ಮೂಡಲಗಿ: ತಾಲ್ಲೂಕಿನ ಸುಣಧೋಳಿಯ ಶ್ರೀ ಜಡಿಸಿದ್ಧೇಶ್ವರ ಅರ್ಬನ್ ಕೋ. ಆಪ್ ಕ್ರೆಡಿಟ್ ಸೊಸೈಗೆ ಉಳಿದ ಅವಧಿಗಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚಂದ್ರಶೇಖರ ಅದೃಶಪ್ಪ ಗಾಣಿಗೇರ ಅವರು ಅವಿರೋಧವಾಗಿ ಆಯ್ಕೆಯಾಗಿರುವರು.
ಬೈಲಹೊಂಗಲ ಉಪವಿಭಾಗದ ಎಆರ್‌ಸಿಎಸ್ ಶಾಹೀನ್ ಅಖ್ತರ್ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿವರ್ಹಹಿಸಿ ಚಂದ್ರಶೇಖರ ಗಾಣಿಗೇರ ಅವರ ಆಯ್ಕೆಯನ್ನು ಘೋಷಣೆ ಮಾಡಿರುವರು.
ಸೊಸೈಟಿಯ ನಿರ್ದೇಶಕರಾದ ಕಲ್ಲಪ್ಪ ಕಮತಿ, ಮುರಿಗೆಪ್ಪ ಪಾಟೀಲ, ಮಾರುತಿ ದೇವನಗಳ, ರುದ್ರಪ್ಪ ಹಟ್ಟಿ, ಡಾ. ಬಸವರಾಜ ಮದಬಾವಿ, ಗಿರಿಜಾ ಬಿ. ಹೊಟ್ಟಿಹೊಳಿ, ಮಾರುತಿ ಭಜಂತ್ರಿ ಇದ್ದರು.
