ಸೋಮವಾರ , ಸೆಪ್ಟೆಂಬರ್ 9 2024
kn
Breaking News

ಶೈಕ್ಷಣಿಕ ಕಾರ್ಯಚಟುವಟಿಕೆಗಳು ಸುಗಮವಾಗಿ ಸಾಗುವಲ್ಲಿ ಸಮಯಕ್ಕೆ ಸರಿಯಾಗಿ ವಾಹನಗಳ ಲಭ್ಯತೆ ಅತ್ಯಾವಶ್ಯಕವಾಗಿದೆ : ಬಿಇಓ ಅಜಿತ್ ಮನ್ನಿಕೇರಿ

Spread the love

ಮೂಡಲಗಿ : ಶೈಕ್ಷಣಿಕ ಕಾರ್ಯಚಟುವಟಿಕೆಗಳು ಸುಗಮವಾಗಿ ಸಾಗುವಲ್ಲಿ ಸಮಯಕ್ಕೆ ಸರಿಯಾಗಿ ವಾಹನಗಳ ಲಭ್ಯತೆ ಅತ್ಯಾವಶ್ಯಕವಾಗಿದೆ. ಖಾಸಗಿ ಶಾಲೆಗಳ ವಾಹನ ಸೌಕರ್ಯಗಳು ಸುಲಭ ಹಾಗೂ ಸರಕ್ಷೀತವಾಗಿದ್ದರೆ ಪಾಲಕರಿಗೆ ಹಾಗೂ ಕಲಿಕೆಯಲ್ಲಿ ಶಿಕ್ಷಕರಿಗೆ ಅನುಕೂಲವಾಗುವದು ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು.
ಅವರು ರವಿವಾರ ಪಟ್ಟಣದ ಆರ್.ಡಿ. ಪದವಿ ಪೂರ್ವ ಕಾಲೇಜಿನಲ್ಲಿ ಬಿಇಒ ಕಾರ್ಯಾಲಯದಿಂದ ಆಯೋಜಿಸಿದ್ದ ತಾಲೂಕಾ ಮಟ್ಟದ ಖಾಸಗಿ ಶಾಲಾ ವಾಹನ ಚಾಲಕರ ಮತ್ತು ನಿರ್ವಾಹಕರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ವಾಹನ ಚಾಲಕರು ಖಡ್ಡಾಯವಾಗಿ ಚಾಲನಾ ಪರವಾಣಿಗೆ, ವಿಮೆ, ಹೊಗೆ ಪ್ರಮಾಣ ಪತ್ರ, ಸಾರಿಗೆ ಅಧಿಕಾರಿಗಳ ಅನುಮತಿ ಪಡೆದಿರಬೇಕು. ವಾಹನದ ಸುಸ್ಥಿತಿ ಕುರಿತು ಗಮನಿಸಬೇಕು. ವೇಗದ ಮಿತಿ, ವಿದ್ಯಾರ್ಥಿಗಳು ವಾಹನ ಹತ್ತುವಾಗ ಇಳಿಯುವಾಗ ರಸ್ತೆ ದಾಟುವಾಗ ಗಮನ ಹರಿಸಬೇಕು. ಚಾಲಕರ ಮತ್ತು ನಿರ್ವಾಹಕರ ಮಕ್ಕಳಿಗೆ ವಿನಾಯಿತಿ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಸಂಸ್ಥೆಗಳು ಸಹಕಾರ ನೀಡಬೇಕು. ಅಗತ್ಯ ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ಮುಗ್ದ ಮಕ್ಕಳ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ದುರ್ಘಟನೆಗಳು ನಡೆಯದ ರೀತಿ ಮುನ್ನೇಚ್ಚರಿಕೆವಹಿಸಬೇಕು ಎಂದು ನುಡಿದರು.
ಸಭೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಮೋಹನ ಹಂಚಾಟೆ ದೂರವಾಣಿ ಕರೆ ಮೂಲಕ ಮಾತನಾಡಿ, ರಸ್ತೆ ನಿಯಮಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕು. ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಅಗ್ನಿನಂದಕ, ಟೈರ್‌ಗಳ ಬದಲಿ ವ್ಯವಸ್ಥೆ, ಪ್ರಮುಖವಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕು. ಚಾಲ್ತಿಯಲ್ಲಿರುವ ಶಾಲಾ ಮೋಟಾರು ವಾಹನ ಕಾಯ್ದೆಗಳನ್ನು ತಪ್ಪದೆ ಪಾಲಿಸಬೇಕು ಎಂದು ಹೇಳಿದರು.
ಪಿ.ಎಸ್.ಐ ಹಾಲಪ್ಪ ಬಾಲದಂಡಿ, ವಕೀಲರಾದ ಲಕ್ಷö್ಮಣ ಅಡಿಹುಡಿ ಮಾತನಾಡಿ, ಇಂದಿನ ತಂತ್ರಜ್ಞಾನದ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ವಾಹನ ಚಲಾಯಿಸುವಾಗ ಬಳಸಬಾರದು. ಅಬ್ಬರದ ಸಂಗೀತ, ವಾಹನದ ಮಿತಿಯೊಳಗೆ ಮಕ್ಕಳನ್ನು ಕರೆತರಬೇಕು. ಸಾರಿಗೆ ನಿಯಮಗಳನ್ನು ಪಾಲಿಸುವದರೊಂದಿಗೆ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ದುಶ್ಚಟಗಳಿಗಳಿಗೆ ದಾಸರಾಗಬಾರದು. ಖಡ್ಡಾಯವಾಗಿ ಮೊಬೈಲ್ ಬಳಕೆ ನಿಷೇದಿಸಬೇಕು. ಕೆನಾಲ ಪಕ್ಕ, ದುರ್ಗಮ ಮಾರ್ಗಗಳಲ್ಲಿ ಜಾಗರುಕರಾಬೇಕು. ಪ್ರಮುಖವಾಗಿ ಮಕ್ಕಳ ಹಾಗೂ ತಮ್ಮ ಮತ್ತು ಕುಟುಂಭದ ಸುರಕ್ಷತೆ ದೃಷ್ಠಿಯಿಂದ ವಾಹನ ಚಲಾಯಿಸಬೇಕು ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ರಾಜ್ಯಾಧ್ಯಕ್ಷ ಲೋಕೇಶ ತಾಳಿಕೋಟೆ ಮಾತನಾಡಿ, ರಾಜ್ಯದಲ್ಲಿಯೇ ನೂತನವಾಗಿ ಮೂಡಲಗಿ ವಲಯದಲ್ಲಿ ಖಾಸಗಿ ವಾಹನ ಚಾಲಕರಿಗೆ ನಿರ್ವಾಹಕರಿಗೆ ಕೈಗೊಂಡಿರುವ ತರಬೇತಿ ಕಾರ್ಯಗಾರವು ಮೆಚ್ಚುವಂತಹದು. ಆಯುಕ್ತರ ಗಮಕ್ಕೆ ತಂದು ರಾಜ್ಯ ಮಟ್ಟದಲ್ಲಿಯೇ ಈ ವಿಷಯದ ಕುರಿತು ಸ್ಪಷ್ಟ ರೂಪುರೇಷೆಗಳನ್ನು ತರಲಾಗುವದು. ರಸ್ತೆಯ ನಿಯಮಗಳು ಪಾಲನೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆಂದರು
ತರಬೇತಿ ಕಾರ್ಯಾಗಾರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಉಪಾಧ್ಯಕ್ಷ ಉಮಾಶಂಕರ, ಶಿಕ್ಷಣ ಸಂಯೋಜಕ ಟಿ ಕರಿಬಸವರಾಜು, ಆರ್.ಡಿ. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂತೋಷ ಪಾರ್ಶಿ, ಖಾಸಗಿ ಶಾಲೆಗಳ ಸಂಘದ ಪದಾಧಿಕಾರಿಗಳಾದ ಮಲ್ಲಪ್ಪ ಗಾಣಿಗೇರ, ವೆಂಕಟೇಶ ಹಂಚಿನಾಳ, ಮಲ್ಲಪ್ಪ ಹಂಚಿನಾಳ, ಚನ್ನಬಸು ಬಡ್ಡಿ, ಅಶೋಕ ಸರ್ವಿ, ಬಸವರಾಜ ತೆಳಗಡೆ ಹಾಗೂ ಕಾರ್ಯಾಗಾರದಲ್ಲಿ ಚಾಲಕರು, ನಿರ್ವಾಹಕರು ಉಪಸ್ಥಿತರಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page