ಪರಮಾನಂದವಾಡಿ: ಕೋರೋನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಮದ ಆರ್ ಎಸ್ ಎಸ್ ಹಾಗೂ ಗ್ರಾಮದ ಜನತೆಯಲ್ಲ ಸೇರಿ ಅವರಿಗೆ ಹೂಗುಚ್ಛ ನೀಡುವುದರ ಮೂಲಕ ಗೌರವಿಸಲಾಯಿತು.
ಗ್ರಾಮದ ಪ್ರಮುಖ ಬೀದಿ- ಬೀದಿಗಳಲ್ಲಿ ಸಂಚರಿಸುತ್ತಾ ಕೋರೋನಾ ಬಗ್ಗೆ ವಿವರಿಸಿ ತಿಳಿಸುತ್ತಾ, ಗ್ರಾಮದ ಎಲ್ಲ ಮನೆಯವರು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹೂ ಹಾರಿಸುವುದರ ಮೂಲಕ ಅವರಿಗೆ ಸ್ವಾಗತವನ್ನು ಮಾಡಲಾಯಿತು.
ಈ ವೇಳೆಯಲ್ಲಿ ಮಾತನಾಡಿದ ಆರ್ ಎಸ್ ಎಸ್ ನ ಮುಖಂಡರಾದ ಪ್ರಶಾಂತ್ ಚೌಗಲಾ ಮಾತನಾಡಿ – ಸುಡುವ ಬಿಸಿಲಿನ ತಾಪ ವಿದ್ದರೂ ಗ್ರಾಮದ ಒಳಿತಿಗಾಗಿ ಪ್ರತಿಯೊಬ್ಬರ ಕ್ಷೇಮಕ್ಕಾಗಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ವಯಂ ಸೇವಕ ಸೈನಿಕರು ಒಂದಾಗಿ ಕೋರೋನಾ ವಿರುದ್ಧ ಹೋರಾಡುತ್ತಿರುವ ದಿಶೆಯಲ್ಲಿ ಸಕಾ೯ರ ತಿಳಿಸಿದಂತೆ ಎಲ್ಲರೂ ಮಾಗ೯ಸೂಚನೆಗಳನ್ನು ಪಾಲಿಸಬೇಕು. ಜನತೆ ಗುಂಪು ಗುಂಪಾಗಿ ಸೇರದೆ ಸಮಾನ ಅಂತರವನ್ನು ಕಾಯ್ದುಕೊಳ್ಳಬೇಕು. ಪ್ರತಿಯೊಬ್ಬರು ಸಾಬೂನ ನಿಂದ ಪದೇ ಪದೇ ಕೈಗಳನ್ನು ತೊಳೆಯುತ್ತಿರಬೇಕು. ಮನೆಯ ಸುತ್ತ ಮುತ್ತಲು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.
ಗ್ರಾ.ಪಂಚಾಯತಿ ವತಿಯಿಂದ ಗ್ರಾಮದಲ್ಲಿನ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಿ, ನಂತರ ಸೊಳ್ಳೆಗಳ ಹಾವಳಿ ತಪ್ಪಿಸಲು ಪೌಡರ್ ನ್ನು ಈಗಾಗಲೇ ಬಳಸಲಾಗಿದೆ. ಮತ್ತು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ವಯಂ ಸೈನಿಕರು ಮನೆ ಮನೆಗೆ ಬಂದಾಗ ಸರಿಯಾದ ಮಾಹಿತಿ ನೀಡಿ ಅವರಿಗೆ ಸಹಕಾರ ಕೊಡಬೇಕು. ಎಂದು ಮಾತನಾಡಿದರು.
ಈ ವೇಳೆಯಲ್ಲಿ ಸದಸ್ಯರಾದ ಚಿದಾನಂದ ಮಿಠಾರೆ, ನಜೀರ್ ತಾಂಬೋಳಿ, ಮತ್ತು ಆರ್ ಎಸ್ ಎಸ್ ನ – ಗೋರಕ ಸುತಾರ , ಗಣೇಶ ಸ್ವಾಮಿ, ಮಹಾದೇವ ತುಳಸಿಗೇರಿ, ಸಿದ್ದಾರೂಡ ಕೌವಲಗಡ್ಡ, ಮಹಾಂತೇಶ ಜಕಾತೆ , ಮತ್ತು ಎಲ್ಲಾ ಆಶಾ ಮತ್ತು ಅಂಗನವಾಡಿ, ಸ್ವಯಂ ಸೈನಿಕರು ಇತರರು ಹಾಜರಿದ್ದರು.