ಹಳ್ಳೂರ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಭಾಗದ ವತಿಯಿಂದ ಮರಾಕುಡಿ ಗ್ರಾಮದ ಹಳ್ಳಕ್ಕೆ ಸರಣಿ ಚೆಕ್ ಡ್ಯಾಮ್ ನಿರ್ಮಿಸುವುದು ಹಾಗೂ ಏತ ನೀರಾವರಿ ಯೋಜನೆ ಮೂಲಕ ಚೆಕ್ ಡ್ಯಾಂ ತುಂಬಿಸುವ ಕಾಮಗಾರಿಗೆ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕುಡಚಿ ಶಾಸಕ ಪಿ.ರಾಜೀವ್ ಶಂಕು ಸ್ಥಾಪನೆ ನೇರವೇರಿಸಿದರು.
ಮರಾಕುಡಿ ಗ್ರಾಮದಲ್ಲಿ ಶನಿವಾರರಂದು ನಡೆದ ಬ್ರಿಜ್ ಕಮ್ ಬ್ಯಾರೇಜ್ ಹಾಗೂ ಚೆಕ್ಕ ಡ್ಯಾಮ್ ಕಾಮಗಾರಿಗಳ ಶಂಕು ಸ್ಥಾಪನಾ ಸಮಾರಂಭದ ಭೂಮಿ ಪೂಜಾ ಸಮಾರಂಭವನ್ನು ನೇರವೆರಿಸಿ ಚಾಲನೆ ನೀಡಿ ಮಾತನಾಡಿದ ಅವರು ರೈತರ ಬಹುದಿನಗಳ ಬೇಡಿಕೆಯಾಗಿದ್ದ ಈ ಕಾಮಗಾರಿಯಿಂದ ಸುತ್ತಮುತ್ತಲಿನ ರೈತರ ಜಮೀನಿಗೆ ನೀರಿನ ಸೌಕರ್ಯ ಹೆಚ್ಚಳವಾಗಲಿದೆ.
ನನ್ನ ಮತಕ್ಷೇತ್ರದಲ್ಲಿ ಮರಾಕುಡಿ ಗ್ರಾಮ ಆದರ್ಶ ಗ್ರಾಮವಾಗಿದೆ. ನಾನು ಪ್ರಥಮದಲ್ಲಿ ಕುಡಚಿ ಮತಕ್ಷೇತ್ರಕ್ಕೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದಾಗ, ಇಲ್ಲಿಯ ರೈತರ ಸಮಸ್ಯೆಯನ್ನು ಆಲಿಸಿ ಅದರಂತೆ ಇಲ್ಲಿಯ ರೈತರ ನೀರಿನ ಸಮಸ್ಯೆ ನೀಗಿಸಲು ಶಾಶ್ವತ ಪರಿಹಾರವಾಗಿ ಸರಣಿ ಚೆಕ್ ಡ್ಯಾಮ್ ಹಾಗೂ ಏತ ನೀರಾವರಿ ಸೌಲಭ್ಯವನ್ನು ಕಲ್ಪಿಸಿದ್ದು ನೀರಿನ ಸೌಕರ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು. ಅಲ್ಲದೇ ಈ ಭಾಗದ ನೀರು, ರಸ್ತೆ, ಸೇರಿದಂತೆ ವಿವಿಧ ಕಾಮಗಾರಿಗಳು ಅಭಿವೃದ್ದಿಯಿಂದ ಸಾಗುತ್ತಿದೆ ಎಂದರು.
ಪುರಸಭೆ ಸದಸ್ಯ ಕೆಂಪಣ್ಣಾ ಅಂಗಡಿ ಮಾತನಾಡಿ ಕುಡಚಿ ಶಾಸಕ ಪಿ. ರಾಜೀವ್ ಅವರು ನುಡಿದಂತೆ ನಡೆದುಕೊಂಡಿದ್ದಾರೆ. ಮರಾಕುಡಿಯ ಸಮಸ್ತ ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಒದಗಿಸುವಲ್ಲಿ ಸಫಲರಾಗಿದ್ದಾರೆ. ಅಲ್ಲದೇ ಮರಾಕುಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಈ ಕಾಮಗಾರಿಯಿಂದ ಅನುಕೂಲವಾಗಲಿದೆ ಎಂದರು.
ಈ ಸಮಾರಂಭದಲ್ಲಿ ಮಲ್ಲಿಕಾರ್ಜುನ ಖಾನಗೌಡರ, ಮಹಾಂತೇಶ ಎರಡತ್ತಿ, ರಮೇಶ ಖೇತಗೌಡರ, ಲಕ್ಮಣ ಕೂಡಲಗಿ, ಮಲ್ಲಪ್ಪ ಅಂಗಡಿ, ಮಾರುತಿ ಮಾವರಕರ, ದುಂಡಪ್ಪ ಸುತಾರ, ತಮ್ಮಾಣಿ ನಾಯಿಕ, ಲಕ್ಕಪ್ಪ ಸಪ್ತಸಾಗರ, ರಮೇಶ ಕಲ್ಲಾರ, ಪ್ರಕಾಶ ಕೊಂಗಾಲಿ, ಕೆಂಪಣ್ಣ ಬಳಿಗಾರ, ರವೀಂದ್ರ ಸಪ್ತಸಾಗರ, ನಾಗಪ್ಪ ಇಂಗ್ಲಜಗೋಳ, ಶಂಕರ ಅಂಗಡಿ, ಗಂಗಪ್ಪ ಕಾಪಶಿ, ಸಿದ್ದು ದುರದುಂಡಿ, ಶಿವದುಂಡು ಕೊಂಗಾಲಿ, ಶಂಕ್ರಯ್ಯಾ ಹಿರೇಮಠ, ಸಹಾಯಕ ಕಾರ್ಯಪಾಲಕ ಅಭಿಯಂತರಾದ ಎಸ್.ಎಸ್.ವಾಗನಿ, ಗುತ್ತಿಗೆದಾರ ಶ್ರೀಕಾಂತ ಹೂಗಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಪಾಲ್ಗೊಂಡಿದರು.
ವರದಿ:- ಪ್ರವೀಣ ಮಾ.ಮಾವರಕರ