ಮೂಡಲಗಿ : ಸಮೀಪದ ಧರ್ಮಟ್ಟಿ ಗ್ರಾಮದ ಧರ್ಮಟ್ಟಿ ವಿದ್ಯಾಲಯ ಧರ್ಮಟ್ಟಿಯಲ್ಲಿ ೭೫ ನೇ ಸ್ವಾತಂತ್ರ್ಯೋತ್ಸವ ಹಾಗೂ ಸಂಗೋಳ್ಳಿ ರಾಯಣ್ಣರ ಜನ್ಮ ದಿನೋತ್ಸವ ಅಂಗವಾಗಿ ರಾಜ್ಯ ಮಟ್ಟದ ಟಗರಿನ ಕಾಳಗದ ಸ್ಪರ್ಧೆಗಳು ಸೋಮವಾರ ಅ. ೧೫ ರಂದು ಜರುಗಲಿದ್ದು, ಉದ್ಘಾಟಕರಾಗಿ ಕೆ.ಎಮ್.ಎಫ್ ಅಧ್ಯಕ್ಷರು ಹಾಗೂ ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರು ಆಗಮಿಸುವರು ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹಾಲಲ್ಲಿ ಟಗರಿನ ಕಾಳಗ, ಎರಡಲ್ಲಿ ಟಗರು, ನಾಲ್ಕಲ್ಲಿ ಟಗರು, ಆರಲ್ಲಿ ಟಗರಿನ ಕಾಳಗ ಹಾಗೂ ಓಪನ ಟಗರಿನ ಕಾಳಗವು ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಪ್ರಾಯೋಜಕತ್ವದಲ್ಲಿ ಜರುಗುವವು. ಸ್ಪರ್ಧೆಯಲ್ಲಿ ನಿರ್ಣಾಯಕರ ನಿರ್ಣಯವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ. ನಂ ೮೭೨೨೩೩೫೫೬೩, ೯೬೩೨೪೫೦೪೬೪, ೯೬೩೨೬೮೫೯೪೫, ೮೯೭೧೩೭೬೩೫೦, ೯೬೧೧೪೯೧೫೬೯ ಸಂಪರ್ಕಿಸಲು ಕೋರಲಾಗಿದೆ.
