ಬೆಳಗಾವಿ- ಬೆಳಗಾವಿ ನಗರ, ಜೆಲ್ಲೆಯ ಕೆಲವು ತಾಲೂಕುಗಳಲ್ಲಿ ಹಾಗೂ ವಿವಿಧ ಗ್ರಾಮಗಳಲ್ಲಿ ಕೆಲವರು ರಸ್ತೆಯನ್ನು ಅಗೆದು, ರಸ್ತೆಗೆ ಬೇಲಿ ಹಾಕಿ ಮತ್ತು ಗಲ್ಲಿ-ಗಲ್ಲಿಗಳಲ್ಲಿ ಬ್ಯಾರಿಕೆಡ್ ಹಾಕಿ ರಸ್ತೆಗಳನ್ನು ಬಂದ್ ಮಾಡುತ್ತಿರುವದರಿಂದ ಲಾಕ್-ಡೌನ್ ಯಶಸ್ವಿಯಾಗಬಹುದೆ ವಿನಹಃ ಪಡಿತರ ಧಾನ್ಯಗಳ ಸಾಗಾಣಿಕೆಗೆ, ಹಾಲು ಮಾರಾಟಗಾರರಿಗೆ, ಆ್ಯಂಬುಲೆನ್ಸ್ ಓಡಾಟಕ್ಕೆ ತೊಂದರೆಯಾಗುವುದು ಖಂಡಿತ. ಈ ರೀತಿ ರಸ್ತೆ ಬಂದ್ ಮಾಡುವದು ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಆ್ಯಂಬುಲೆನ್ಸ್ ಓಡಾಡುವ ಮುಖ್ಯ ರಸ್ತೆಗಳಿಗೆ ಬೇಲಿ ಹಚ್ಚುವುದು, ಅಗತ್ಯ ವಸ್ತುಗಳ ಪೂರೈಕೆ ಮತ್ತು ಪಡಿತರ ಧಾನ್ಯಗಳ ಪೂರೈಕೆಗೆ ತೊಂದರೆ ಮಾಡುವದು ಅಪರಾಧವಾಗಿದ್ದು ಕೂಡಲೇ ರಸ್ತೆಗಳಿಗೆ ಹಾಕಿರುವ ಬೇಲಿಯನ್ನು,ತೆರವು ಮಾಡಿ ಅಗೆದಿರುವ ರಸ್ತೆಗಳನ್ನು ಮುಚ್ವಿ ಪಡಿತರ ಧಾನ್ಯಗಳ ಪೂರೈಕೆಗೆ ಅನಕೂಲ ಮಾಡಿಕೊಡುವಂತೆ ಬೆಳಗಾವಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.