ಹಳ್ಳೂರ: ಮಣ್ಣಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಲಾಗಿದೆ, ಮಣ್ಣಿನ ಸವಕಳಿಯನ್ನು ತಪ್ಪಿಸುವ ಮಣ್ಣನ್ನು ಲವಣಯುಕ್ತಗೋಳಿಸುವುದನ್ನು ಬಿಡುವುದು ಸೇರಿದಂತೆ ಮಣ್ಣು ಸಂರಕ್ಷಣೆಯ ಮಹತ್ವದ ತಿಳುವಳಿಕೆ ದಿವಸವೆಂದು ಮುಖಂಡ ಹಣಮಂತ ತೇರದಾಳ ಹೇಳಿದ್ದರು.
ಸ್ಥಳೀಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ರವಿವಾರರಂದು ನಡೆದ ವಿಶ್ವ ಮಣ್ಣು ಆರೋಗ್ಯ ದಿನಾಚಾರಣೆಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಮಣ್ಣಿನ ಉತ್ಪಾದಕತೆ, ಆರೋಗ್ಯ, ಮಣ್ಣು ಪರೀಕ್ಷೆಯ ಮಹತ್ವವನ್ನು ಹಾಗೂ ರಸಗೊಬ್ಬರಗಳ ಮಾಹಿತಿಯನ್ನು ರೈತರಿಗೆ ತಿಳುವಳಿಕೆ ಹೇಳಿದ್ದರು.
ಸಮೃದ್ದಿ ಬೆಳೆ ಬೆಳೆಯಲು ಫಲವತ್ತಾದ ಮಣ್ಣು ಅವಶ್ಯಕ. ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ ಮಣ್ಣಿನ ಗುಣಮಟ್ಟವನ್ನು ಕಾಪಾಡೋಣವೆಂದು ಜೈ ಕಿಸಾನ್ ಹಾಗೂ ಮಂಗಳೂರು ಕೆಮಿಕಲ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ ಕಂಪನಿಯ ಗೋಕಾಕ, ಮೂಡಲಗಿ ತಾಲೂಕಾ ಮಾರಾಟಾಧಿಕಾರಿ ಆರ್. ನಾರಾಯಣ ಸ್ವಾಮಿ ಹೇಳಿದ್ದರು.
ರಸಗೊಬ್ಬರ ಮಾರಾಟಗಾರರಾದ ಮುಖಂಡ ಮಲ್ಲಪ್ಪ ಛಬ್ಬಿ, ಮಹಾದೇವ ಹೋಸಟ್ಟಿ, ಪ್ರಕಾಶ ಅಂಗಡಿ, ಕುಮಾರ ಲೋಕಣ್ಣವರ, ಸುರೇಶ ಕತ್ತಿ, ಮಾರುತಿ ಮಾವರಕರ, ಸಂಗಪ್ಪ ನಾಯ್ಕ್, ಪಾವಡೆಪ್ಪ ಪೂಜೇರಿ, ಅಡಿವೆಪ್ಪ ಪಾಲಭಾಂವಿ, ಬಸಪ್ಪ ಹಡಪದ, ಸಂಗಪ್ಪ ಪಟ್ಟಣಶೆಟ್ಟಿ, ಬಾಳೇಶ ನೇಸೂರ, ಸಿದ್ದಪ್ಪ ಬಡಿಗೇರ, ಮಾರುತಿ ಸಿದ್ದಾಪೂರ, ಸುಭಾಷ ಅಂಗಡಿ, ಭೀಮಶಿ ಕುಲಗೋಡ, ಲಕ್ಷ್ಮಣ ಬಡಿಗೇರ, ಶಂಕರ ಕುಳ್ಳೋಳಿ, ಅನೀಲ ಕತ್ತಿ, ಸಪ್ತಸಾಗರ, ಚನ್ನಪ್ಪ ಗೌಡವಾಡಿ, ಸೇರಿದಂತೆ ರೈತರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಕೃಷಿ ಸಲಹೆಗಾರ ಮಲ್ಲಿಕಾರ್ಜುನ ಜಕಾತಿ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾರಂಭವನ್ನು ನಿರೂಪಿಸಿದರು.
ವರದಿ:- ಪ್ರವೀಣ ಮಾ. ಮಾವರಕರ