ಮೂಡಲಗಿ : ರಾಯಬಾಗದ ಅಮ್ಮ ಫೌಂಡೇಶನ್, ಬೆಂಗಳೂರಿನ ಗೊಜ್ಜು ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಮೂಡಲಗಿ ಪಟ್ಟಣದ ರುದ್ರ ಭೂಮಿ, ಈರಣ್ಣ ದೇವಸ್ಥಾನ ಹತ್ತಿರ ಇರುವ ನೀರಿನ ಕಾಲುವೆಯನ್ನು ಸ್ವಚ್ಛತೆ ಮಾಡಿದರು.
ಅಮ್ಮ ಫೌಂಡೇಶನ್ ನಿರ್ದೇಶಕ ರಾಜು ಗಸ್ತಿ ಮಾತನಾಡಿ, ಇದೊಂದು ಸಮಾಜ ಸೇವೆಯ ಕಾರ್ಯವಾಗಿದೆ ಇಂತಹ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಸ್ವಚ್ಛತಾ ಕೆಲಸಕ್ಕೆ ಬರುವ ಬಡ ಕುಟುಂಬಗಳಿಗೆ ದಿನ ಬಳಕೆ ವಸ್ತುಗಳನ್ನು ನೀಡಲಾಗುತ್ತದೆ. ಸ್ವಚ್ಛತಾ ಕಾರ್ಯದಲಿ 65 ಜನರು ಸ್ವಯಂ ಪ್ರೇರಿತವಾಗಿ ಭಾಗವಹಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಮ್ಮ ಫೌಂಡೇಶನ್ ನಿರ್ದೇಶಕಿ ಸುಂದ್ರವ್ವ ಬಂಗೆನ್ನವರ, ಮುಕ್ತಾ ಕೆಂಗಣ್ಣವರ, ಶೋಭಾ ಗಸ್ತಿ, ಯುವ ಜೀವನ ಸೇವಾ ಸಂಸ್ಥೆಯ ಮಾಜಿ ಅಧ್ಯಕ್ಷ ಈರಪ್ಪ ಢವಳೇಶ್ವರ ಮತ್ತು ಮೂಡಲಗಿ ಪಟ್ಟಣದ ಸ್ವಯಂ ಸೇವಕರು ಮತ್ತು ಮಹಿಳೆಯರು ಉಪಸ್ಥಿತರಿದ್ದರು.
