ಭಾನುವಾರ , ಫೆಬ್ರವರಿ 5 2023
kn
Breaking News

ಹಿಡಕಲ್ ಜಲಾಶಯದಿಂದ ನಾಳೆಯಿಂದ 15 ದಿನಗಳವರೆಗೆ 6.80 ಟಿಎಂಸಿ ನೀರು ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಜಿಎಲ್‍ಬಿಸಿಗೆ 2400 ಕ್ಯೂಸೆಕ್ಸ್, ಜಿಆರ್‍ಬಿಸಿಗೆ 2000 ಕ್ಯೂಸೆಕ್ಸ್ ಮತ್ತು ಸಿಬಿಸಿಗೆ 550 ಕ್ಯೂಸೆಕ್ಸ್ ನೀರು

Spread the love

  1. ಗೋಕಾಕ : ಹಿಡಕಲ್ ಜಲಾಶಯದಿಂದ ನಾಳೆಯಿಂದ 15 ದಿನಗಳವರೆಗೆ ರೈತರ ಕೃಷಿ ಜಮೀನುಗಳಿಗೆ ನೀರು ಹಾಯಿಸಲು 6.80 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.
    ನಾಳೆ ಮಂಗಳವಾರ ಸಂಜೆ 6 ಗಂಟೆಗೆ ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆಯಾಗಲಿದೆ ಎಂದು ಅವರು ಹೇಳಿದ್ದಾರೆ.
    ಘಟಪ್ರಭಾ ಎಡದಂಡೆ ಕಾಲುವೆಗೆ 2400 ಕ್ಯೂಸೆಕ್ಸ್, ಘಟಪ್ರಭಾ ಬಲದಂಡೆ ಕಾಲುವೆಗೆ 2000 ಕ್ಯೂಸೆಕ್ಸ್ ಮತ್ತು ಸಿಬಿಸಿ ಕಾಲುವೆಗೆ 550 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ. ಮಾ.9 ರಿಂದ ಮಾ.24 ರವರೆಗೆ ಒಟ್ಟು 15 ದಿನಗಳವರೆಗೆ ಸುಮಾರು 6.80 ಟಿಎಂಸಿ ನೀರನ್ನು ಹರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
    ಗೋಕಾಕ, ಮೂಡಲಗಿ, ರಾಯಬಾಗ, ಮುಧೋಳ, ಬೀಳಗಿ, ಜಮಖಂಡಿ ತಾಲೂಕುಗಳ ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಅನಾವಶ್ಯಕವಾಗಿ ನೀರನ್ನು ಪೋಲು ಮಾಡಬಾರದು. ಕೃಷಿ ಜಮೀನುಗಳಿಗೆ ಅನುಕೂಲವಾಗಲು ಹಿಡಕಲ್ ಜಲಾಶಯದಿಂದ ಎಲ್ಲ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.

Spread the love

About gcsteam

Check Also

ಹಳೆಯ ಪಿಂಚಣಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ:ಬೀರಪ್ಪ ಅಂಡಗಿ

Spread the loveಕೊಪ್ಪಳ: ೧ನೇ ಏಪ್ರೀಲ್ ೨೦೦೬ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಲಾಗಿರುವ ನೂತನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page