ಮಂಗಳವಾರ , ಅಕ್ಟೋಬರ್ 4 2022
kn
Breaking News

ಪ್ರತಿಭಾವಂತ ಗಾಯಕರಿಂದ ಸಂಗೀತ ಸುಧೆ

Spread the love

ಮೂಡಲಗಿ: ಬೆಂಗಳೂರಿನ ಇಂಡಿಯನ್ ಮ್ಯೂಜಿಕ್ ಅಸೋಸಿಯೇಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರ ಇವರ ಸಂಯುಕ್ತ ಆಶ್ರಯದಲ್ಲಿ ಮಾ. ೨೩ರಂದು ಮೂಡಲಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಂಜೆ ೫ ಗಂಟೆಗೆ ಖ್ಯಾತ ಗಾಯಕರಿಂದ ‘ಭಾವದೀವಿಗೆ: ಸುಗಮ ಸಂಗೀತೋತ್ಸವ ಮತ್ತು ಕವಿ ಗೀತ ನಮನ’ ಕಾರ್ಯಕ್ರಮವನ್ನು ಏರ್ಪಡಿಸಿವರು.
ಬೆಂಗಳೂರಿನ ಖ್ಯಾತ ಗಾಯಕ ಮೃತ್ಯುಂಜಯ ದೊಡ್ಡವಾಡ, ಚಲನಚಿತ್ರ ಹಿನ್ನೆಲೆ ಗಾಯಕ ರವೀಂದ್ರ ಸೊರಗಾಂವಿ, ಚಲನಚಿತ್ರ ಹಿನ್ನೆಲೆ ಗಾಯಕಿ ಶ್ವೇತಾ ಪ್ರಭೂ, ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಬಸವರಾಜ ಮುಗಳಖೋಡ, ಜೀಟಿವಿ ಸರಿಗಮಪ ಸಂಗೀತ ಸ್ಪರ್ಧೆಯ ವಿಜೇತ ಗಾಯಕ ಓಂಕಾರ ಪತ್ತಾರ, ಜಾನಪದ ಗಾಯಕ ಶಬ್ಬೀರ ಡಾಂಗೆ, ಹೊಂಬೆಗೌಡ ಹೆಚ್, ಮಧುರಖಂಡಿಯ ಬಸವಲಿಂಗಯ್ಯ ಹಿಡಕಲ್, ಶ್ರೀಕಾಂತ ನಾಯಕ, ಐಶ್ವಂರ್ಯ ತಳವಾರ, ಶಿವಾನಂದ ಬಿದರಿ, ಮೇಘಾ ಸೊರಗಾಂವಿ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಉದ್ಘಾಟನೆ: ಮಾ. ೨೩ರಂದು ಸಂಜೆ ೫ ಗಂಟೆಗೆ ಜರಗುವ ಸಂಗೀತ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯವನ್ನು ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಶ್ರೀಧರಬೋಧ ಸ್ವಾಮೀಜಿವಹಿಸುವರು.
ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೃತ್ಯುಂಜಯ ದೊಡ್ಡವಾಡ ಕಾರ್ಯಕ್ರಮ ಉದ್ಘಾಟಿಸುವರು. ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಅಧ್ಯಕ್ಷತೆವಹಿಸುವರು.
ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಡಿ.ಜಿ. ಮಹಾತ್, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಬಿಇಒ ಅಜೀತ ಮನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಪಿಎಸ್‌ಐ ಎಚ್.ವೈ. ಬಾಲದಂಡಿ, ಎಂಜೆಎಫ್ ಲಯನ್ ವೆಂಕಟೇಶ ಸೋನವಾಲಕರ, ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ, ಹಿರಿಯ ಕಲಾವಿದ ಮಹಾದೇವಪ್ಪ ಬಂಗಿ ಭಾಗವಹಿಸುವರು ಎಂದು ಲಯನ್ಸ್ ಕ್ಲಬ್ ಖಜಾಂಚಿ ಸುಪ್ರೀತ ಸೋನವಾಲಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Kenchappa Meesi

Check Also

ಅಕ್ಟೋಬರ್ ತಿಂಗಳಾoತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಉಪನೋಂದಣಾಧಿಕಾರಿಗಳ ಕಛೇರಿಯು ಬರುವ ಅಕ್ಟೋಬರ್ ತಿಂಗಳ ಅಂತ್ಯದೊಳಗೆ …

10 comments

  1. Magnificent site. Plenty of useful information here. I am sending it to a few friends ans also sharing in delicious. And of course, thanks for your effort!

  2. You should take part in a contest for one of the best blogs on the web. I will recommend this site!

  3. As soon as I observed this web site I went on reddit to share some of the love with them.

  4. I’ll right away grab your rss feed as I can’t find your e-mail subscription link or newsletter service. Do you have any? Kindly let me know so that I could subscribe. Thanks.

  5. Its superb as your other blog posts : D, thankyou for putting up. “If Christ were here now there is one thing he would not be–a christian.” by Mark Twain.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!