ಮೂಡಲಗಿ: ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲ ಅನುಕೂಲಗಳೂ ಇರುವ ಆಸ್ಪತ್ರೆಗಳು ನಿರ್ಮಾಣವಾಗುತ್ತಿರುವದು ಶ್ಲಾಘಣೀಯ, ನೂತನ ಆರೋಗ್ಯ ಆಧಾರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸದುಪಯೋಗ ಎಲ್ಲರಿಗೂ ಆಗಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಅವರು ಶುಕ್ರವಾರ ಇಲ್ಲಿಯ ನಾಗಲಿಂಗ ನಗರದಲ್ಲಿ ಅಲ್ಲಮ ಪ್ರಭು ಪೌಂಡೇಶನ್‌ವತಿಯಿAದ ನೂತನವಾಗಿ ಪ್ರಾರಂಭಿಸಿರುವ ಆರೋಗ್ಯ ಆಧಾರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಉಧ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ಎಲ್ಲರಿಗೂ ದೊರೆಯಬೇಕು ಆ ನಿಟ್ಟಿನಲ್ಲಿ ಅಲ್ಲಮ ಪ್ರಭು ಪೌಂಡೇಶನ್‌ದವರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದರು.
ಸಾನಿಧ್ಯ ವಹಿಸಿದ್ದ ಸ್ಥಳೀಯ ಶ್ರೀಶವಬೋಧರಂಗ ಮಠದ ಪೀಠಾಧಿಕಾರಿಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮಿಗಳು ಹಾಗೂ ಬೆಂಡವಾಡದ ರೇಣಸಿದ್ದೇಶ್ವರ ವಿರಕ್ತ ಮಠದ ಶ್ರೀ ಗುರುಸಿದ್ದ ಸ್ವಾಮಿಗಳು ಆಶಿರ್ವಚನ ನೀಡಿದರು.
ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಙವೈದ್ಯ ಡಾ.ಮಹಾಂತೇಶ ಕಡಾಡಿ, ಡಾ.ಸಂಗಮೇಶ ಮಮದಾಪೂರ, ಡಾ.ಮಯೂರಿ ಕಡಾಡಿ, ಡಾ.ಸಂದೀಪ ಶಿರಹಟ್ಟಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಎಸ್.ಆರ್.ಸೋನವಾಲ್ಕರ, ಕೆ.ಟಿ.ಗಾಣಿಗೇರ, ಆರ್.ಬಿ.ನೇಮಗೌಡರ, ಡಾ.ಬಿ.ಎಮ್.ಪಾಲಬಾಂವಿ,ಮಾರುತಿ ಶಾಬನ್ನವರ, ಪ್ರಕಾಶ ಮಾದರ, ಮಲ್ಲಪ್ಪ ನೇಮಗೌಡರ ಮತ್ತಿತರರು ಉಪಸ್ಥಿತರಿದ್ದರು.
