ಬುಧವಾರ , ಮೇ 31 2023
kn
Breaking News

ಬೆಳಗಾವಿಯಲ್ಲಿ ಕೋರೊನಾ ಸೊಂಕಿತರ ಸಂಖ್ಯೇಯಲ್ಲಿ ಏರಿಕೆ..!

Spread the love

ಬೆಳಗಾವಿ: ಕೋವಿಡ್-೧೯ ಭಾರತವನ್ನು ಸೇರಿ ಪ್ರಪಂಚವನ್ನೆ ಆಹುತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ಕೋರೊನಾ ವೈರಸನ್ನು ಹತ್ತಿಕ್ಕುವ ಸಲುವಾಗಿ ಇಡೀ ಪ್ರಪಂಚವೇ ಪ್ರಯತ್ನಿಸುತ್ತಿದೆ.

ಭಾರತಾದ್ಯಂತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡರು, ೨೧ದಿನ ಲಾಕ್ ಡೌನ್ ಘೋಷಣೆಯಾದರೂ, ಕೋವಿಡ್-೧೯ ಹತ್ತಿಕ್ಕಲೂ ಆಗದ ರೀತಿಯಲ್ಲಿ ಈ ಮಾಹಾಮಾರಿ ವೈರಸ್ ಹಬ್ಬುತ್ತಿರುವದು ದೇಶದ ಜನತೆಯಲ್ಲಿ ಆಂತಕಕ್ಕೆ ಕಾರಣವಾಗುತ್ತಿದೆ.

ದಿ.5-4-2020 ಸಾಯಂಕಾಲ 5ಘಂಟೆಗೆ ಬಂದಿರುವ ವರದಿಯ ಪ್ರಕಾರ ಕರ್ನಾಟಕದಲ್ಲಿ 151 ಸೋಂಕಿತರನ್ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿ, ಇದರಲ್ಲಿ 7 ಹೋಸ ಪ್ರಕರಣಗಳು ಇಂದು ದೃಢಪಟ್ಟಿರುತ್ತದೆ.

ರಾಜ್ಯದಲ್ಲಿ ಇಂದು ದೃಡಪಟ್ಟಿರುವ ಕೋರೊನಾ ಸೋಂಕಿತರ ವರದಿ, ಬೆಂಗಳೂರು-೨, ಬಳ್ಳಾರಿ-೧, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲುಕಿನಲ್ಲಿ ಮೂರು ಜನ ಮಹಿಳೆಯರು, ಒಬ್ಬ ಪುರುಷ ಒಟ್ಟು ನಾಲ್ಕು ಜನರು ಎಂದು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ಆತಂಕಕ್ಕೆ ಕಾರಣವಾದ ಕೋವಿಡ್-೧೯ ನಿಂದ ಮುಕ್ತಿಹೊಂದಲು, ಪ್ರತಿ ಘಂಟೆಗೊಮ್ಮೆ ತಮ್ಮ ಕೈಗಳನ್ನು ಆಲ್ಕೊಹಾಲ ಯುಕ್ತವಾದ ಸಾಬುನಿನಿಂದ ಸ್ವಚ್ಚಗೊಳಿಸಿ, ಕಣ್ಣು, ಮೂಗು, ಬಾಯಿಯನ್ನು ಪದೆ-ಪದೆ ಮುಟ್ಟಿಕೊಳಬೇಡಿ, ಸಾಮಾಜಿಕ ಅಂತರವನ್ನ ಕಾಯ್ದುಕೋಳ್ಳಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮನವಿ ಮಾಡಿಕೊಂಡಿದೆ.


Spread the love

About gcsteam

Check Also

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

Spread the loveಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page