ಹಳ್ಳೂರ: ಗ್ರಾಮದಲ್ಲಿ ಗುರುವಾರರಂದು ಕಾರ ಹುಣ್ಣಿಮೆ ನಿಮಿತ್ಯವಾಗಿ ಮುಂಗಾರಿ ಮತ್ತು ಹಿಂಗಾರಿ ಎತ್ತುಗಳನ್ನು ಶೃಂಗರಿಸಿ ಪೂಜೆ ಮಾಡಲಾಯಿತ್ತು.
ಕರಿ ಎತ್ತ ಕಾಳಿಂಗ, ಬಿಳಿ ಎತ್ತ ಮಾಣ್ಣಿಂಗ, ಸರ್ಕಾರ ಎತ್ತ ಸಾರಂಗ ಎಂಬ ನಾಣ್ಣುಡಿಯಂತೆ. ಕಾರ ಹುಣ್ಣಿಮೆ ದಿನವನ್ನು ಹಿಂದಿನಿಂದ ಆಚರಿಸಿಕೊಂಡು ಬರಲಾಗುತ್ತಿರುವ ಸಂಪ್ರದಾಯದಂತೆ ಬಸವಣ್ಣ (ಎತ್ತು)ಗಳಿಗೆ ವಿವಿಧ ಬಗೆಯ ಬಣ್ಣ ಹಚ್ಚಿ ಶೃಂಗರಿಸಿಲಾಗುತ್ತದೆ. ಬುಧವಾರ ದಿನ ಸಂಜೆ ರೈತರ ಮನೆಗಳಲ್ಲಿ ಮಣ್ಣಿನಿಂದ ಮಾಡಿದ ಎತ್ತುಗಳನ್ನು ಪೂಜೆ ಮಾಡುತ್ತಾರೆ. ಕಾರ ಹುಣ್ಣಿಮೆಯಲ್ಲಿ ರೈತಾಪಿ ವರ್ಗದವರು ಸಡಗರ ಸಂಭ್ರಮದಿಂದ ಆಚರಿಸಿದರು. ಈ ಬಾರಿಯು ಮುಂಗಾರಿ ಎತ್ತು ಪ್ರಥಮ ಬಂದಿರುವುದರಿಂದ ರೈತರ ಮುಖದಲ್ಲಿ ಹಸನ್ಮುಕಿ ನಗೆ ಬಿರಿದಂತಿದೆ. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಹಳಬರು, ಗೌಡರು, ರೈತಾಪಿ ವರ್ಗದವರು, ಯುವಕರು ಪಾಲ್ಗೊಂಡು ಸಂಭ್ರಮಿಸಿದರು.ವರದಿ:- ಪ್ರವೀಣ ಮಾ. ಮಾವರಕರ