
ಅವರು ಪಟ್ಟಣದ ಮೇಲ್ದರ್ಜೆಗೆರಿದ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಸೊನೋಗ್ರಾಫಿ ಯಂತ್ರವನ್ನು ಉದ್ಘಾಟಿಸಿ ಮಾತನಾಡಿದರು. ಅತ್ಯಾಧುನಿಕ ರೋಗ ಪರೀಶೋಧಕ ಯಂತ್ರದಿಂದಾಗಿ ಸ್ತ್ರೀಯರ ಪ್ರಸವ ಪೂರ್ವ ನಂತರದ ದಿನಗಳಲ್ಲಿ ಮಗುವಿನ ಚಲನ ವಲನಗಳನ್ನು ಪರೀಕ್ಷಿಸಲು, ಹೃದಯ ಸಂಬಂಧಿ ಖಾಯಿಲೆಗಳನ್ನು ಗುರುತಿಸಲು ಸಹಾಯಕವಾಗುವದು. ಸೊನೋಗ್ರಾಪಿ ಯಂತ್ರವು 9.15 ಲಕ್ಷ ರೂ. ಗಳಾಗಿದ್ದು ಮೂಡಲಗಿ ಹಾಗೂ ಸುತ್ತಮುತ್ತಲಿನ ಜನ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕೆ.ಎಮ್.ಎಫ್ ಅಧ್ಯಕ್ಷರು ಹಾಗೂ ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಪ್ರಯತ್ನದಿಂದಾಗಿ ಹಲವಾರು ಇಲಾಖೆಗಳಿಗೆ ಸರಕಾರದಿಂದ ದೊರೆಯುವ ಯೋಜನೆಗಳನ್ನು ತರಲು ಅವಿರತ ಪ್ರಯತ್ನ ಮಾಡುತ್ತಾರೆ. ಮುಖ್ಯವಾಗಿ ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳಿಗೆ ಸಿಗುವ ಸೌಲತ್ತುಗಳನರನು ಕ್ಷೇತ್ರದ ಜನತೆಗೆ ಸಿಗುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಆರೋಗ್ಯದ ಕುರಿತಾಗಿ ಆಲಸ್ಯ ತೋರದೆ ವೈದ್ಯರ ಸೂಕ್ತ ಸಲಹೆ ಸೂಚನೆಗಳನ್ನು ಪಾಲಿಸಿಕೊಂಡು ಸದೃಢ ಆರೋಗ್ಯ ತಮ್ಮದಾಗಿಸಿಕೊಳ್ಳ ಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಡಿ.ಜಿ ಮಹಾತ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾದ್ಯಕ್ಷೆ ರೇಣುಕಾ ಹಾದಿಮನಿ, ತಜ್ಞ ವೈದ್ಯಾಧಿಕಾರಿ ಡಾ. ಆರ್ ಎಸ್ ಬೆನಚನಮರಡಿ, ತಾಲೂಕಾ ವೈದ್ಯಾಧಿಕಾರಿ ಡಾ. ಎಮ್.ಎಸ್ ಕೊಪ್ಪದ, ಗೋಕಾಕ ಮುಖ್ಯ ವೈದ್ಯಾಧಿಕಾರಿ ರವೀಂದ್ರ ಆಂಟಿನ್, ಡಾ. ಭಾರತಿ ಕೋಣಿ, ಸ್ತ್ರೀ ರೋಗ ತಜ್ಞ ಡಾ. ಬಿಲ್ಕೀಸ್ ಕಾಜಿ, ಬಿಇಒ ಅಜಿತ ಮನ್ನಿಕೇರಿ, ಸಿಡಿಪಿಒ ವಾಯ್. ಎಮ್ ಗುಜನಟ್ಟಿ, ಸಿಪಿಐ ವೆಂಕಟೇಶ ಮುರನಾಳ, ಪಿಎಸ್‍ಐ ಎಚ್ ವಾಯ್ ಬಾಲದಂಡಿ, ಸಲಹಾ ಸಮಿತಿಯ ಆರ್.ಪಿ ಸೋನವಾಲಕರ, ಪುರಸಭೆ ಸದಸ್ಯರಾದ ಈರಣ್ಣಾ ಕೊಣ್ಣೂರ, ಗಫಾರ ಡಾಂಗೆ, ಮುಖಂಡರಾದ ಅನ್ವರ ನದಾಫ್, ಹಾಜಿಸಾಬ ಶೇಖ ಹಾಗೂ ಸಮೂದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page