ಮೂಡಲಗಿ: ಕಳ್ಳಿಗುದ್ದಿ ಗ್ರಾಮ ಪಂಚಾಯತನ ಅಧ್ಯಕ್ಷರಾಗಿ ಲಕ್ಷ್ಮಣ ಚನ್ನಾಳ ಉಪಾಧ್ಯಕ್ಷರಾಗಿ ಶೋಭಾ ಮೆಟ್ಟಿನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಗೋಕಾಕ ಜಿಆರ್‍ಬಿಸಿ ಎಇಇ ಶ್ರೀನಿವಾಸ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
14 ಜನ ಸದಸ್ಯರ ಬಲ ಹೊಂದಿರುವ ಗ್ರಾಮ ಪಂಚಾಯಿತಿಯು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದ ಮೇರೆಗೆ, ಗ್ರಾಮಗಳ ಅಭಿವೃದ್ಧಿ ಹಿತ ದೃಷ್ಠಿಯಿಂದ ಅವಿರೋಧ ಆಯ್ಕೆಯನ್ನು ಗ್ರಾಮಗಳ ಮುಖಂಡರುಗಳ ಉಪಸ್ಥಿತಿಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.
ನೂತನ ಸದಸ್ಯರುಗಳು: ರೇಣುಕಾ ದಳವಾಯಿ, ಸುಮಿತ್ರಾ ಮಾವಿನಗಿಡದ, ಸುಜೀತ ಹಾದಿಮನಿ,ಕೆಂಪವ್ವ ದಳವಾಯಿ, ಮುತ್ತೆಪ್ಪ ನಾವಲಗಿ, ಬಾಳಪ್ಪ ಗೌಡರ, ಮಾನಿಂಗವ್ವ ಒಳಗಿನವರ ಉರ್ಪ ಮಾದರ, ಮಲ್ಲಪ್ಪ ಪಾಶ್ಚಾಪೂರ, ಶ್ರೀಕಾಂತ ಗೌರಿ, ಮಹಾದೇವಿ ಪೂಜೇರ, ಮಹಾದೇವಿ ಕಮತಗಿ, ಅಪ್ಪಣ್ಣ ಸನದಿ.
ಚುನಾವಣೆ ಪ್ರಕ್ರಿಯೇ ಸಂದರ್ಭದಲ್ಲಿ ಮುಖಂಡರಾದ ರಾಮಣ್ಣ ಮಹಾರಡ್ಡಿ, ಬಿ.ಎಸ್ ಅಳಗೋಡಿ, ಎನ್.ಎಸ್.ಎಫ್ ಅತಿಥಿ ಗೃಹದ ನಿಂಗಪ್ಪ ಕುರಬೇಟ, ಎಲ್ ಆರ್ ಸಂಕ್ರಿ, ಎಸ್.ಎ ಕಮಲದಿನ್ನಿ, ಡಿ.ಡಿ ದೇಸಾಯಿ, ಆರ್.ಎಸ್ ಗುತ್ತಿಗೂಳಿ, ಜಿ.ಡಿ ಹರಿಜನ, ಪುಂಡಲೀಕ ದಳವಾಯಿ, ಮಾರುತಿ ದಳವಾಯಿ, ಹನಮಂತ ಮಾವಿನಗಿಡದ, ಮಲ್ಲಯ್ಯ ಹಿರೇಮಠ, ರಾಮಚಂದ್ರ ತೋಟಗಿ, ಶಿವಾನಂದ ಬಡಿಗೇರ, ಭರಮಣ್ಣ ಪಾಶ್ಚಾಪೂರ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
Check Also
ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ
Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …