ಬುಧವಾರ , ಜನವರಿ 22 2025
kn
Breaking News

ಗುರುವಿನ ಸೇವೆ ಸ್ಮರಿಸಿ ಗುರುಗಳನ್ನು ಗೌರವಿಸುವುದು ಶ್ರೇಷ್ಠ ಕೆಲಸ:ಗಜಾನನ ಮನ್ನಿಕೇರಿ

Spread the love

ಮೂಡಲಗಿ: ಗುರುವಿನ ಸೇವೆ ಸ್ಮರಿಸಿ ಗುರುಗಳನ್ನು ಗೌರವಿಸುವುದು ಶ್ರೇಷ್ಠ ಕೆಲಸ ಎಂದು ಧಾರವಾಡದ ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು.
ಇಲ್ಲಿನ ಕೇಳಕರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿರುವ ಸನ್ 2002- 2003 ನೆಯ ಸಾಲಿನ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ತಂದೆ-ತಾಯಿ ಹಾಗೂ ಗುರುವಿನ ಸ್ಮರಣೆ ಮಾಡುವುದರಿಂದ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಹೊರಹೊಮ್ಮುತ್ತಾರೆ. ಹೀಗಾಗಿ ಗುರುವಿನ ಸ್ಮರಣೆ ಮಾಡುವುದು ಅವಶ್ಯಕವಾಗಿದೆ ಎಂದರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯ ಮೂಡಲಗಿ ವಲಯದಲ್ಲಿಯೇ ಕುಲಗೋಡ ವಲಯ ಶೈಕ್ಷಣಿಕವಾಗಿ ಹೆಚ್ಚು ಪ್ರಗತಿಯಾಗಿರುವುದು ಸಂತಸ ತಂದಿದೆ ಎಂದರು.
ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ. ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸುವುದರ ಜೊತೆಗೆ ಎಲ್ಲ ಸ್ನೇಹಿತರನ್ನು ಭೇಟಿ ಮಾಡಿ ಕುಶಲೋಪರಿ ಹಂಚಿಕೊಳ್ಳುವುದು ಒಳ್ಳೆಯ ಬೆಳವಣಿಗೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಂಬಂಧ ಎನ್ನುವುದು ಮರಿಚಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಎಲ್ಲರನ್ನು ಕೂಡಿಸಿ ಕುಶಲೋಪರಿ ಹಂಚಿಕೊಳ್ಳುವುದು ಸಂತಸ ಮೂಡಿಸಿದೆ ಎಂದರು.
ಶಿಕ್ಷಕರಾದ ವ್ಹಿ.ಯು.ರಡ್ಡೇರಟ್ಟಿ ಹಳೆ ವಿದ್ಯಾರ್ಥಿಗಳಾದ ಹಣಮಂತ ಚನ್ನಾಳ, ಸತೀಶ ಚಂದರಗಿ, ರಂಜನಾ ಯಕ್ಸಂಬಿ ಅನಿಸಿಕೆ ಹಂಚಿಕೊಂಡರು.
ಆರಂಭದಲ್ಲಿ ನಿವೃತ್ತ ದೈಹಿಕ ಶಿಕ್ಷಕರು ಹಾಗೂ ಹಿರಿಯರಾದ ಎಸ್.ಬಿ.ಶಿಂಧೆ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಎಲ್.ಆರ್.ಭಜಂತ್ರಿ ವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷ ಎಸ್.ಜಿ.ಪಂಡಿತ, ಶಿಕ್ಷಕರಾದ ಜಿ.ಎಸ್.ಗಾಣಿಗೇರ, ಎಸ್.ಎ.ಮುತ್ತೇನ್ನವರ,  ಎಸ್.ಆರ್.ಕೆಳಗಡೆ, ಟಿ.ಬಿ.ದೇವರ, ಎಲ್.ಕೆ.ಹೊಸಮನಿ, ಬಿ.ಎಲ್.ಜೊತೆನ್ನವರ, ಬಿ.ವೈ.ಭಜಂತ್ರಿ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಸಚೀನ ಬಾರ್ಕಿ ಸ್ವಾಗತಿಸಿದರು. ಮಹಾದೇವ ಪೂಜೇರಿ ಪ್ರಾಸ್ತಾವಿಕ ಮಾತನಾಡಿದರು. ಸಂಗಪ್ಪ ಪೆಟ್ಲೂರ ಮತ್ತು ಜಯಶ್ರೀ ಅವಟಿಮಠ ನಿರೂಪಿಸಿದರು. ಗಾಳೇಪ್ಪ ಹೆಗಡೆ ವಂದಿಸಿದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page