ಸೋಮವಾರ , ಜೂನ್ 5 2023
kn
Breaking News

ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಪಾಲ್ಗೊಂಡ ಗಣ್ಯರು

Spread the love

ಹಳ್ಳೂರ: ಸಾವಿತ್ರಿ ಬಾಯಿ ಫುಲೆ ಅವರು ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಭಾರತದ ಮೊಟ್ಟ ಮೊದಲ ಶಿಕ್ಷಕಿ, ಧಣಿಯವರಿಯದ ಸತ್ಯಶೋಧಕಿ, ಆಧುನಿಕ ಶಿಕ್ಷಣದ ತಾಯಿ ಎಂದು ತಾಲೂಕ ಪಂಚಾಯತ ಸದಸ್ಯೆ ಸವಿತಾ ಸು. ಡಬ್ಬನ್ನವರ ಹೇಳಿದರು.
ಸ್ಥಳೀಯ ಗ್ರಾಮ ದೇವತೆ ಶ್ರಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ 190ನೇ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯ ಆಚರಣೆಯ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಸಾವಿತ್ರಿ ಬಾಯಿ ಇವರು ಸಮಾನತೆಯ ಹರಿಕಾರರಾಗಿ, ದೀನ ದಲಿತ, ಹಿಂದುಳಿದ ವರ್ಗಗಳ ಏಳಿಗೆಗಾಗಿ ಅವಿರತವಾಗಿ ಶ್ರಮಿಸಿದವರು, ಇವರು ಜನ ಸಾಮಾನ್ಯರು ಧರ್ಮ, ಪಂಥ, ಸಂಪ್ರದಾಯ ಮುಂತಾದ ಸಂಕುಚಿತ ಭಾವನೆಗಳಿಗೆ ಮರುಳಾಗದೆ ಮಾನವ ಧರ್ಮವನ್ನು ಸಮಾಜದ ಅಭಿವೃದ್ದಿ ಕಡೆಗೆ ಕೊಂಡೈಯುವಂತೆ ಮಾಡಿದ್ದಾರೆ ಎಂದು ತಾಲೂಕ ಪಂಚಾಯತ ಸದಸ್ಯೆ ಸವಿತಾ ಸು. ಡಬ್ಬನ್ನವರ ಹೇಳಿದರು.
ಗ್ರಾಪಂ ಸದಸ್ಯರಾದ ಮಹಾದೇವ ಹೋಸಟ್ಟಿ, ಗಿರಮಲ್ಲಪ್ಪ ಕುಲಗೋಡ, ಮುಖಂಡರಾದ ಸಿದ್ದಪ್ಪ ಕುಲಗೋಡ, ಮುರಿಗೆಪ್ಪ ಮಾಲಗಾರ ಸಾವಿತ್ರಿಬಾಯಿ ಫುಲೆಯವರನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರ್ಚಕ ಯಲ್ಲಪ್ಪ ಪೂಜೇರಿ ಸಾವಿತ್ರಿಬಾಯಿ ಫುಲೆಯವರ ಬಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮುಖಂಡರಾದ ಶಿವಪ್ಪ ನಿಡೋಣಿ, ಯಲ್ಲಪ್ಪ ಗೋಸಬಾಳ, ಮಲ್ಲಪ್ಪ ಹೋಸಟ್ಟಿ, ಶಾಂತಯ್ಯ ಹಿರೇಮಠ, ಬಾಳೇಶ ನೇಸೂರ, ಅಪ್ಪಯ್ಯ ರಡೇರಟ್ಟಿ, ಗ್ರಾಪಂ ಸದಸ್ಯ ಪ್ರದೀಪ ಪಾಲಭಾಂವಿ, ಲಕ್ಕಪ್ಪ ಪೂಜೇರಿ, ಸಂಗಪ್ಪ ನಾಯ್ಕ, ಕೃಷ್ಣಪ್ಪ ಅಟಮಟ್ಟಿ, ಆನಂದ ಮೂಡಲಗಿ, ಪುಂಡಲಿಕ ಹೋಸಟ್ಟಿ, ರಾಚಪ್ಪ ಕೋಪ್ಪದ, ಸೇರಿದಂತೆ ಮಾಳಿ ಹಾಗೂ ಮಾಲಗಾರ ಸಮಾಜದ ಕಾರ್ಯಕರ್ತರು ಪಾಲ್ಗೊಂಡಿದರು.
ವಿವಿದೆಡೆ
ಸ್ಥಳೀಯ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಗಳ ಮೇಲ್ವೀಚಾರಣೆ ಮತ್ತು ಬಲವರ್ಧನ ಸಮೀತಿ ಕರ್ನಾಟಕ, ಜಿಲ್ಲಾ ಸಮಿತಿ ಬೆಳಗಾವಿ, ಮೂಡಲಗಿ ತಾಲೂಕಾ ಸಮಿತಿ ಹಾಗೂ ಗ್ರಾಮ ಸಮಿತಿ ವತಿಯಿಂದ ಕಾರ್ಯಲಯದಲ್ಲಿ 190ನೇ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯ ಮಾಡಲಾಯಿತ್ತು. ಸಮಿತಿಯ ಜಿಲ್ಲಾಧ್ಯಕ್ಷ ಮಾರುತಿ ನಾ. ಮಾವರಕರ ಸಾವಿತ್ರಿಬಾಯಿ ಫುಲೆ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಸಾವಿತ್ರಿಬಾಯಿ ಫುಲೆ ಇವರು ಬ್ರಿಟಿಷರ ಕಾಲದಲ್ಲಿ ಭಾರತದ ಮೊದಲ ಮಹಿಳಾ ಶಿಕ್ಷಕಿ (ಇಂಡಿಯಾಸ್ ಫಸ್ಟ್ ಟೀಚರ್) ಎಂದು ಬಿರುದು ಪಡೆದುಕೊಂಡು ಹೋರ ಹೊಮ್ಮಿದ್ದಾರೆ. ಇವರು ಎಲ್ಲ ಸಮಾಜದ ವರ್ಗದವರಿಗೆ ಶಿಕ್ಷಣದ ಕ್ರಾಂತಿಯನ್ನು ಭಿತ್ತಿದವರು.
ಸಮಾಜದ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ, ಸತಿ ಸಹಗಮನ ಪದ್ದತಿ, ಕೇಶ ಮುಂಡನೆ ವಿರುದ್ದ ಹೋರಾಟ ಮಾಡಿದ್ದಾರೆ. ಅಲ್ಲದೇ ಮಹಿಳೆಯರಿಗೊಸ್ಕರ ಪ್ರಪ್ರಥಮವಾಗಿ ಶಾಲೆಗಳು, ಅಬಲಾಶ್ರಮ ಸ್ಥಾಪನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರು ಜ್ಯೋತಿಭಾ ಫುಲೆ, ಸಾವಿತ್ರಿಬಾಯಿ ಫುಲೆ ಅವರ ತತ್ವ ಆದರ್ಶಗಳನ್ನು ಅನುಸರಿಸಿ ಶಿಕ್ಷಣಕ್ಕೆ ಮಹತ್ವ ನೀಡಿ ಅದಕ್ಕೆ ಅನುವಾಗುವಂತೆ ಸಂವಿಧಾನದಲ್ಲಿ ವಿವರಿಸಿದ್ದಾರೆ ಎಂದು ಮಾರುತಿ ನಾ. ಮಾವರಕರ ಹೇಳಿದರು.
ಈ ಸಂದರ್ಭದಲ್ಲಿ ಸಮಿತಿ ಕಾರ್ಯಕರ್ತರು, ಮಾಳಿ ಹಾಗೂ ಮಾಲಗಾರ ಸಮಾಜದ ಮುಖಂಡರು ಪಾಲ್ಗೊಂಡಿದರು.


Spread the love

About gcsteam

Check Also

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

Spread the loveಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page