ಮೂಡಲಗಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆ ಕಲಾಪದಲ್ಲಿ ಪೇಪರ್‌ಲೆಸ್ ಬಜೆಟ್ ಮಂಡನೆ, ಕೌಶಲಗಳ ಪೂರೈಕೆ ಮತ್ತು ಆನ್‌ಲೈನ್ ಶಿಕ್ಷಣ ಕಾರ್ಯಕ್ರಮಗಳು, ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆ, ಸಂಶೋಧನೆ ಮತ್ತು ನಾವೀನ್ಯತೆಗೆ ಆದ್ಯತೆ ನೀಡಿರುವುದು ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಮಂಜುಳಾ ಹಿರೇಮಠ ಅವರು ತಿಳಿಸಿದ್ದಾರೆ.
ರೈತರಿಗೆ, ಕೃಷಿ ಪ್ರಗತಿ ಮತ್ತು ದೇಶದ ಎಲ್ಲ ವರ್ಗಕ್ಕೂ ಬಜೆಟ್‌ವು ಬಹಳಷ್ಟು ಅವಕಾಶವನ್ನು ನೀಡಿದೆ. ಡಿಜಿಟಲೀಕರಣ ಮತ್ತು ಸ್ವಾವಲಂಬನೆಗೆ ಒತ್ತು ನೀಡಿದ್ದು ಗಮನಾರ್ಹವಾಗಿದೆ. ದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಬಜೆಟ್‌ವಾಗಿದೆ. ಮಹಿಳೆಯರ ಅಭಿವೃದ್ಧಿಗಾಗಿ ಯೋಜನೆಗಳನ್ನು ಘೋಷಿಸಿಸಿದ್ದು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಬಜೆಟ್‌ವು ಸಮಗ್ರತೆಯನ್ನು ಹೊಂದಿರುವ ಮಾದರಿಯಾಗಿದೆ ಎಂದು ಮಂಜುಳಾ ಹಿರೇಮಠ ತಿಳಿಸಿದ್ದಾರೆ.
Check Also
ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನ-ಸಂಸದ ಕಡಾಡಿ ಸಂತಾಪ
Spread the loveಮೂಡಲಗಿ: ಏಳು ದಶಕಗಳ ಕಾಲ ತಮ್ಮ ಗಾನಸುಧೆಯಿಂದ ಸಂಗೀತ ಜಗತ್ತನ್ನು ಶ್ರೀಮಂತಗೊಳಿಸಿದ ಗಾನ ಕೋಗಿಲೆ, ಭಾರತರತ್ನ, ಪದ್ಮ …