ಕುಡಚಿ: ಮಹಾಮಾರಿ ಕೊರೋನಾ ತನ್ನ ರಣಕೇಕೆ ಮೂಲಕ ಅಮಾಯಕ ಮುಗ್ದರ ಬದುಕನ್ನೇ ಅಂತ್ಯಗೊಳಿಸುತ್ತಿದೆ.
ದೇಶಕ್ಕೆ ದೇಶವೇ ಸ್ಥಬ್ದವಾದ ಘೋರ ಸನ್ನಿವೇಶದಲ್ಲಿ ಗ್ರಾಮೀಣ ಜನರ ಬದುಕು ಹರಿದು ಮೂರಾಬಟ್ಟೆಯಾಗಿದೆ.
ಇಂಥ ಸಮಯದಲ್ಲಿ ಕುಡಚಿ ಪಟ್ಟಣದ ಬಡ ಕೂಲಿ ಕಾರ್ಮಿಕರ ಹಾಗೂ ಜನ ಸಾಮಾನ್ಯರಿಗೆ ದಿನ ನಿತ್ಯದ ಉಪಯೋಗಿ ಪದಾರ್ಥಗಳಿಗೆ ಕೊಳ್ಳವಿಕೆಗೆ ಅಡಚಣೆಯಾಗದಂತೆ ಹಾಗೂ ಜನರಿಗೆ ಉಚಿತವಾಗಿ ಆಧಾರವಾಗಿ ಪರಿಶುದ್ದ ಪಾಶ್ಚೀಕರಿಸಿದ ನಂದಿನಿ ಹಾಲಿನ ಪ್ಯಾಕೇಟ್ ಗಳನ್ನು ಪಟ್ಟಣದ ಅಧಿಸೂಚಿತ ಪ್ರದೇಶ ದಾದಿನಗರ ಪ್ಲಾಟ್ ಸೇರಿದಂತೆ ಇತರ ಪ್ರದೇಶಗಳ ಸ್ಥಳೀಯ ನಿವಾಸಿಗಳಿಗೆ ಕುಡಚಿ ಶಾಸಕರಾದ ಪಿ ರಾಜೀವ್ ಮಾರ್ಗದರ್ಶನದಲ್ಲಿ ಪುರಸಭೆ ಸದಸ್ಯರಾದ ದತ್ತಾತ್ರೇಯ ಸಣ್ಣಕ್ಕಿ ನೇತೃತ್ವದಲ್ಲಿ ಸೋಮವಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದತ್ತಾ ಸಣ್ಣಕ್ಕಿ ಕೊರೋನಾ ವಿರುದ್ಧ ಹೋರಾಡುವ ಅವಶ್ಯಕತೆ ಇದೆ ದಯವಿಟ್ಟು ಯಾರೂ ಹೊರಗಡೆ ಬರದಂತೆ ಮನವಿ ಮಾಡಿಕೊಂಡರು.
ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಹಾಗೂ ಎಲ್ಲರ ದಿನ ನಿತ್ಯದ ಬದುಕಿಗೆ ಯಾವುದೇ ತೊಂದರೆಯಾಗದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಅಭಯ ನೀಡಿದರು.
ಈ ವೇಳೆಯಲ್ಲಿ ಪುರಸಭೆ ಮುಖ್ಯಾಧಿಕಾರಿಗಳಾದ ಎಸ್.ಎ.ಮಹಾಜನ್,ನಂದಿನಿ ಗ್ರುಪ್ ನ ಅಧಿಕಾರಿಗಳು ಸೇರಿದಂತೆ ಪುರಸಭೆಯ ಸಿಬ್ಬಂದಿಗಳು ಹಾಜರಿದ್ದರು.