ಬುಧವಾರ , ಅಕ್ಟೋಬರ್ 9 2024
kn
Breaking News

ಗಿಡ ಮರ ಹಾಗೂ ಸಸ್ಯಗಳನ್ನು ನೆಟ್ಟು ಪೋಷಿಸುವದು ಅತ್ಯಾವಶ್ಯಕವಾಗಿದೆ : ಸಮೀರಅಹ್ಮದ ದಬಾಡಿ

Spread the love

ಮೂಡಲಗಿ: ಸರಕಾರಿ ಮತ್ತು ಖಾಸಗಿ ಕಛೇರಿಗಳಲ್ಲಿ, ಶಾಲಾ ಆವರಣ, ದೈವತ್ವವಿರುವ ಕ್ಷೇತ್ರಗಳು, ಪರಿಸರದಲ್ಲಿ ಗಿಡ ಮರ ಹಾಗೂ ಸಸ್ಯಗಳನ್ನು ನೆಟ್ಟು ಪೋಷಿಸುವದು ಅತ್ಯಾವಶ್ಯಕವಾಗಿದೆ ಎಂದು ಮೂಡಲಗಿ ಸಮೂಹ ಸಂಪನ್ಮೂಲ ವ್ಯಕ್ತಿ ಸಮೀರಅಹ್ಮದ ದಬಾಡಿ ಹೇಳಿದರು.
ಅವರು ಪಟ್ಟಣದ ಸಮೂಹ ಸಂಪನ್ಮೂಲ ಕೇಂದ್ರದ ಆವರಣದಲ್ಲಿ ಸಸಿ ನೇಡುವ ಮೂಲಕ ಚಾಲನೆ ನೀಡಿದರು. ಕೊರೋನಾ ಹಾಗೂ ಆಕಾಲಿಕ ಮಳೆಯಿಂದಾಗಿ ಶೈಕ್ಷಣಿಕ ಕಾರ್ಯಚಟುವಟಿಕೆಗಳು ಕುಂಠಿತವಾಗುತ್ತಿದೆ. ಬಿಡುವಿನ ಸಮಯದಲ್ಲಿ ಕಛೇರಿ ಸೌಂದರ್ಯ ಹಾಗೂ ಕಚೇರಿಯ ಮುಂದೆ ಸುಂದರವಾಗಿ ಕಾಣಲು ಅಲ್ಪ ಸ್ವಲ್ಪ ಕಾರ್ಯಚಟುವಟಿಕೆ ಮಾಡಲಾಗಿದೆ. ಬೇಗನೆ ಶೈಕ್ಷಣಿಕ ಕಾರ್ಯಗಳು ಪ್ರಾರಂಭವಾಗುವದಿದೆ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಡ್ವಿನ್ ಪರಸಣ್ಣವರ, ಮೂಡಲಗಿ ಸಮೂಹದ ಪ್ರಧಾನ ಗುರುಗಳಾದ ಎಸ್.ವಿ ಸೋಮವ್ವಗೋಳ, ಎಮ್.ಮಂಜುನಾಥ, ಎಸ್.ಎಚ್ ಯಡ್ರಾಂವಿ, ಬಿ.ಎಚ್ ಹುಲ್ಯಾಳ, ಎನ್.ಎಮ್ ಬಾಗವಾನ, ಎಸ್.ಬಿ ಕಳ್ಳಿಗುದ್ದಿ, ಎಸ್.ಎಸ್ ಕುಲಕರ್ಣಿ, ಎಸ್.ವ್ಹಿ ಕೋಪರ್ಡೆ ಮತ್ತಿತರರು ಉಪಸ್ಥಿತರಿದ್ದರು.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page