ಬುಧವಾರ , ಡಿಸೆಂಬರ್ 11 2024
kn
Breaking News

ಕೊರೊನಾ ನಿಯಂತ್ರಣದ ಜವಾಬ್ದಾರಿ ಕೊರೊನಾ ಸೇನಾನಿಗಳ ಮೇಲಿದೆ ಅಶೋಕ ದಡಗುಂಟಿ

Spread the love

ಮೂಡಲಗಿ: ‘ಕೊರೊನಾ ನಿಯಂತ್ರಣದಲ್ಲಿ ಕೊರೊನಾ ಮುಂಚೂಣಿ ಸೇನಾನಿಗಳ ಪಾತ್ರ ಮಹತ್ವದಾಗಿದೆ’ ಎಂದು ಬೆಳಗಾವಿಯ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಹೇಳಿದರು.
ಮಂಗಳವಾರ ಮೂಡಲಗಿ ತಾಲ್ಲೂಕಿನ ರಾಜಾಪುರ, ತುಕ್ಕಾನಟ್ಟಿ, ಮಲ್ಲಾಪುರ ಪಿಜಿ ಮತ್ತು ಮೂಡಲಗಿಯ ಸಮುದಾಯ ಕೇಂದ್ರದ ಕೋವಿಡ್ ಕೇಂದ್ರಕ್ಕೆ ಭೇಟ್ಟಿ ನೀಡಿ ಪುರಸಭೆಯ ಆವರಣದಲ್ಲಿ ತಾಲ್ಲೂಕು ಕೊರೊನಾ ಟಾಸ್ಕ್ ಪೋರ್ಸ್ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು ಅಪಾಯದ ಅಂಚಿನತ್ತ ಸಾಗುತ್ತಿರುವ ಕೊರೊನಾ ಎರಡನೇ ಅಲೆಯ ನಿಯಂತ್ರಣದ ಗಂಭೀರವಾದ ಜವಾಬ್ದಾರಿ ಕೊರೊನಾ ಸೇನಾನಿಗಳ ಮೇಲೆ ಇದೆ ಎಂದರು.
ಕೊರೊನಾ ಸೋಂಕು ನಗರಕ್ಕಿಂತ ಗ್ರಾಮಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ರೋಗ ನಿರೋಧಕ ಶಕ್ತಿ ಹೊಂದಿರುವ ಯುವ ಜನಾಂಗವನ್ನು ಬಲಿ ತೆಗೆದುಕೊಳ್ಳುತ್ತಿರುವುದು ಕಳವಳಕಾರಿಯಾದ ಸಂಗತಿಯಾಗಿದೆ. ಸಾಂಘೀಕವಾದ ಪ್ರಯತ್ನದಿಂದ ಮಾತ್ರ ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯ ಇದೆ ಎಂದರು.
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ತಾಲ್ಲೂಕಿನಾದ್ಯಂತ ಆರೋಗ್ಯ ಸಮೀಕ್ಷಿಯನ್ನು ಪರಿಣಾಮಕಾರಿಯಾಗಿ ಮಾಡಿ ಸೋಂಕಿತರನ್ನು ಗುರುತಿಸಿ ಕೋವಿಡ್ ಕಾಳಜಿ ಕೇಂದ್ರಕ್ಕೆ ಸೇರಿಸುವ ಕಾರ್ಯವನ್ನು ಮಾಡಬೇಕು. ಸೋಂಕಿತರ ಮನೆಯಲ್ಲಿಯ ಆರೈಕೆಗಿಂತ ಕಾಳಜಿ ಕೇಂದ್ರಕ್ಕೆ ಸೇರಿಸುವುದರಿಂದ ಕೊರೊನಾ ಸರಪಳಿಯನ್ನು ತುಂಡರಿಸಲು ಸಾಧ್ಯ ಎಂದರು.
ಕೋವಿಡ್‍ದ ಅಪಾಯದಲ್ಲಿ ತಮ್ಮ ಜೀವದ ಹಂಗು ಬಿಟ್ಟು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಸೇವೆಯು ಮನುಕುಲಕ್ಕೆ ವರದಾನವಾಗಿದೆ ಎಂದರು.
ತಹಶೀಲ್ದಾರ್ ಡಾ. ಮೋಹನಕುಮಾರ ಮಾತನಾಡಿ ಮೂಡಲಗಿ ಮತ್ತು ಮಲ್ಲಾಪುರ ಪಿಜಿಯಲ್ಲಿ ಕೋವಿಡ್ ಕೇಂದ್ರಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಲಿವೆ. ಆಮ್ಲಜನಕದ ಕೊರೆತೆಯಾಗದಂತೆ ನಿಗಾವಹಿಸಲಾಗಿದೆ ಎಂದರು.
ಯಾದವಾಡ ಮತ್ತು ಕುಲಿಗೋಡದ ಕೋವಿಡ್ ಕಾಳಜಿ ಕೇಂದ್ರ ಸಹಾ ಕಾರ್ಯನಿರ್ವಹಸುತ್ತಲಿವೆ ಎಂದರು.
ಸರ್ಕಾರದ ಜೊತೆಗೆ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಉಚಿತವಾಗಿ ಔಷಧಿಗಳನ್ನು ಕೊಡಮಾಡಿದ್ದರಿಂದ ಸೋಂಕಿತರ ಚಿಕಿತ್ಸೆಯಲ್ಲಿ ಔಷಧಿಯ ಕೊರತೆಯು ಬಾಧಿಸುತ್ತಿಲ್ಲ ಎಂದರು.
ತಾಲ್ಲೂಕು ಆಡಳಿತದೊಂದಿಗೆ ಕೊರೊನಾ ಸೇನಾನಿಗಳೆಲ್ಲ ಶ್ರದ್ಧೆಯಿಂದ ಕಾರ್ಯಮಾಡುವ ಮೂಲಕ ಕೊವಿಡ್ ನಿಯಂತ್ರಿಸುವಲ್ಲಿ ಮೂಡಲಗಿ ತಾಲ್ಲೂಕನ್ನು ಮಾದರಿಯನ್ನಾಗಿಸಬೇಕು ಎಂದರು.
ಹಿರಿಯ ವೈದ್ಯ ಡಾ. ಆರ್.ಎಸ್. ಬೆಣಚಿನಮರಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಮಾತನಾಡಿದರು.
ತಾಲ್ಲೂಕಿನ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.
ಶಾಸಕರ ಆಪ್ತಸಹಾಯಕ ನಾಗಪ್ಪ ಶೇಖರಪ್ಪಗೋಳ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ನಾಗಪ್ಪ ಶೇಖರಪ್ಪಗೋಳ, ಸಿಪಿಐ ವೆಂಕಟೇಶ ಮುರನಾಳ, ಪಿಎಸ್‍ಐ ಎಸ್.ವೈ. ಬಾಲದಂಡಿ, ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಇದ್ದರು.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page