ಗುರುವಾರ , ಜೂನ್ 20 2024
kn
Breaking News

ಉಪ್ಪಾರ ಸಮಾಜದಿಂದ ಅ.೨೧ರಂದು ಸಾಂಕೇತಿಕವಾಗಿ ಮೂಡಲಗಿ ಪಟ್ಟಣದಲ್ಲಿ ತಹಶೀಲ್ದಾರ ಮೂಲಕ ಸಿಎಂ ಅವರಿಗೆ ಮನವಿ: ಬಿ ಬಿ ಹಂದಿಗುoದ

Spread the love

ಮೂಡಲಗಿ: ಉಪ್ಪಾರ ಸಮಾಜವನ್ನು ಎಸಿ-ಎಸ್ಟಿಗೆ ಸೇರಿಸಬೇಕೆಂಬ ಉದ್ದೇಶದಿಂದ ಅನೇಕ ವರ್ಷಗಳ ಕಾಲದಿಂದಲೂ ಹೋರಾಟ ಮಾಡುತ್ತಾ ಬಂದಿದ್ದು, ಸರ್ಕಾರ ನಮ್ಮ ಹೋರಾಟಕ್ಕೆ ಇಲ್ಲಿಯವರೆಗೂ ಸ್ಪಂದಿಸಿಲ್ಲ ಆದರಿಂದ ತಾಲೂಕಿನ ಉಪ್ಪಾರ ಸಮಾಜದಿಂದ ಅ.೨೧ರಂದು ಸಾಂಕೇತಿಕವಾಗಿ ಸುಮಾರು ಹತ್ತು ಸಾವಿರ ಜನ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಸೇರಿ ತಹಶೀಲ್ದಾರ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಲಾಗುವುದೆಂದು ಎಂದು ಸಮಾಜ ಹಿರಿಯ ಮುಖಂಡ ಬಿ ಬಿ ಹಂದಿಗುoದ ಹೇಳಿದರು.
ಶನಿವಾರದಂದು ಪಟ್ಟಣದ ಈರಣ್ಣ ದೇವಸ್ಥಾನದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.೨೧ರಂದು ಪಟ್ಟಣದ ಈರಣ್ಣ ದೇವಸ್ಥಾನದಿಂದ ಪಾದಯಾತ್ರೆ ಮೂಲಕ ಕಲ್ಮೇಶ್ವರ ವೃತ್ತಕ್ಕೆ ಆಗಮಿಸಿ ಕೆಲ ಕಾಲ ಪ್ರತಿಭಟಿಸಿ, ತಹಶೀಲ್ದಾರ ಮೂಲಕ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಗುವುದು. ದೀಪವಾಳಿ ನಂತರ ದಿನಗಳಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಿನಿಂದ ಸುಮಾರು ೨೫ ಸಾವಿರ ಜನರು ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಶ್ರೀ ಭಗೀರಥ ಉಪ್ಪಾರ ಸಮಾಜ ಸೇವಾ ಸಂಘ ಅಧ್ಯಕ್ಷ ಶಿವಬಸು ಹಂದಿಗುoದ ಹಾಗೂ ಮುಖಂಡ ಬಸವರಾಜ ಖಾನಪ್ಪನ್ನವರ ಮಾತನಾಡಿ, ಸ್ವತಂತ್ರದ ಹೋರಾಟ ಸಂದರ್ಭದಲ್ಲಿ ಸಹ ಉಪ್ಪಾರ ಸಮಾಜ ಜನರು ಹೋರಾಟ ಮಾಡಿದ್ದಾರೆ ಆದರೂ ಸಹ ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಭರವಸೆಗಳನ್ನು ಮಾತ್ರ ನೀಡಿ ಮತಗಳನ್ನು ಪಡೆದುಕೊಳ್ಳುತ್ತಾರೆ ಹೊರೆತು, ಉಪ್ಪಾರ ಸಮಾಜ ಜನರಿಗೆ ಯಾವುದೇ ಬೇಡಿಕೆಗಳನ್ನು ಈಡೇರಿಸುವಂತ ಕಾರ್ಯ ಮಾಡಿಲ್ಲ. ಆದರಿಂದ ಮುಂದಿನ ದಿನಮಾನಗಳಲ್ಲಿ ಸಮಾಜದ ಶ್ರೀಗಳ ನೇತೃತ್ವದಲ್ಲಿ ಬೆಂಗಳೂರು ವರೆಗೂ ಪಾದಯಾತ್ರೆ ಮೂಲಕ ನೇರವಾಗಿ ಸಿಎಂ ಅವರಿಗೆ ಮನವಿ ಸಲ್ಲಿಸಲಾಗುವುದು ಆದರಿಂದ ತಾವುಗಳು ಶಿಘ್ರವಾಗಿ ನಮ್ಮ ಸಮಾಜವನ್ನು ಎಸಿ-ಎಸ್ಟಿಗೆ ಸೇರಿಸಬೇಕು ಇಲ್ಲಾದರೇ ಚುನಾವಣೆ ಸಂದರ್ಭದಲ್ಲಿ ಮತವನ್ನು ಚಲಾಯಿಸುವುದನ್ನು ಬಹಿಷ್ಕರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೂಡಲಗಿ ತಾಲೂಕಾ ಅಧ್ಯಕ್ಷ ರಾಮಣ್ಣ ಹಂದಿಗುoದ, ಸಮಾಜ ಮುಂಖಡರಾದ ಕುಶಾಲ ಗೋಡೆನ್ನವರ, ಶಿವಪ್ಪ ಮರ್ದಿ, ಸುಭಾಷ ಪೂಜೇರಿ, ಬಿ ಎಸ್ ತಿಗಡಿ, ಲಕ್ಷ್ಮಣ ಬಂಡ್ರೋಳಿ, ಶಿವಪ್ಪ ಅಟಮಟ್ಟಿ, ಸಾಬಪ್ಪ ಬಂಡ್ರೋಳಿ, ಶಂಭುಲಿoಗ ಮುಕ್ಕನ್ನವರ, ಬಾಳಪ್ಪ ಹುದ್ದಾರ, ಹಣಮಂತ ಕಂಕಣವಾಡಿ,ಪರಸಪ್ಪ ಉಪ್ಪಾರ, ಹಾಗೂ ಸಮಾಜದ ಬಾಂಧವರು ಇದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page