ಮೂಡಲಗಿ: ಎರಡನೇ ಹಂತದ ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೆಳಗಾವಿ ಪ್ರತಿಷ್ಠಿತ ಲೇಕ್ಯೂ ಆಸ್ಪತ್ರೆಯ ಡಾ. ಗಿರೀಶ್ ಸೋನವಾಲಕರ ಮತ್ತು ಪುರಸಭೆ ಸದಸ್ಯ ಸಂತೋಷ ಸೋನವಾಲಕರ ಅವರ ಮಾತೋಶ್ರಿ ಸ್ಥಳೀಯ ಸರಕಾರಿ ಪ್ರೌಢ ಶಾಲೆಗೆ ಭೂ ದಾನಿ ಲಕ್ಷ್ಮೀಬಾಯಿ ಸೋನವಾಲಕರ ಅವರಿಗೆ ಕೋವಿಡ್ ವಾಕ್ಸಿನ್ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ತಾಲೂಕಾ ಭೂ ನ್ಯಾಯ ಮಂಡಳಿ ಸದಸ್ಯ ಭೀಮಶಿ ಮಗದುಮ, ಪುರಸಭೆ ಸದಸ್ಯ ಸಂತೋಷ ಸೋನವಾಲಕರ, ಸಚೀನ ಕೋಹಳ್ಳಿ ಆಸ್ಪತ್ರೆ ಸಿಬ್ಬಂದಿ ಶಿವಲಿಂಗ ಪಾಟೀಲ, ವಿಠ್ಠಲ ಪಾಟೀಲ ಹಾಜರಿದ್ದರು.
