ಗುರುವಾರ , ಡಿಸೆಂಬರ್ 12 2024
kn
Breaking News

ಪ್ರಭಾಶುಗರ ನೌಕರರ ಸಹಕಾರಿ ಪತ್ತಿನ ನೂತನ ಅಧ್ಯಕ್ಷರಾಗಿ ಪಿ.ಶಿವಪ್ಪ ಆಯ್ಕೆ ಹಿರಿಯರ ಮಾರ್ಗದರ್ಶನದಲ್ಲಿ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸುವೆ : ಶಿವಪ್ಪ

Spread the love

ಘಟಪ್ರಭಾ : ಪ್ರಭಾಶುಗರ ನೌಕರರ ಸಹಕಾರಿ ಪತ್ತಿನ ಸಂಘದ ನೂತನ ಅಧ್ಯಕ್ಷರಾಗಿ ಪಿ. ಶಿವಪ್ಪ ಹಾಗೂ ಉಪಾಧ್ಯಕ್ಷರಾಗಿ ಬಿ.ಎಲ್. ಭಜಂತ್ರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಬೈಲಹೊಂಗಲ ಸಹಕಾರಿ ಸಂಘಗಳ ಹಿರಿಯ ನಿರೀಕ್ಷಕ ಎಸ್.ಎಸ್. ಬಿರಾದಾರ ಪಾಟೀಲ ಪ್ರಕಟಿಸಿದರು.
ಸಂಘದ ಕಾರ್ಯಾಲಯದಲ್ಲಿ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಸನ್ 2022 ರಿಂದ 2025 ರವರೆಗೆ ಮೂರು ವರ್ಷಗಳ ಅವಧಿಗೆ ಈ ಚುನಾವಣೆ ನಡೆದಿದೆ.
ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಸಂಘದ ನೂತನ ಅಧ್ಯಕ್ಷ ಪಿ. ಶಿವಪ್ಪ ಮಾತನಾಡಿ, ನೌಕರರ ಸಹಕಾರಿ ಪತ್ತಿನ ಸರ್ವಾಂಗೀಣ ಅಭಿವೃದ್ಧಿಗೆ ಹಿರಿಯರ ಮಾರ್ಗದರ್ಶನದಲ್ಲಿ ಸಂಘದ ಎಲ್ಲ ನಿರ್ದೇಶಕರುಗಳು ಸಹಕಾರದೊಂದಿಗೆ ಶ್ರಮಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಬಿ.ಆರ್. ಪಾಟೀಲ, ಎಸ್.ಐ. ಸಿದ್ನಾಳ, ಡಿ.ವ್ಹಿ. ಸಿಂಧೆ, ಎ.ಬಿ. ದುಂಡ್ಯಾಗೋಳ, ಜಿ.ಎಚ್. ರಫಾಯಿ, ಜಿ.ಎಸ್. ಪೂಜೇರಿ ಹಾಗೂ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಎಸ್.ಕೆ. ವಾಲಿಕಾರ, ಆಯ್.ಎಂ. ಚೌಧರಿ, ಪಿ.ಎಲ್. ಬಿದರಿ, ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ಮಾಸ್ತಿಹೊಳಿ ಮುಂತಾದವರು ಉಪಸ್ಥಿತರಿದ್ದರು.
ಪ್ರಭಾಶುಗರ ನೌಕರರ ಸಹಕಾರಿ ಪತ್ತಿನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಪಿ.ಶಿವಪ್ಪ ಅವರನ್ನು ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಪ್ರಭಾಶುಗರ ಅಧ್ಯಕ್ಷ ಅಶೋಕ ಪಾಟೀಲ, ಶಾಸಕರ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ ಹಾಗೂ ಮತ್ತೀತರರು ಅಭಿನಂದಿಸಿದ್ದಾರೆ.


Spread the love

About gcsteam

Check Also

ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನ-ಸಂಸದ ಕಡಾಡಿ ಸಂತಾಪ

Spread the loveಮೂಡಲಗಿ: ಏಳು ದಶಕಗಳ ಕಾಲ ತಮ್ಮ ಗಾನಸುಧೆಯಿಂದ ಸಂಗೀತ ಜಗತ್ತನ್ನು ಶ್ರೀಮಂತಗೊಳಿಸಿದ ಗಾನ ಕೋಗಿಲೆ, ಭಾರತರತ್ನ, ಪದ್ಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page