ಆಚಾರ-ವಿಚಾರ, ಸಂಪ್ರದಾಯಗಳಿಗೆ ಸನಾತನ ಧರ್ಮವಾದ ಹಿಂದೂ ಧರ್ಮವು ತಾಯಿ ಎಂದು ಕರೆಯಬಹುದು. ನಮಗೆ ಗೊತ್ತಿರುವಂತೆಯೇ ಹಲವಾರು ಆಚಾರ ವಿಚಾರಗಳು ಇದರಲ್ಲಿ ಇದೆ, ಇನ್ನು ಗೊತ್ತಿಲ್ಲದಂತೆ ಎಷ್ಟು ಇವೆ ಎಂದು ಲೆಕ್ಕ ಹಾಕಲು ಹೋದರೆ, ಅದು ಒಂದು ದೊಡ್ಡ ಗಣತಿಯಂತಾಗುತ್ತದೆ. ಕೆಲವೊಂದು ಸಣ್ಣ ಸಣ್ಣ ಆಚಾರಗಳಿಂದ ಹಿಡಿದು, ಬಹಳಷ್ಟು ದಿನಗಳ ಕಾಲ ನಡೆಯುವ ಅನುಷ್ಟಾನಗಳವರೆಗೆ ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿವೆ. ಅದರಲ್ಲಿ ಒಂದು ದೀಪ ಹಚ್ಚುವುದು. ಮನೆಯಲ್ಲಿ ದೇವರ ಕೋಣೆಯಲ್ಲಿ ನಾವು ದೀಪವನ್ನು ಉರಿಸುತ್ತೇವೆ. ಯಾವುದಾದರು ಸಭೆ-ಸಮಾರಂಭಗಳನ್ನು ಆರಂಭಿಸುವ ಮೊದಲು ದೀಪ ಬೆಳಗುವುದರ ಮೂಲಕ ಅದಕ್ಕೆ ವಿದ್ಯುಕ್ತವಾಗಿ ಚಾಲನೆಯನ್ನು ನೀಡುತ್ತೇವೆ. ದೀಪ ಅಥವಾ ಜ್ಯೋತಿ ಎಂದು ಕರೆಯಲ್ಪಡುವ ಇದನ್ನು ನಾವು ದೇವರ ಆರಾಧನೆಯಲ್ಲಿ ಪ್ರಮುಖವಾಗಿ ಬೆಳಗುತ್ತೇವೆ. ದೀಪವನ್ನು ಹಚ್ಚಿ ದೇವಿಯನ್ನು ಪ್ರಾರ್ಥಿಸುವುದರಿಂದ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂದು ಹೇಳಲಾಗುತ್ತದೆ.
ದೀಪದ ಹಿನ್ನೆಲೆ
ನಂಬಿಕೆಗಳ ಪ್ರಕಾರ ರಾಜ ರಾಜೇಶ್ವರಿ ದೇವಿಯು ದೀಪದಲ್ಲಿ ನೆಲೆಸಿರುತ್ತಾಳಂತೆ. ಈಕೆಯು ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿ ದೇವಿಯರ ಅಂಶಗಳನ್ನು ಹೊಂದಿರುವ ದೇವಿಯಂತೆ. ಹಾಗಾಗಿ ದೀಪಲಕ್ಷ್ಮಿಯನ್ನು (ರಾಜರಾಜೇಶ್ವರಿ ದೇವಿಯ ಅವತಾರವಾಗಿ) ಕುಂಕುಮ, ಹೂವು ಮತ್ತು ಸ್ತೋತ್ರಗಳ ಮೂಲಕ ಪ್ರತಿ ಶುಕ್ರವಾರವು ಪೂಜಿಸಲಾಗುತ್ತದೆ. ಇದರಿಂದ ನಿಮಗೆ ದೊರೆಯುವ ಪ್ರಯೋಜನಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.
ದೀಪವನ್ನು ಬೆಳಗಿಸುವ ಹಿಂದಿರುವ ತತ್ವ, ದೀಪವನ್ನು ಬೆಳಗುವ ಹಿಂದೆ ಒಂದು ಆಳವಾದ ತತ್ವವು ಅಡಗಿದೆ. ನಾವು ನಮ್ಮ ದುಃಖವನ್ನು ಹೋಗಲಾಡಿಸಿ, ಸಂತೋಷವನ್ನು ತೆರೆದ ಬಾಹುಗಳಿಂದ ಬರಮಾಡಿಕೊಳ್ಳಲು ದೀಪವನ್ನು ಹಚ್ಚುತ್ತೇವೆ. ನಮಗೆ ಜ್ಞಾನದ ಬೆಳಕನ್ನು ನೀಡಿ, ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಲು ದೀಪಲಕ್ಷ್ಮಿಯನ್ನು ಪ್ರಾರ್ತಿಸಿ, ದುರ್ಗಾ, ಸರಸ್ವತಿ ಮತ್ತು ಲಕ್ಷ್ಮಿಯರ ಪ್ರತಿರೂಪ ಈ ಮೊದಲೆ ಹೇಳಿದಂತೆ ದೀಪವನ್ನು ದುರ್ಗಾ, ಸರಸ್ವತಿ ಮತ್ತು ಲಕ್ಷ್ಮಿಯರ ಪ್ರತಿರೂಪವಾಗಿ ಆರಾಧಿಸಲಾಗುತ್ತದೆ. ದೀಪ ಬೆಳಗುವದೆಂದರೆ ನಿಮ್ಮ ಆತ್ಮವನ್ನು ನೀವು ಬೆಳಗಿಕೊಂಡಂತೆ. ದೀಪದಲ್ಲಿ ಎಣ್ಣೆಯನ್ನು ತುಂಬುವ ಸ್ಥಳವನ್ನು ಮಹಿಳೆಯರ ಮನಸ್ಸಿಗೆ ಹೋಲಿಸಲಾಗುತ್ತದೆ. ಯಾವಾಗ ದೀಪವನ್ನು ಹಚ್ಚಲಾಗುತ್ತದೆಯೋ, ಆಗ ಮಹಿಳೆಯರ ಮನಸ್ಸಿನಲ್ಲಿ ಪ್ರಾಮುಖ್ಯತೆಯ ಅರಿವು ಉಂಟಾಗುತ್ತದೆ. ದೀಪವನ್ನು ಹಚ್ಚುವುದು ಎಂದರೆ ನಿಮ್ಮ ಆತ್ಮವನ್ನು ನೀವು ಬೆಳಗಿಕೊಂಡಂತೆ. ಇದು ನಮಗೆ ಬೌದ್ಧಿಕತೆ ಜ್ಞಾನವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಪುರುಷರು ಸಹ ದೇವಾಲಯಗಳಲ್ಲಿ ದೀಪವನ್ನು ಹಚ್ಚುವುದನ್ನು ನೋಡಬಹುದು. ಕೆಲವರು ದೇವಾಲಯಗಳಲ್ಲಿನ ನಂದಾದೀಪಗಳಿಗೆ ಎಣ್ಣೆಯನ್ನು ದಾನ ಮಾಡುತ್ತಾರೆ. ಒಂದು ವೇಳೆ ನೀವು ಪ್ರತಿದಿನವು ನಿಮ್ಮ ಮನೆಯಲ್ಲಿ ಕೆಲವೊಂದು ಶ್ಲೋಕಗಳನ್ನು ಹೇಳಿಕೊಂಡು ದೀಪವನ್ನು ಬೆಳಗಿದರೆ, ಇದರಿಂದ ನಿಮ್ಮ ಜೀವನವು ಸಹ ಬೆಳಗುತ್ತದೆ ಎಂದು ಹೇಳಲಾಗುತ್ತದೆ.
ದೀಪ ಬೆಳಗುವದೆಂದರೆ ದುಷ್ಟ ಶಕ್ತಿಗಳ ಹೊಡೆದೊಡಿಸಿ,
ದೈವ ಶಕ್ತಿ ಪಡೆಯುವುದು ಆದರೆ ದೀಪ ಬೆಳಗುವುದು ಬರಿ ಫ್ಯಾಷನ್ ಎಂದು ತಿಳಿದುಕೊಂಡರೆ ಅದು ಅವರ ಬುದ್ಧಿಗೆ ಮಂಕು ಕವಿದಿದೆ ಎಂದರ್ಥ. ದೀಪ ಬೆಳಗುವದೆಂದರೆ ಭಾರತೀಯ ಸಂಸ್ಕೃತಿ ಪ್ರಕಾರ ನಮ್ಮ ಪಾಲಿನ ದೈವತ್ವವನ್ನು ಬೆಳಗಿದಂತೆ. ಅದಕ್ಕೆ ದೀಪ ಬೆಳಗಿಸುವದರಿಂದ ನಮ್ಮ ನಮ್ಮಲೆ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳೋಣ ನಮ್ಮ ದೇಶದ ಪ್ರಧಾನಿಯವರು ಕರೆ ಕೊಟ್ಟಂತೆ ಅವರ ಕರೆಗೆ ಓಗೊಟ್ಟು ಎಲ್ಲರೂ ಒಂದಾಗಿ ದೀಪ ಬೆಳಗಿಸಿ ಕಂಟಕವಾದ ಕೊರೋನಾ ಓಡಿಸೋಣ ಭಾರತ ಬೆಳಗೋಣ.
– ಮಾರುತಿ ಸವಳೇಕರ
ಸಂಪಾದಕರು, ಸರ್ವವಾಣಿ ಹಾಗೂ
ಅಧ್ಯಕ್ಷರು,
ಮೂಡಲಗಿ ತಾಲೂಕಾ ವಾರ ಪತ್ರಿಕಾ ಸಂಪಾದಕರ ಸಂಘ.