ಬುಧವಾರ , ಅಕ್ಟೋಬರ್ 9 2024
kn
Breaking News

ಮುಂದಿನ ಪೀಳಿಗೆಗೆ ಕ್ರೀಡೆಗಳ ಪರಿಚಯ ಮಾಡಿಕೊಡುವ ಅಗತ್ಯವಿದೆ: ವಿಕಾಸ ಕಿಶೋರ ಸುರಳ್ಕರ್

Spread the love

ಕೊಪ್ಪಳ: ಮುಂದಿನ ಪೀಳಿಗೆಗೆ ಕ್ರೀಡೆಗಳ‌ ಪರಿಚಯ ಮಾಡಿಕೊಡುವ ಅಗತ್ಯತೆಯು ಪ್ರತಿಯೊಬ್ಬರ ಮೇಲೆ ಇದೇ ಎಂದು ಜಿಲ್ಲಾಧಿಕಾರಿಗಳಾದ ವಿಕಾಸ ಕಿಶೋರ ಸುರಳ್ಕರ ಹೇಳಿದರು.
ಅವರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸರಕಾರಿ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ,ಪ್ರಸ್ತುತ ದಿನಮಾನಗಳಲ್ಲಿ ಅನೇಕ ತಂತ್ರಜ್ಞಾನದ ಪ್ರಭಾವದಿಂದ ಮಕ್ಕಳಲ್ಲಿ ಕ್ರೀಡಾ ಮನೋಭಾವ ಕಡಿಮೆ ಆಗಿದೆ.ಅಲ್ಲದೆ ಮಕ್ಕಳು ಕೇವಲ ಮೊಬೈಲ್ ಗಿಳಿಗೆ ಹೆಚ್ಚು ಒಳಗಾಗಿದ್ದಾರೆ.ಮೊಬೈಲ್ ನಲ್ಲೇ ಹೆಚ್ಚು ಮಕ್ಕಳು ಸಮಯ ಕಳೆಯುತ್ತಿರುವುದರಿಂದ ಅನೇಕ ಕ್ರೀಡೆಗಳ ಪರಿಚಯ ಇಲ್ಲದಂದಾಗಿದೆ.ಪ್ರಾಚೀನ ಕಾಲದಲ್ಲಿ ಅನೇಕ ಬಗೆಯ ಕ್ರೀಡೆಗಳಿದ್ದವು,ರಜೆಯ ಅವಧಿಯಲ್ಲಿ ಅಂತ್ತಾ ಕ್ರೀಡಾ ಚುಟವಟಿಕೆಗಳಲ್ಲಿ ಪ್ರತಿಯೊಬ್ಬ ಮಕ್ಕಳು ತೊಡಗುತ್ತಿದ್ದರು.ಆದರೆ ಪ್ರಸ್ತುತ ದಿನಮಾನ ಬದಲಾಗಿದೆ.ಆದ್ದರಿಂದ ನಾವೆಲ್ಲರೂ ಸೇರಿಕೊಂಡು ಮಕ್ಕಳಿಗೆ ನಮ್ಮ ಕ್ರೀಡೆಗಳ ಬಗ್ಗೆ ಪರಿಚಯ ಮಾಡಿಕೊಡುವುದರ ಜೊತೆಯಲ್ಲಿ ಅಂತ್ತಾ ಕ್ರೀಡೆಯಲ್ಲಿ ತೊಡಗುವಂತೆ ಮಾಡಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಆಗಿದೆ. ಪ್ರಾಚೀನ ಕಾಲದಲ್ಲಿ ಕ್ರೀಡೆಗೆ ಬೇಕಾಗುವ ಯಾವುದೇ ಸೌಲಭ್ಯಗಳು ಇರಲಿಲ್ಲಾ.ಆದರೆ ಇಂದು ಸರಕಾರ ಕ್ರೀಡೆಗಳಿಗಾಗಿ ಅನೇಕ‌ ರೀತಿಯ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.ಅದರ ಸರಿಯಾದ ಸದುಪಯೋಗ ಆಗಬೇಕಿದೆ.ಸರಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ನಿಮ್ಮ ಕ್ರೀಡಾ ಆಸಕ್ತಿ ತೋರಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ನಗರಸಭೆಯ ಅಧ್ಯಕ್ಷರಾದ ಲತಾ ಚಿನ್ನೂರ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಾಂತೇಶ ಪಾಟೀಲ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರಕಾರಿ ನೌಕರರ ‌ಸಂಘದ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಉಪಾಧ್ಯಕ್ಷರಾದ ನಾಗರಾಜ.ಆರ್.ಜುಮ್ಮಣ್ಣನ್ನವರ ಮಾತನಾಡುತ್ತಾ,ವರ್ಷದ ೩೬೩ ದಿನಗಳ ಸರಕಾರಿ ನೌಕರರು ರಾಜ್ಯದ ಶ್ರೀಸಾಮಾನ್ಯರ ಕೆಲಸ ಕಾರ್ಯದಲ್ಲಿ ತೊಡಗಿರುತ್ತಾರೆ.ಆದರೆ ವರ್ಷದ ೨ ದಿನಗಳ ಕಾಲ ಮಾತ್ರ ಇಂತಹ ಕ್ರೀಡಾಕೂಟದಲ್ಲಿ ಭಾವಹಿಸುತ್ತಾರೆ.ಸರಕಾರಿ ನೌಕರರ ಪ್ರತಿ ದಿನ‌ ತಮ್ಮ ಇಲಾಖಾ ಕಾರ್ಯದ ಒತ್ತಡದಲ್ಲಿ ಇರುತ್ತಾರೆ.ಅಂತಹ ಒತ್ತಡಗಳಿಂದ‌ ಹೊರಗಡೆ ಬರಬೇಕಾದರೆ ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಿದೆ.ಕ್ರೀಡಾಪಟುಗಳು ಕ್ರೀಡಾಕೂಟದ ಗೆಲ್ಲುವುದು ಅಥವಾ ಸೋಲುವುದು ಮುಖ್ಯವಲ್ಲ.ಅದಕ್ಕಿಂತಲೂ ಭಾಗವಹಿಸುವು ಬಹಳ ಮುಖ್ಯವಾಗಿದೆ.ಕ್ರೀಡಾಕೂಟದಲ್ಲಿ ಸೋಲು ಹಾಗೂ ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು.ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮ‌ ರೀತಿಯಲ್ಲಿ ಇರಿಸುವಲ್ಲಿ ಪ್ರಮುಖ ಪಾತ್ರವನ್ನು ಸರಕಾರಿ ನೌಕರರು ವಹಿಸಿದ್ದಾರೆ.ಕರೋನಾ ಎಂಬ ಕಷ್ಟ ಕಾಲದಲ್ಲಿ ಕೂಡಾ ತಮ್ಮ ಜೀವವನ್ನು ಲೆಕ್ಕಿಸದೇ ಉತ್ತಮ ರೀತಿಯಲ್ಲಿ ಸರಕಾರಿ ನೌಕರರರು ಕೆಲಸ ಮಾಡಿದ್ದರೆ. ರಾಜ್ಯದಲ್ಲಿ ಮೊದ‌ಲ ಭಾರಿಗೆ ವಿಕಲಚೇತನ ನೌಕರರ ಹಾಗೂ ದೈಹಿಕ ಶಿಕ್ಷಕರ ಕ್ರೀಡಾಕೂಟವನ್ನು ಆಯೋಜನೆ ಮಾಡಿದ ಕಿರ್ತಿ ನಮ್ಮ ಕೊಪ್ಪಳ ಜಿಲ್ಲಾ ಘಟಕಕ್ಕೆ ಸಲುತ್ತದೆ ಅದರಂತೆ ಎಪ್ರಿಲ್ ೧೩ ರಂದು ವಿಶೇಷ ಚೇತನ ನೌಕರರ ಹಾಗೂ ಎಪ್ರಿಲ್ ೧೪ ರಂದು ದೈಹಿಕ ಶಿಕ್ಷಕರ ಕ್ರೀಡಾಕೂಟವಿದೆ. ಸರಕಾರಿ ನೌಕರರ ಕ್ರೀಡಾಕೂಟದ ಯಶಸ್ವಿಗೆ ಕಾರಣಿಭೂತರಾದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಇದೇ ಸಮಯದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ, ಸರಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಮಾಲೀಪಾಟೀಲ,ಖಜಾಂಚಿ ಸುಶೀಲೇಂದ್ರರಾವ ದೇಶಪಾಂಡೆ,ಗೌರವಾಧ್ಯಕ್ಷರಾದ ಮುಸ್ತಾಪ ಕುದರಿಮೋತಿ,ಕಾರ್ಯಾಧ್ಯಕ್ಷರಾದ ಶಿವಪ್ಪ ಜೋಗಿ,ಯಲಬುರ್ಗಾ ತಾಲೂಕು ಅಧ್ಯಕ್ಷರಾದ ವಾಯ್.ಜಿ.ಪಾಟೀಲ,ಕಾರಟಗಿ ತಾಲೂಕು ಅಧ್ಯಕ್ಷರಾದ ಸರ್ದಾರ ಅಲಿ,ಗಂಗಾವತಿ ತಾಲೂಕು ಅಧ್ಯಕ್ಷರಾದ ಶರಣೇಗೌಡ ಪಾಟೀಲ,ಕುಷ್ಟಗಿ ತಾಲೂಕು ಅಧ್ಯಕ್ಷರಾದ ಶ್ರೀನಿವಾಸ ನಾಯಕ,ಕನಕಗಿರಿ ತಾಲೂಕು ಅಧ್ಯಕ್ಷರಾದ ವೆಂಕಟಮಧುಸೂಧನ,ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ವೆಂಕಟೇಶಗೌಡ ಗೌಡರ ಮುಂತಾದವರು ಹಾಜರಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page