ಸೋಮವಾರ , ಸೆಪ್ಟೆಂಬರ್ 9 2024
kn
Breaking News

ದೂರದರ್ಶನ ಚಂದನವಾಹಿನಿ ಮೂಲಕ ವಿಡಿಯೋ ಪಾಠಗಳ ಪ್ರಸಾರ ಶ್ಲಾಘನೀಯ : ಕುಮಾರ ಮರ್ದಿ

Spread the love

ಮೂಡಲಗಿ: ಕೋವಿಡ್ ಸಂದರ್ಭದಲ್ಲಿ ಮಕ್ಕಳ ಶೈಕ್ಷಣಿಕ ವ್ಯವಸ್ಥೆ ಅವ್ಯವಸ್ಥಿತವಾಗುತ್ತಿರುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿರುವ ಜೊತೆಗೆ ದೂರದರ್ಶನ ಚಂದನವಾಹಿನಿ ಮೂಲಕ ವಿಡಿಯೋ ಪಾಠಗಳನ್ನು ಪ್ರಸಾರ ಮಾಡುತ್ತಿರುವದು ಶ್ಲಾಘನೀಯವಾದದು ಎಂದು ತುಕ್ಕಾನಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಮರ್ದಿ ಹೇಳಿದರು.
ಅವರು ಮಂಗಳವಾರ ತಾಲೂಕಿನ ತುಕ್ಕಾನಟ್ಟಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯವರು ವಿದ್ಯಾಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಕೆ ದೂರದರ್ಶನ ಚಂದನವಾಹಿನಿ ಮೂಲಕ ಪ್ರಸಾರ ಮಾಡುತ್ತಿರುವ ವಿಡಿಯೋ ಪಾಠÀಗಳ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಪಾಠಗಳ ವೇಳಾಪತ್ರಿಕೆ ವಿತರಿಸಿ ಮಾತನಾದರು.
ಕಲ್ಲೋಳಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಗಣಪತಿ ಉಪ್ಪಾರ ಮಾತನಾಡಿ, ಶಿಕ್ಷಣ ಇಲಾಕೆ ದೂರದರ್ಶನ ಮುಖಾಂತರ ವಿಡಿಯೋ ಪಾಠಗಳನ್ನು ಪ್ರಸಾರ ಮಾಡುತ್ತ್ತಿರುವದನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಇದರ ಸದುಪಯೋಗ ಪಡೆದುಕೊಂಡು ಸಂಕಷ್ಟದಲ್ಲೂ ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದರು.
ಶಾಲೆಯ ಪ್ರಧಾನ ಗುರು ಎ.ವ್ಹಿ ಗಿರೆಣ್ಣವರ ಮಾತನಾಡಿ ಶಿಕ್ಷಣ ಇಲಾಖೆ ಕೋವಿಡ್ ಸಂದರ್ಭದಲ್ಲಿ ದೂರದರ್ಶನ ಚಂದನವಾಹಿನಿ ಮೂಲಕ ವಿಡಿಯೋ ಪಾಠಗಳನ್ನು ಪ್ರಸಾರ ಮಾಡುತ್ತಿರುವದು ತುಂಬಾ ಉಪಯುಕ್ತ , ಗ್ರಾಮೀಣ ಪ್ರದೆಶದಲ್ಲಿ ಇದರ ಬಗ್ಗೆ ತಿಳುವಳಕೆ ನೀಡುವದು ತುಂಬಾ ಅವಷ್ಯವಾಗಿದೆ ಅದರಲ್ಲು ಟಿ.ವ್ಹಿ. ಮೊಬೈಲ್‍ಗಳಿಲ್ಲದ ಕುಟುಂಬದ ವಿದ್ಯಾರ್ಥಿಗಳಿಗೆ ಶಿಕ್ಷಕರು ಮನೆ ಮನೆಗೆ ಹೋಗಿ ಗೃಹ ಪಾಠಗಳನ್ನು ನೀಡಲಾಗುತ್ತದೆ ಇದರಲ್ಲಿ ಶಿಕ್ಷಣ ಪ್ರೇಮಿಗಳು, ಜನ ಪ್ರತಿನಿಧಿಗಳ ಸಹಭಾಗಿತ್ವದೊಂದಿಗೆ ಇದನ್ನು ಯಶಸ್ವಿಗೊಳಿಸಲಾಗುತ್ತಿದೆ ಎಂದರು.
ಗ್ರಾಮ ಪಂಚಾಯತ ಸದಸ್ಯೆ ಸನಂದಾ ಭಜಂತ್ರಿ ಮಾತನಾಡಿದರು.
ದೂರದರ್ಶನ ಚಂದನವಾಹಿನಿಯ ವಿಡಿಯೋ ಪಾಠಗಳ ವೇಳಾಪಟ್ಟಿಯನ್ನು ಸುಮಾರು 800 ವಿದ್ಯಾರ್ಥಿಗಳಿಗೆ ಸ್ಥಳೀಯ ವೈದ್ಯರಾದ ಡಾ. ಚೈತ್ರಾ ವಸಂತ ನಾಯಕವಾಡಿ ಮುದ್ರಿಸಿಕೊಟ್ಟಿದನ್ನು ವಿತರಿಸಲ್ಲಾಯಿತು.
ಅಂಬೇಡ್ಕರ ಸಮುದಾಯ ಭವನದಿಂದ ಹಾಗೂ ಗ್ರಾಮದ ವಾರದ ಸಂತೆಯಲ್ಲಿ ಇದರ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲಾಯಿತು. ಇದರಲ್ಲಿ ಸಮುದಾಯದ ಜನ ಪಾಲಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಶಾನೂರ ಹಿರೇಹೊಳಿ, ಶಿಕ್ಷಕರಾದ ಲಕ್ಷ್ಮೀ ಹೆಬ್ಬಾಳ, ಪುಷ್ಪಾ ಭರಮದೆ, ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ್, ಶಂಕರ ಲಮಾಣಿ, ಕಿರಣ ಭಜಂತ್ರಿ, ಶೀಲಾ ಕುಲಕರ್ಣಿ ಮತ್ತಿತರು ಇದ್ದರು.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page