ಸೋಮವಾರ , ಜೂನ್ 5 2023
kn
Breaking News

ಅರಣ್ಯವನ್ನು ಉಳಿಸಿ, ಪರಿಸರ ಬೆಳೆಸಿ : ಗಜಾನನ ಮನ್ನಿಕೇರಿ

Spread the love

ಗೋಕಾಕ: ಪರಿಸರವಿಲ್ಲದೆ ಮಾನವನ ಬದುಕು
ಅಸಾಧ್ಯ, ಅರಣ್ಯವನ್ನು ಉಳಿಸಿ,
ಬೆಳೆಸಿ ಪರಿಸರ ರಕ್ಷಣೆ
ಮಾಡುವಂತೆ
ಧಾರವಾಡದ ಅಪರ ಆಯುಕ್ತರ
ಕಾರ್ಯಾಲಯದ ಸಹ ನಿರ್ದೇಶಕ
ಗಜಾನನ ಮನ್ನಿಕೇರಿ ಹೇಳಿದರು.
ಅವರು ಶನಿವಾರದಂದು ಅರಣ್ಯ ಇಲಾಖೆಯ
ನರ್ಸರಿಯಲ್ಲಿ ಅರಣ್ಯ ಇಲಾಖೆ
ಸಹಯೋಗದಲ್ಲಿ ಶಿಕ್ಷಣ
ಇಲಾಖೆಯವರು ವಿವಿಧ ಶಾಲೆಗಳ
ವಿದ್ಯಾರ್ಥಿಗಳಿಗೆ ಬೀಜ ಉಂಡೆ
ತಯಾರಿಸುವ ಕಾರ್ಯಕ್ರಮಕ್ಕೆ
ಚಾಲನೆ ನೀಡಿ ಮಾತನಾಡುತ್ತಿದ್ದರು.
ನಿಸರ್ಗ ಎಲ್ಲಾ ಜೀವಿಗಳಿಗೆ ರಕ್ಷಣೆ
ನೀಡುತ್ತಿದೆ. ಜೀವಿಗಳು ಬದುಕಲು
ಆಮ್ಲಜನಕ ನೀರು ಆಹಾರ
ಸೇರಿದಂತೆ ಅತೀ ಅವಶ್ಯಕ
ವಸ್ತುಗಳನ್ನು ನೀಡುತ್ತಿದ್ದು ಇದರ
ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ.
ವಿದ್ಯಾರ್ಥಿಗಳು ಪರಿಸರ ರಕ್ಷಣೆಯ
ಮನೋಭಾವವನ್ನು ಬೆಳೆಸಿಕೊಂಡು
ಇತರರಿಗೆ ಅರಿವು ಮೂಡಿಸಬೇಕು.
ಜಿಲ್ಲೆಯಾದ್ಯಂತ 10 ಲಕ್ಷ ಬೀಜದ
ಉಂಡೆಗಳನ್ನು ತಯಾರಿಸಿ ಅರಣ್ಯ
ಇಲಾಖೆಗೆ ಹಸ್ತಾಂತರಿಸುವ ಈ
ಕಾರ್ಯಕ್ರಮವನ್ನು
ಯಶಸ್ವಿಗೊಳಿಸುವಂತೆ ಕರೆ
ನೀಡಿದರು.
ಈ ಕಾರ್ಯಕ್ರಮದಲ್ಲಿ ಸಹಾಯಕ
ಅರಣ್ಯ ಸಂರಕ್ಷಣಾಧಿಕಾರಿ
ರಾಜೇಶ್ವರಿ ಈರನಟ್ಟಿ, ವಲಯ
ಅರಣ್ಯ ಅಧಿಕಾರಿ ಕೆ.ಎನ್.ವಣ್ಣೂರ,
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ,
ಸಮನ್ವಯಾಧಿಕಾರಿ ಎಂ.ಬಿ.ಪಾಟೀಲ, ಎಲ್.ಕೆ
ತೋರಣಗಟ್ಟಿ, ಕಾರ್ಯದರ್ಶಿ ಯಲ್ಲಪ್ಪ ಸಣ್ಣಲಗಮಣ್ಣವರ ಹಾಗೂ ಸೌಟ್ಸ್ ಮತ್ತು
ಗೈಡ್ಸ್ ನ ವಿದ್ಯಾರ್ಥಿಗಳು, ಅರಣ್ಯ
ಇಲಾಖೆಯ ಸಿಬ್ಬಂದಿಗಳು
ಪಾಲ್ಗೊಂಡಿದ್ದರು.


Spread the love

About gcsteam

Check Also

ಹಳೆಯ ಪಿಂಚಣಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ:ಬೀರಪ್ಪ ಅಂಡಗಿ

Spread the loveಕೊಪ್ಪಳ: ೧ನೇ ಏಪ್ರೀಲ್ ೨೦೦೬ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಲಾಗಿರುವ ನೂತನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page