ಬೆಳಗಾವಿ : ಲೋಕಸಭಾ ಸದಸ್ಯರ, ಶಾಸಕರ ಭಾವ ಚಿತ್ರ ದರ್ಶನ ಎಲ್ಲೆಡೆ ಕಂಡು ಬರುತ್ತದೆ. ಇದು ಸ್ಥಳೀಯ ಯೋಜನೆಯಡಿ ಕೈಗೊಂಡ ಕಾಮಗಾರಿಗಳಲ್ಲಿ ಭಾವಚಿತ್ರ ಅಳವಡಿಸಿರುವುದು ಯಾವ ನ್ಯಾಯ ಎಂದು ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಪ್ರಶ್ನಿಸಿ ಈ ಬಗ್ಗೆ ಮಾಹಿತಿ ಕೋರಿದ್ದಾರೆ.
ಲಘು ತಂಗುದಾಣ (ಬಸ್ ಶೆಲ್ಟರ್)ಗಳ ಫೋಟೋಗಳಲ್ಲಿ ಕಂಡು ಬರುತ್ತದೆ. ಸಾರಿಗೆ ಭಾವಚಿತ್ರವನ್ನು ಕೂಡಲೇ ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ಸರ್ಕಾರವನ್ನು ಕೋರಿರುತ್ತಾರೆ. ಅರ್ಜಿ ಮತ್ತು ಆಡಕಗಳನ್ನು ಕಳುಹಿಸಿದ್ದು, ಈ ಯೋಜನೆ ಆಡಿ ಕಾಮಗಾರಿಗಳ ಪೂರ್ಣ ವಿವರಗಳನ್ನು ಮಾತ್ರ ಫಲಕಗಳಲ್ಲಿ ಹಾಕಲು ಅವಕಾಶ ಕಲ್ಪಿಸಲಾಗಿದ್ದು, ಭಾವಚಿತ್ರವನ್ನು ಅಳವಡಿಸಲು ಅವಕಾಶವಿರುವುದಿಲ್ಲ. ಅದ್ದರಿಂದ ಈ ಬಗ್ಗೆ ಕೂಡಲೇ ನಿರ್ದೇಶಿಸಿರುತ್ತಾರೆ.
ಲೋಕಸಭೆ/ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಕೈಕೊಂಡ ಕಾಮಗಾರಿಗಳಲ್ಲಿ ಪೂರ್ಣ ವಿವರಗಳನ್ನು ಮಾತ್ರ ನಾಮ ಫಲಕಗಳಲ್ಲಿ ಹಾಕಲು ಅವಕಾಶ ಕಲ್ಪಿಸಲಾಗಿದ್ದು, ಭಾವಚಿತ್ರವನ್ನು ಅಳವಡಿಸಲು ಅವಕಾಶವಿಲ್ಲವಾದ್ದರಿಂದ, ಈ ಕುರಿತು ಸರ್ಕಾರದ ನಿರ್ದೇಶನದನ್ವಯ ಕೂಡಲೇ ಪರಿಶೀಲಿಸಿ ಅಗತ್ಯ ಕ್ರಮ ಕೈಕೊಂಡು, ಕೈಕೊಂಡ ಕ್ರಮದ ಬಗ್ಗೆ ಛಾಯಾ ಚಿತ್ರದೊಂದಿಗೆ ತಮ್ಮ ವಿವರವಾದ ವರದಿಯನ್ನು ಒಂದು ವಾರದೊಳಗಾಗಿ ಸಲ್ಲಿಸಲು ಬೆಳಗಾವಿ ಜಿಲ್ಲಾಧಿಕಾರಿಗಳು ಕೋರಿದ್ದಾರೆ.