ಬುಧವಾರ , ಅಕ್ಟೋಬರ್ 9 2024
kn
Breaking News

ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love

ಹಳ್ಳೂರ : ರಸ್ತೆಗಳ ಅಭಿವೃದ್ಧಿಗಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಿಂದ 10 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.
  ಶನಿವಾರ  ಗ್ರಾಮದ ಗಾಂಧಿನಗರದಲ್ಲಿ ಆರ್.ಡಿ.ಪಿ.ಆರ್ ಯೋಜನೆಯಡಿ ೧೦ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ಧೇಶಿಸಿರುವ ವಿವಿಧ ಗ್ರಾಮಗಳ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಿಗದಿತ  ಅವಧಿಯೊಳಗೆ  ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅವರು ಸೂಚನೆ ನೀಡಿದರು.
   ಮಾರ್ಚ್ ತಿಂಗಳ ಅಂತ್ಯದೊಳಗೆ ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು, ಕಾಮಗಾರಿ ನಡೆಯುವ ಸ್ಥಳಕ್ಕೆ ಅಧಿಕಾರಿಗಳು ಭೆಟ್ಟಿ ನೀಡಿ ಕೆಲಸಗಳ ಗುಣಮಟ್ಟವನ್ನು ಪರಿಶೀಲಿಸಬೇಕು,  ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಂಡರೆ ರಸ್ತೆಗಳು ಹಾಳಾಗುವದಿಲ್ಲ, ಸಾರ್ವಜನಿಕ ಅನುಕೂಲಕ್ಕಾಗಿ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ತಿಳಿಸಿದರು.
  ಲೋಕೋಪಯೋಗಿ ಇಲಾಖೆಯಿಂದ ರಸ್ತೆಗಳ ಅಭಿವೃದ್ಧಿಗಾಗಿ ೫೦ ಕೋಟಿ ರೂಪಾಯಿ ಅನುದಾನವು ಈ ತಿಂಗಳ ಅಂತ್ಯದೊಳಗೆ ಬಿಡುಗಡೆಯಾಗಲಿದೆ, ಜೊತೆಗೆ ದೇವಸ್ಥಾನಗಳ ಜೀರ್ಣೋದಾರಕ್ಕಾಗಿ  ಎರಡು ಕೋಟಿ  ರೂ ಅನುದಾನ ಸಹ ಬರಲಿದೆ ಎಂದು ಹೇಳಿದರು.
   ರಸ್ತೆ ಕಾಮಗಾರಿಗಳ ವಿವರ:  ಮೂಡಲಗಿ ತಾಲೂಕಿನ ಹಳ್ಳೂರ ಗಾಂಧಿ ನಗರದಿಂದ ಬಸವನಗರ ರಸ್ತೆ ಸುಧಾರಣೆಗೆ ೮೦ ಲಕ್ಷ ರೂಪಾಯಿ, ನಾಗನೂರ ನಿಪನಾಳ ರಸ್ತೆ ಸುಧಾರಣೆಗೆ ೧.೫೦ ಕೋಟಿ ರೂಪಾಯಿ, ಪಟಗುಂದಿಯಿಂದ ಮೂಡಲಗಿ-ಸುಣಧೋಳಿ ಮುಖ್ಯ ರಸ್ತೆ ಸುಧಾರಣೆಗೆ ೧.೨೦ ಕೋಟಿ ರೂಪಾಯಿ, ಕಮಲದಿನ್ನಿ ಗ್ರಾಮದಿಂದ ಮೂಡಲಗಿ-ಸುಣಧೋಳಿ ಮುಖ್ಯ ರಸ್ಥೆ ಸುಧಾರಣೆಗೆ ೮೦ ಲಕ್ಷ ರೂಪಾಯಿ, ಹೊನಕುಪ್ಪಿಯಿಂದ ಬಿಲಕುಂದಿ ರಸ್ತೆ ಸುಧಾರಣೆಗೆ ೯೦ ಲಕ್ಷ ರೂ, ಹುಣಶ್ಯಾಳ ಪಿ.ಜಿ ಹಳೇ ಗ್ರಾಮದಿಂದ ಹೊಸ ಗ್ರಾಮದ ರಸ್ತೆ ಸುಧಾರಣೆಗೆ ೮೦ ಲಕ್ಷ ರೂ,  ಬಿಲಕುಂದಿ-ಗೊಸಬಾಳ ರಸ್ತೆ ಸುಧಾರಣೆಗೆ ೧.೨೦ ಕೋಟಿ ರೂ, ಕೌಜಲಗಿ-ರಡೇರಹಟ್ಟಿ ರಸ್ತೆ ಸುಧಾರಣೆಗೆ ೮೦ ಲಕ್ಷ ರೂ, ಕಲಾರಕೊಪ್ಪ ಗ್ರಾಮದಿಂದ ದಂಡಿನ ಮಾರ್ಗ ಕೂಡು ರಸ್ತೆಗೆ ೮೦ ಲಕ್ಷ ರೂ, ರಡ್ಡೇರಹಟ್ಟಿ-ಯಾದವಾಡ ರಸ್ತೆ ಸುಧಾರಣೆಗೆ ೮೦ ಲಕ್ಷ ರೂ, ಮನ್ನಿಕೇರಿಯಿಂದ ಮಳ್ಳಿಕೇರಿ ರಸ್ತೆ ಸುಧಾರಣೆಗೆ ೮೦ ಲಕ್ಷ ರೂ  ಸೇರಿದಂತೆ ಒಟ್ಟು ೧೦ ಕೋಟಿ ರೂಪಾಯಿ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸಹಕಾರ ಹೈನು ಮಹಾಮಂಡಳದ ಆಡಳಿತ ಮಂಡಳಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಹಳ್ಳುರ ಗ್ರಾಮಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸತ್ಕರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ  ಭೀಮಶಿ ಮಗದುಮ್, ಹನಮಂತ ತೇರದಾಳ, ಗ್ರಾ.ಪಂ ಅಧ್ಯಕ್ಷ ಲಕ್ಷ್ಮಣ ಕತ್ತಿ,  ಸುರೇಶ ಕತ್ತಿˌˌ ಬಸಪ್ಪ ಸಂತಿ, ಅಡಿವೇಪ್ಪ ಪಾಲಬಾಂವಿ, ಮಲ್ಲಪ್ಪ ಚಬ್ಬಿ, ಸುರೇಶ ಡಬ್ಬನ್ನವರ, ಲಕ್ಷ್ಮಣ ಛಭ್ಭಿ, ಶಂಕರ ಬೊಳನ್ನವರ, , ಕುಮಾರ ಲೋಕನ್ನವರ, ಶ್ರೀಶೈಲ್ ಬಾಗೋಡಿ, ಬಸಪ್ಪ ನಾವಿ, ಶಿವಪ್ಪ ಅಟ್ಟಮಟ್ಟಿ, ಪ್ರಕಾಶ ಕೊಂಗಾಲಿ, ಶ್ರೀಶೈಲ್ ಅಂಗಡಿ, ಸಿದ್ದು ದುರದುಂಡಿˌ .ಕೆ.ಗಂಗರಡ್ಡಿ, ಸೇರಿದಂತೆ ಗ್ರಾಮದ ಮುಖಂಡರುˌ ಗ್ರಾಮಸ್ಥರು ಪಾಲ್ಗೊಂಡಿದ್ದರು.
 ವರದಿ :- ಪ್ರವೀಣ ಮಾ. ಮಾವರಕರ

Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page