ಮೂಡಲಗಿ: ಜಗತ್ತಿಗೆ ಅಹಿಂಸಾತ್ಮಕದ ಶಕ್ತಿಯ ಅರಿವು ಮೂಡಿಸಿದ ಮಹಾತ್ಮ ಗಾಂಧೀಜಿಯವರ ಸರಳ ವ್ಯಕ್ತಿತ್ವ ಮತ್ತು ನೇರ ನಿಷ್ಠುರ ವ್ಯಕ್ತಿತ್ವದ ಶಾಂತಿ ಸರಳತೆಯ ಲಾಲ ಬಹದ್ದೂರ ಶಾಸ್ತ್ರೀಜಿಯವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಡಿ ಎಸ್ ಎಸ್ ಜಿಲ್ಲಾ ಸಂಚಾಲಕ, ಪುರಸಭೆ ಮಾಜಿ ಸದಸ್ಯ ರಮೇಶ ಸಣ್ಣಕ್ಕಿ ಹೇಳಿದರು.
ಇಲ್ಲಿನ ಅಂಬೇಡ್ಕರ ನಗರದ ಮಹಾ ನಾಯಕ ಡಾ. ಬಿ.ಆರ್ ಅಂಬೇಡ್ಕರ ಮಂದಿರದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ ಬಹದ್ದೂರ ಶಾಸ್ತ್ರೀ ಅವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ದೀನ ದಲಿತರ ಉದ್ದಾರಕ್ಕಾಗಿ, ದೇಶದ ಅಭಿವೃದ್ದಿಗೆ ಇವರ ಕೊಡುಗೆ ಅಪಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಶಾಬಪ್ಪ ಸಣ್ಣಕ್ಕಿ, ವಿಲಾಸ ಸಣ್ಣಕ್ಕಿ, ಅಶೋಕ ಸಿದ್ಲಿಂಗೆಪ್ಪಗೋಳ, ಸುಂದರ ಬಾಲಪ್ಪನವರ, ಬಸೀರ ನದಾಫ್, ಮಹ್ಮದ ಕಿತ್ತೂರ, ಶರೀಫ್ ಮಗತುಮನವರ, ಜುನೇದ್ ಕಡಕೋಳ, ರಾಜು ಅರಳಿಮಟ್ಟಿ ಸೇರಿದಂತೆ ಮತ್ತಿತರರು ಇದ್ದರು.
