ಶುಕ್ರವಾರ , ಮಾರ್ಚ್ 29 2024
kn
Breaking News

ಅಗ್ನಿಶಾಮಕ ದಳದ ಕಾರ್ಯ ಶ್ಲಾಘನೀಯ : ಬಿಇಒ ಅಜಿತ ಮನ್ನಿಕೇರಿ

Spread the love

ಮೂಡಲಗಿ: ಅಗ್ನಿ ಅವಗಡಗಳನ್ನು, ಪ್ರಾಕೃತಿಕ ವಿಕೋಪಗಳನ್ನು ತಡೆದು ಪ್ರಾಣ ಹಾನಿಯಾಗದ ರೀತಿಯಲ್ಲಿ ಜೀವದ ಹಂಗನ್ನು ಪಣಕ್ಕಿಟ್ಟು ಸಾರ್ವಜನಿಕರ ಹಾಗೂ ಪ್ರಾಣಿ ಪಕ್ಷಿ ಸಂಕುಲಕ್ಕೆ ವಿಶೇಷ ಸೇವೆ ನೀಡುವ ಅಗ್ನಿಶಾಮಕ ದಳದ ಕಾರ್ಯ ಶ್ಲಾಘನೀಯ ಎಂದು ಮೂಡಲಗಿ ಬಿಇಒ ಅಜಿತ ಮನ್ನಿಕೇರಿ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಯ ಗೋಕಾಕ ಅಗ್ನಿಶಾಮಕ ಠಾಣೆ, ಬಿ.ಇ.ಒ, ಬಿ.ಆರ್.ಸಿ ಕಛೇರಿಗಳ ಸಂಯುಕ್ತಾಶ್ರಯಲ್ಲಿ ಜರುಗಿದ ಸಕಾಲ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಆಕಸ್ಮಿಕವಾಗಿ ಉಂಟಾಗುವ ಬೆಂಕಿಯನ್ನು ಆರಿಸುವುದು ಇತರೆಡೆಗೆ ಹರಡದಂತೆಯೂ ಈ ದಳ ನೋಡಿಕೊಳ್ಳುತ್ತದೆ. ಈ ದಳದ ನೆರವಿನಿಂದಾಗಿ ಬೆಂಕಿ ಅಪಘಾತದಿಂದ ಉಂಟಾಗುವ ಪ್ರಾಣಹಾನಿ, ಆಸ್ತಿ ಪಾಸ್ತಿಗಳ ನಷ್ಟ ಕಡಿಮೆಯಾಗುವ ಅವಕಾಶವಿದೆ. ಶಾಲಾ ಪರಿಸರದಲ್ಲಿ ಆಕಸ್ಮಿಕ ಬೆಂಕಿ ಅವಗಡ ಹಾಗೂ ನೀರಿನಿಂದಾಗುವ ಪ್ರಾಣ ಹಾನಿಯ ಸಂದರ್ಭದಲ್ಲಿ ರಕ್ಷಿಸುವ ಕೌಶಲ್ಯಗಳು ಗೊತ್ತಿದ್ದರೆ ತಪ್ಪಿಸಬಹುದು ಎಂದರು.
ಸರಕಾರಿ ಶಾಲೆಗಳಲ್ಲಿ ಮದ್ಯಾಹ್ನದ ಬಿಸಿಯೂಟ ಇರುವದರಿಂದ ಗ್ಯಾಸ್‍ನ ಬಳಕೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದರೆ ಶಾಲಾ ಸಿಬ್ಬಂದಿ ಹಾಗೂ ಅಡುಗೆ ಸಿಬ್ಬಂದಿಯವರಿಗೆ ಬೆಂಕಿ ಆರಿಸುವ ತಂತ್ರಗಾರಿಕೆಗಳು ಅವಶ್ಯಕವಾಗಿವೆ. ಪ್ರಮುಖವಾಗಿ ದೈಹಿಕ ಶಿಕ್ಷಕರು ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿತಿರಬೇಕು. ಶಾಲೆ ಶಿಕ್ಷಕರಿಗೆ ಹಾಗೂ ಬಿಸಿಯೂಟದ ಸಿಬ್ಬಂದಿಯವರಿಗೆ ಮನವರಿಕೆ ಮಾಡಿಕೊಟ್ಟು ಮುಂದಾಗುವ ಅನಾಹುತಗಳನ್ನು ತಡೆಗಟ್ಟಬಹುದು. ವಿದ್ಯಾರ್ಥಿಗಳಿಗೆ ಆಕಸ್ಮಿಕವಾಗಿ ಜರುಗುವ ಅವಗಡಗಳ ಕುರಿತು ಮನವರಿಕೆ ಮಾಡಿಕೊಟ್ಟು ಅವರ ಪ್ರಾಣಹಾನಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅಗ್ನಿಶಾಮಕ ದಳದ ಇಬ್ರಾಹಿಂ ಮುಲ್ತಾನಿ ಮಾತನಾಡಿ, ಸಕಾಲ ಅಡಿಯಲ್ಲಿ ಬಹುಮಹಡಿ ಕಟ್ಟಡಗಳಿಗೆ ನಿರ್ಮಾಣ ಪೂರ್ವದಲ್ಲಿ ಅಗ್ನಿಶಾಮಕ ಇಲಾಖೆಯಿಂದ ನೀಡಲಾಗುವ ನಿರಾಪೇಕ್ಷಣಾ ಪತ್ರ, ಬೆಂಕಿ ಆಕಸ್ಮಿಕದ ತುರ್ತು ಕರೆಗೆ ಪ್ರತಿಕ್ರಿಯೆ, ಅಪಘಾತ, ನೈಸರ್ಗಿಕ ವಿಪತ್ತು, ರಕ್ಷಣಾ ಕಾರ್ಯ ಮತ್ತು ವಿಪತ್ತು ನಿರ್ವಹಣೆಯ ತುರ್ತು ಕರೆಗಳಿಗೆ ಪ್ರತಿಕ್ರಿಯೆ, ಪಟಾಕಿಗಳ ಲೈಸನ್ಸಗಾಗಿ ನಿರಾಪೇಕ್ಷಣಾ ಪತ್ರಗಳು ಬರುತ್ತವೆ. ಶಿಕ್ಷಕರು ಪ್ರಮುಖವಾಗಿ ಶಾಲಾ ಅಡುಗೆ ಕೊಠಡಿ, ಹಾಗೂ ಮೈದಾನಗಳಲ್ಲಿ ಕಸಕಡ್ಡಿಗಳ ಗುಂಪು, ತೆರೆದ ಕೊಳವೆ ಬಾಂವಿ, ಕೊಳವೆ ಬಾವಿ, ಕೆನಾಲ ಹಾಗೂ ಹಳ್ಳಗಳಿಂದಾಗಿ ಜರುಗುವ ಪ್ರಾಣಹಾನಿಯನ್ನುಂಟು ಮಾಡುವದರ ಕುರಿತು ಮನವರಿಕೆ ಅತ್ಯಾಗತ್ಯವಾದ್ದು ಸಿಬ್ಬಂದಿ ಹಾಗೂ ಮಕ್ಕಳ ಹಿತದೃಷ್ಠಿಯಿಂದ ಮುಂದಾಗುವ ಅನಾಹುತಗಳ ಮನವರಿಕೆ ಅವಶ್ಯಕವಾಗಿದೆ ಎಂದರು.
ತರಭೇತಿ ಸಂದರ್ಭದಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರಾತ್ಯಕ್ಷಿಕವಾಗಿ ತೋರಿಸಿಕೊಟ್ಟರು. ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ನಡೆಯುವ ಕೇಲವು ಆಚಾತುರ್ಯಗಳು ಹಾಗೂ ಅವು ಜರುಗದಂತೆ ಮುನ್ನಚ್ಚರಿಕೆಯಾಗಿರುವ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಗೋಕಾಕ ಅಗ್ನಿಶಾಮಕ ದಳ ಠಾಣಾಧಿಕಾರಿ ಎಸ್ ಎಮ್ ಮೇಳವಂಕಿ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಚ್ ಮೋರೆ, ಬಿ.ಆರ್.ಪಿಗಳಾದ ಜಿ.ಆರ್ ಪತ್ತಾರ, ಐ.ಎಸ್ ಬಡಿಗೇರ, ಪ್ರಧಾನ ಗುರುಮಾತೆ ಡಿ.ಎಚ್ ಹದಲಿ, ಎಡ್ವಿನ್ ಪರಸನ್ನವರ, ಅಗ್ನಿ ಶಾಮಕ ಸಿಬ್ಬಂದಿಗಳಾದ ಎಸ್.ಆರ್. ಚೌವ್ಹಾನ್, ಎಸ್. ಎಸ್. ಮಗದುಮ್, ಎಸ್. ಎಮ್. ಚೌಧರಿ ಹಾಗೂ ಮೂಡಲಗಿ ವಲಯದ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಶಿಕ್ಷಕಿಯವರು ಹಾಜರಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page