ಭಾನುವಾರ , ಮೇ 28 2023
kn
Breaking News

ಡಾ.ಅಶೋಕ ದಳವಾಯಿಯವರ ಜೀವಮಾನ ಸಾಧನೆಗೆ ‘ಪೋಷಕ ಅನಾಜ’ ಪ್ರಶಸ್ತಿ

Spread the love

ಮೂಡಲಗಿ: ಭಾರತ ಸರಕಾರದ ಹಿರಿಯ ಅಧಿಕಾರಿ, ಕೃಷಿತಜ್ಞ ಮತ್ತು ಅನುಭವಿ ಆಡಳಿತಗಾರರಾದ ಡಾ.ಅಶೋಕ ದಳವಾಯಿಯವರ ಜೀವಮಾನ ಸಾಧನೆ ಗುರುತಿಸಿ ಅವರಿಗೆ ೨೦೨೨ ನೇ ಸಾಲಿನ ‘ಪೋಷಕ ಅನಾಜ’ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಪ್ರತಿಷ್ಟಿತ ಭಾರತೀಯ ಕೃಷಿ ಸಂಶೋಧನ ಅನುಸಂಧಾನ ನವದೆಹಲಿ ಇವರ ಅಧೀನ ಹೈದರಾಬಾದನ ಸಂಸ್ಥೆಯಾದ ಭಾರತೀಯ ಕಿರುಧಾನ್ಯ ಅಭಿವೃದ್ಧಿ ಸಂಸ್ಥೆಯವರು ಸಪ್ಟೆಂಬರ ೨೩ ರಂದು ಹೈದರಾಬಾದನಲ್ಲಿ ನಡೆಯುವ ವಿಷೇಶ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡುತ್ತಿದ್ದಾರೆ. ದಳವಾಯಿಯವರು ಕಳೆದ ನಾಲ್ಕು ದಶಕಗಳ ಕಾಲ ಆಡಳಿತ, ಕೃಷಿ, ಸಾರ್ವಜನಿಕ ಜೀವನ ಮತ್ತು ವಿಶೇಷವಾಗಿ ಕಿರುಧಾನ್ಯಗಳ ಅಭಿವೃದ್ಧಿ ಮತ್ತು ಪ್ರಚಾರಕ್ಕಾಗಿ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಈ ಪ್ರತಿಷ್ಟಿತ ಪ್ರಶಸ್ತಿ ನೀಡಲಾಗುತ್ತಿದೆ. ೧೯೮೪ನೇ ತಂಡದ ಐಎಎಸ್ ಅಧಿಕಾರಿಯಾದ ದಳವಾಯಿಯವರ ಕೊಡುಗೆಯನ್ನು ಗುರುತಿಸಿ ಈಗಾಗಲೇ ದೇಶಾದ್ಯಂತ ಐದು ಪ್ರತಿಷ್ಟಿತ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿ ನೀಡಿದ್ದು ಇನ್ನೂ ಹಲವಾರು ಗೌರವಗಳು ಸಂದಿವೆ. ದಳವಾಯಿಯವರು ಇನ್ನೂ ಹೆಚ್ಚಿನ ಸ್ಥಾನ, ಮಾನ ಪಡೆಯಲಿ ಎಂದು ಅವರ ಅಭಿಮಾನಿಗಳು ಅಭಿನಂದಿಸಿದ್ದಾರೆ.


Spread the love

About gcsteam

Check Also

ಹಳೆಯ ಪಿಂಚಣಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ:ಬೀರಪ್ಪ ಅಂಡಗಿ

Spread the loveಕೊಪ್ಪಳ: ೧ನೇ ಏಪ್ರೀಲ್ ೨೦೦೬ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಲಾಗಿರುವ ನೂತನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page