ಹಳ್ಳೂರ: ಉತ್ತರಖಾಂಡ ಡೆಹರಾಡೂಣದ ಮದ್ರಾಸ್ಸ್ ಇಂಜನಿಯರ್ ರಜಿಮೆಂಟ್‍ನ ಎಸಿಪಿ ಹವಾಲ್ದಾರರಾಗಿ ಕಾರ್ಯ ನಿರ್ವಹಿಸಿ ಸೇವೆಯಿಂದ ನಿವೃತ್ತ ಹೊಂದಿರುವ ಸುರೇಶ ಮಾರುತಿ ಬಾಗಡಿ ಅವರಿಗೆ ಗ್ರಾಮಸ್ಥರು ಬಸವೇಶ್ವರ ವೃತ್ತದ ಬಳಿ ಅದ್ದೂರಿಯಾಗಿ ಸ್ವಾಗತ ಮಾಡಿ, ಮಹಿಳೆಯರು ತಿಲಕವನ್ನು ಇಟ್ಟು ಬರಮಾಡಿಕೋಂಡರು.
ಸುಮಾರು 20 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಇವರು ರವಿವಾರರಂದು ತಾಯ್ನಾಡು ಹಳ್ಳೂರ ಗ್ರಾಮಕ್ಕೆ ಆಗಮಿಸಿದ್ದರಿಂದ ವಿವಿಧ ವಾಧ್ಯಮೇಳಗಳೊಂದಿಗೆ ಧ್ವನಿಗೂಡಿಸಿ ಜೈ ಜವಾನ್, ಜೈ ಕಿಸಾನ್ ಎಂಬ ಜಯ ಘೋಷ ಕೂಗ್ಗುತ್ತ ಸ್ವಾಗತಿಸಿದ್ದರು.
ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಭಾರತೀಯ ಸೇನೆಯ ಹಾಗೂ ದೇಶಾಭೀಮಾನಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಸುರೇಶ ಮಾರುತಿ ಬಾಗಡಿ ಅವರಿಗೆ ಸತ್ಕರಿಸಿದ್ದರು.
ಮುಖಂಡ ಹಣಮಂತ ತೇರದಾಳ, ಲಕ್ಷ್ಮಣ ಕತ್ತಿ ಹಾಗೂ ಮಾರುತಿ ಮಾವರಕರ ಮಾತನಾಡಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಸುರೇಶ ಬಾಗಡಿ ಅವರ ಕಾರ್ಯ ಶ್ಘಾಘಣೀಯವಾದದ್ದು. ದೇಶದ ರಕ್ಷಣೆಯಲ್ಲಿ ಸೇವೆ ಸಲ್ಲಿಸಿದಲ್ಲದೇ ನಮ್ಮ ಗ್ರಾಮದ ಕೀರ್ತಿ ಪತಾಕೆಯನ್ನು ಹಾರೈಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಭೀಮಶಿ ಮಗದುಮ್ಮ, ಬಸಪ್ಪ ಹಡಪದ, ಸುರೇಶ ಕತ್ತಿ, ಸುರೇಶ ಡಬ್ಬನ್ನವರ, ಮಲ್ಲಪ್ಪ ಛಬ್ಬಿ, ಹಣಮಂತ ಹಡಪದ, ಮಾರುತಿ ಸಿದ್ದಾಪೂರ, ಲಕ್ಕಪ್ಪ ಸಪ್ತಸಾಗರ, ಮಹಾದೇವ ಹೋಸಟ್ಟಿ, ಕುಮಾರ ಲೋಕಣ್ಣವರ, ಬಾಳೇಶ ನೇಸೂರ, ಸದಾಶಿವ ಮಾವರಕರ, ಬಾಹುಬಲಿ ಸಪ್ತಸಾಗರ, ಮಲ್ಲಪ್ಪ ಕಿಳ್ಳಿಕೇತರ, ಕಿಶೋರ ಗಣಾಚಾರಿ, ವಿಶ್ಣು ಬಾಗಡಿ, ಶ್ರೀಶೈಲ ಹಿರೇಮಠ, ಶಂಕರ ಕುಳ್ಳೋಳ್ಳಿ, ಕೆಂಪಣ್ಣಾ ಹುಬ್ಬಳ್ಳಿ, ಅಜೀತ ಬಾಗಡಿ, ಮಲ್ಲಪ್ಪ ಹೊಸಟ್ಟಿ, ಬಸವರಾಜ ಅನಂತಪುರ, ಜ್ಯೋತಿಭಾ ಕಾಂಬಳೆ, ಹಸನ ನದಾಫ್, ಕೆಂಪಣ್ಣ ಅಂಗಡಿ, ಸೇರಿದಂತೆ ದೇಶಾಭೀಮಾನಿಗಳು, ಸಂಘಟಿಕರು, ಕಾರ್ಯಕರ್ತರು, ಪಾಲ್ಗೊಂಡಿದ್ದರು.
ವರದಿ:- ಪ್ರವೀಣ ಮಾ. ಮಾವರಕರ