ಹಳ್ಳೂರ: ಗ್ರಾಮದಲ್ಲಿ ಹೋಳಿ ಹುಣ್ಣಿಮೆ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತ್ತು. ರವಿವಾರ ಬೆಳಿಗ್ಗೆ ಗ್ರಾಮದ ಎಲ್ಲ ದೇವಸ್ಥಾನಗಳಿಗೆ ಪೂಜೆ, ನೈವೇಧ್ಯ ಸಲ್ಲಿಸಲಾಯಿತ್ತು. ಸಂಜೆ 6 ಗಂಟೆಗೆ ಗ್ರಾಮದ ಹಳಬರು ಕಾಮನನ ಪ್ರದಕ್ಷಣೆಗೆ ಪೂಜೆ ಸಲ್ಲಿಸಿದರು. ಸೋಮವಾರ ಬೆಳಗಿನ ಜಾವ 4 ಗಂಟೆಗೆ ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಪಾದಯಾತ್ರಿಕರಿಗೆ ಬಿಳ್ಕೋಟ್ಟು 5 ಗಂಟೆಗೆ ಕಾಮನ ದಹನ ಮಾಡಲಾಯಿತ್ತು. ಚಿಕ್ಕಮಕ್ಕಳು, ಯುವಕರು ಹಲಗಿ ಬಡೆತದೊಂದಿಗೆ, ಹಾಗೂ ಅತಿ ಹೆಚ್ಚು ನೃತ್ಯದೊಂದಿಗೆ ಕುಣಿದು, ಪರಸ್ಪರ ವಿವಿಧ ಬಗೆಯ ಬಣ್ಣ ಹಚ್ಚಿ ಹೋಳಿ ಹುಣ್ಣಿಮೆ ಹಬ್ಬ ಅದ್ದೂರಿಯಾಗಿ ಆಚರಿಸಿದರು. ಹೋಳಿಯ ಲಾವಣಿ ಪದ, ಹಾಡುತ್ತ ವಿವಿಧ ಬಣ್ಣ ಏರಚ್ಚುತ್ತ ಬಣ್ಣಗಳಲ್ಲಿ ಮಿಂದೆದ್ದರು. ಹಳ್ಳೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಚರಿಸಲಾಯಿತ್ತು.
ವರದಿ: ಪ್ರವೀಣ ಮಾವರಕರ