ಮೂಡಲಗಿ: ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಶಿಕ್ಷಕ ಸಂಘಟನೆಗಳು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಹಾಯ ಮತ್ತು ಸಹಕಾರದಿಂದ ಮಾತ್ರ ಸಾಧ್ಯವಾಗುವದು. ವಿದ್ಯಾರ್ಥಿಗಳ ಕಲಿಕಾ ಸಾಮಥ್ರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕ ಸಮೂಹ ಅವಿರತ ಪ್ರಯತ್ನಪಡುತ್ತಿರುವಾಗ ಸಂಘಟನೆಗಳು ಅವರ ಬೆಂಬಲಕ್ಕೆ ನಿಂತು ಅವರಿಗೆ ಬೇಕಾಗಿರುವ ಸೌಲಭ್ಯಗಳನ್ನು ಒದಗಿಸುವದು ಶಿಕ್ಷಕ ಸಂಘಟನೆಯ ಪಾತ್ರ ಬಹುಮುಖ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ ಮನ್ನಿಕೇರಿ ಹೇಳಿದರು.
ಅವರು ನಗರದ ಬಿಇಒ ಕಛೇರಿಯಲ್ಲಿ ಜರುಗಿದ 2020-25 ನೇ ಸಾಲಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯ ಅವಿರೋಧ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೂಡಲಗಿ ವಲಯವು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಲು ಇಲ್ಲಿಯ ಗುರು ಬಳಗದ ಅವಿರತ ಪ್ರಯತ್ನದ ಫಲವಾಗಿದೆ. ಸ್ಥಳೀಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ನಿರಂತರ ಶೈಕ್ಷಣಿಕ ಮಾರ್ಗದರ್ಶನ ಹಾಗೂ ಅವರ ಕೊಡುಗೆ ಅಪಾರವಾರಗಿದೆ. ಶಿಕ್ಷಕ ಸಮೂಹದಲ್ಲಿ ಒಡಕಿರಲಾರದೆ ಅವಿರೋಧವಾಗಿ ಆಯ್ಕೆಯಾಗಿರುವದು ಸಂತಸದ ವಿಷಯವಾಗಿದೆ. ಶಿಕ್ಷಕರಿಗೆ ಆಗುವ ಅನಾನುಕೂಲಗಳು ಹಾಗೂ ಅವರಿಗೆ ಸಿಗುವ ಸೌಲಭ್ಯಗಳನ್ನು ಒದಗಿಸುವಲ್ಲಿ ಚುನಾಯಿತ ಶಿಕ್ಷಕ ಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಚುನಾಯಿತ ಪ್ರತಿನಿಧಿಗಳು ಶಿಕ್ಷಕ ಸ್ನೇಹಿಯಾಗಿ ಕಾರ್ಯನಿರ್ವಹಿಸಿ ಉತ್ತಮ ಭಾಂದವ್ಯ ವೃದ್ಧಿಸಿಕೊಳ್ಳಬೇಕು. ಇಲಾಖೆಯಲ್ಲಿ ಸರಿ ತಪ್ಪುಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಬೇಗ ಇತ್ಯರ್ಥಗೊಳಿಸಲು ಪ್ರಯತ್ನಿಸಬೇಕು. ಸಮುದಾಯದ ಸಹಕಾರದೊಂದಿಗೆ ಶಾಲೆಗಳ ಅಭಿವೃದ್ಧಿಯ ಸಲುವಾಗಿ ಕೈಜೊಡಿಸಬೇಕು. ಕಲಿಕೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವ ಮೂಲಕ ತಮ್ಮ ಮೇಲಿರುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದು ನುಡಿದರು.
ಚುನಾವಣಾಧಿಕಾರಿ ಎಸ್.ಬಿ ತುಪ್ಪದ ಮಾತನಾಡಿ, ಮೂಡಲಗಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಚುನಾವಣೆಯಲ್ಲಿ ಸಹಕರಿಸಿದ ವಲಯದ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಅದೇ ರೀತಿ ತಾಲೂಕಾ, ಜಿಲ್ಲೆ, ರಾಜ್ಯ ಹಂತದ ಚುನಾವಣೆಗಳಲ್ಲಿ ಯಶಸ್ವಿಯಾಗಿ ಜರುಗಲು ಸಹಕರಿಸಿರಿ ಎಂದರು.
ಸನ್ಮಾನಿತ ನೂತನ ಸದಸ್ಯರು : ಎಸ್.ಎಂ. ಲೋಕನ್ನವರ, ಎಂ.ವಾಯ್. ಸಣ್ಣಕ್ಕಿ, ಬಿ.ಬಿ. ಕೇವಟಿ, ಆರ್.ಎಂ. ಮಹಾಲಿಂಗಪೂರ, ಎ.ಪಿ. ಪರಸನ್ನವರ, ಎಂ.ಜಿ. ಮಾವಿನಗಿಡದ, ಎಲ್.ಎಂ. ಬಡಕಲ್, ಕೆ.ಎಲ್. ಮೀಸಿ, ಎಲ್.ಎಂ. ಭೂಮನ್ನವರ, ವಾಯ್.ಡಿ. ಝಲ್ಲಿ, ಬಿ.ಎಲ್. ನಾಯಿಕ, ಬಿ.ಎ. ಡಾಂಗೆ, ಎಸ್.ಎಂ. ಕುರಣಗಿ, ಎಂ.ಎಂ. ಕಳಸನ್ನವರ, ಸುನೀತಾ ಎಸ್, ಲಕ್ಷ್ಮೀ ಹೆಬ್ಬಾಳ, ಎಲ್.ಎಸ್. ಯಲಿಗಾರ, ವ್ಹಿ.ಎಂ. ಪೂಜೇರಿ, ಆರ್.ಎಂ. ಹುಣಶ್ಯಾಳಕರ, ಎಸ್.ಜಿ. ರಾಮದುರ್ಗ ಇವರನ್ನು ಸನ್ಮಾನಿಸಿ ಪ್ರಮಾಣ ಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಕಛೇರಿಯ ಪಂತ್ರಾಂಕಿತ ವ್ಯವಸ್ಥಾಪಕ ಪಿ.ಎಚ್ ಒಂಟಿ, ಅಧೀಕ್ಷಕರಾದ ಎಸ್.ಕೆ. ಶೇಖ, ಆರ್.ಎ ತಳವಾರ, ಇಸಿಒ ಸತೀಶ ಬಿ ಎಸ್, ಸಿ.ಆರ್.ಪಿ ಎಸ್ ಎನ್ ದಬಾಡಿ, ಆರ್.ಎ ಬ್ಯಾಳಿ, ಎಚ್ ಎಸ್ ಜಗದಾಳೆ, ಎಸ್ ಬಿ ಪೂಜೇರಿ, ಸಮ್ಮೇದ ಬಾಬನ್ನವರ, ಎಸ್.ಎಸ್ ಪಾಟೀಲ, ಎಸ್ ಎಮ್ ದಬಾಡಿ, ಎಸ್ ಎಲ್ ಪಾಟೀಲ, ಪಿ.ಬಿ ಕುಲಕರ್ಣಿ ಮತ್ತಿತರರು ಭಾಗವಹಿಸಿದ್ದರು.
Check Also
ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ
Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …