ಹಳ್ಳೂರ: ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯು ಬರುವ ದಿ.17 ರಂದು ನಡೆಯಲಿದ್ದು ಕಾಂಗ್ರೆಸ್ಸ್ ಪಕ್ಷದ ಗೆಲುವಿಗೆ ಎಲ್ಲ ಕಾರ್ಯಕರ್ತರು ಶ್ರಮೀಸಬೇಕು ಯುವ ಮುಖಂಡ ರಾಹುಲ ಸ. ಜಾರಕಿಹೋಳಿ ಹೇಳಿದರು.
ಗ್ರಾಮದಲ್ಲಿ ಶುಕ್ರವಾರರಂದು ನಡೆದ ಚುನಾವಣೆ ಪ್ರಚಾರ ನಿಮಿತ್ಯ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸತೀಶ ಲ. ಜಾರಕಿಹೋಳಿ ಅವರ ಪುತ್ರ ಮಾತನಾಡಿದ ಅವರು ಲೋಕಸಭಾ ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ದಿಗೆ ಮತವನ್ನು ನೀಡಬೇಕು. ಸತೀಶ ಲ. ಜಾರಕಿಹೋಳಿ ಅವರು ಬಡಜನರ ಕಾಳಜಿ, ಅಲ್ಲದೇ ಶಾಲಾ ವಿದ್ಯಾರ್ಥಿಗಳಿಗೆ ಸಾಂಸ್ಕøತಿಕ ಕಾರ್ಯಕ್ರಮ, ಕ್ರೀಡೆ, ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದಲ್ಲದೇ ಶಿಕ್ಷಣ ಪ್ರೇಮಿಗಳಾಗಿ ಹೋರಹೋಮ್ಮಿದ್ದಾರೆ. ಅವರಿಗೆ ಈ ಭಾಗದ ಮತದಾರರು ಆಶೀರ್ವದಿಸಬೇಕೆಂದು ರಾಹುಲ ಸ. ಜಾರಕಿಹೋಳಿ ಹೇಳಿದರು.
ಕಾಂಗ್ರೇಸ್ ಮುಖಂಡರಾದ ಮಲ್ಲಿಕಾರ್ಜುನ ಕಬ್ಬೂರ, ಅರ್ಜುನ ನಾಯಿಕವಾಡಿ, ಮಂಜುನಾಥ ಸಣ್ಣಕ್ಕಿ ಮಾತನಾಡಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸತೀಶ ಲ. ಜಾರಕಿಹೋಳಿ ಅವರು ಸಾಮಾಜಿಕ ಅಭಿವೃದ್ದಿ ಚಿಂತಕರು, ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ, ಅಲ್ಲದೇ ಕಾಂಗ್ರೇಸ್ ಪಕ್ಷ ಬಡ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ದಿ ಕೆಲಸ ಮಾಡುವ ಪಕ್ಷವಾಗಿದೆ ಎಂದರು. ರೈತ ಮುಖಂಡ ಶ್ರೀಶೈಲ ಅಂಗಡಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ದಿನನಿತ್ಯ ಬಳಸುವ ವಸ್ತುಗಳ ಬೆಲೆಗಳು ಏರಿಸುತ್ತಿರುವುದರಿಂದ ಬಡವರ ಬಗ್ಗೆ ಕಾಳಜಿ ಇಲ್ಲದ ಸರ್ಕಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಪಾಂಡುರಂಗ ಮನ್ನಿಕೇರಿ, ಭೀಮಶಿ ಮಗದುಮ್ಮ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಕತ್ತಿ, ಹಣಮಂತ ತೇರದಾಳ, ಸುರೇಶ ಕತ್ತಿ, ಸುರೇಶ ಮಗದುಮ್ಮ, ಮಾವರಕರ, ಬಸಪ್ಪ ಸಂತಿ, ರವಿ ತುಪ್ಪದ, ಲಗಮನ್ನ ಕಳಸನ್ನವರ, ಲಕ್ಷ್ಮಣ ಮಸಗುಪ್ಪಿ, ಸೇರಿದಂತೆ ಗ್ರಾಪಂ ಸದಸ್ಯರು, ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಪಾಲ್ಗೊಂಡಿದರು. ಯುವ ಸಂಘಟಿಕ ಹಣಮಂತ ಹಡಪದ ನಿರೂಪಿಸಿದರು.
ವರದಿ: ಪ್ರವೀಣ ಮಾವರಕರ