ಕೊಪ್ಪಳ: ಮುಂದಿನ ಪೀಳಿಗೆಗೆ ಕ್ರೀಡೆಗಳ ಪರಿಚಯ ಮಾಡಿಕೊಡುವ ಅಗತ್ಯತೆಯು ಪ್ರತಿಯೊಬ್ಬರ ಮೇಲೆ ಇದೇ ಎಂದು ಜಿಲ್ಲಾಧಿಕಾರಿಗಳಾದ ವಿಕಾಸ ಕಿಶೋರ ಸುರಳ್ಕರ ಹೇಳಿದರು. ಅವರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸರಕಾರಿ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ,ಪ್ರಸ್ತುತ ದಿನಮಾನಗಳಲ್ಲಿ ಅನೇಕ ತಂತ್ರಜ್ಞಾನದ ಪ್ರಭಾವದಿಂದ ಮಕ್ಕಳಲ್ಲಿ ಕ್ರೀಡಾ ಮನೋಭಾವ ಕಡಿಮೆ ಆಗಿದೆ.ಅಲ್ಲದೆ ಮಕ್ಕಳು ಕೇವಲ …
Read More »ಕೇಂದ್ರ ಸಚಿವ ಅಮೀತ್ ಷಾ ಅವರಿಂದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪ್ರಶಸ್ತಿ ಪ್ರದಾನ
ಬೆಂಗಳೂರು- ದೇಶದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ರಾಷ್ಟ್ರೀಯ ಸಹಕಾರಿ ಹೈನುಗಾರಿಕೆ ಮಹಾ ಮಂಡಲ ( ಎನ್ ಸಿ ಡಿ ಎಫ್ ಐ) ವು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸು-ಸಂದರ್ಭದಲ್ಲಿ ಹಾಲು ಮತ್ತು ಹಾಲಿನ ಉತ್ಪಾದನೆ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ‘ಕೆಎಂಎಫ್’ ಗೆ ಪ್ರಶಸ್ತಿಯ ಭಾಗ್ಯ ಒಲಿದು ಬಂದಿದೆ. ಭಾನುವಾರದಂದು ಗುಜರಾತ್ ರಾಜ್ಯದ ಗಾಂಧೀ ನಗರದಲ್ಲಿ ಎನ್ ಸಿ ಡಿ ಎಫ್ ಐ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಕೇಂದ್ರ …
Read More »ಸಮಾನ ವೇತನ & ಹಳೆಯ ಪಿಂಚಣಿ ಯೋಜನೆ ಜಾರಿಗೆ ಮುಖ್ಯಮಂತ್ರಿಗಳಿಗೆ ಮನವಿ : ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ
ಮೂಡಲಗಿ: ಕೇಂದ್ರ ಸರಕಾರಿ ನೌಕರರ ಮಾದರಿಯಲ್ಲಿ ರಾಜ್ಯದಲ್ಲಿಯ ನೌಕರರಿಗೂ ಸಮಾನ ವೇತನ ನೀಡಬೇಕು. ನೂತನ ಪಿಂಚಣಿ ರದ್ದು ಪಡಿಸಿ ಹಳೆ ಪಿಂಚಣಿ ಜಾರಿ ಕುರಿತಾಗಿ ರಾಜ್ಯಮಟ್ಟದಲ್ಲಿ ಸಿ.ಎಮ್ ಬಸವರಾಜ ಬೊಮ್ಮಾಯಿಯವರಿಗೆ ಮನವರಿಕೆ ಮಾಡಿ ಕೊಟ್ಟಿರುವದಾಗಿ ಕರ್ನಾಟಕ ಸರಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಹೇಳಿದರು. ಅವರು ಪಟ್ಟಣದ ತಹಶೀಲ್ದಾರ ಕಛೇರಿಯ ಸಭಾ ಭವನದಲ್ಲಿ ಜರುಗಿದ ಗೌರವ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಕರ್ನಾಟಕ ರಾಜ್ಯವು ಆರ್ಥಿಕವಾಗಿ ೬ ನೇ …
Read More »ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಸಮುದಾಯದ ಸಹಕಾರದ ಅಗತ್ಯವಿದೆ: ಎಂ.ಡಿ.ಗುಲಾಂ ಹುಸೇನ
ಕೊಪ್ಪಳ: ಶೈಕ್ಷಣಿಕ ಪ್ರಗತಿಗೆ ಸಮುದಾಯದ ಸಹಕಾರದ ಅಗತ್ಯವಿದೆ ಎಂದು ಸಿ.ಪಿ.ಎಸ್.ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಡಿ.ಗುಲಾಂ ಹುಸೇನ ಹೇಳಿದರು. ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಟಾಟಾ ಕಲಿಕಾ ಟ್ರಸ್ಟ್ ನ ವತಿಯಿಂದ ಹಮ್ಮಿಕೊಂಡಿದ್ದ ಪಾಲಕರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣಬೇಕಾದರೆ ಕೇವಲ ಇಲಾಖೆ ಹಾಗೂ ಶಿಕ್ಷಕರಿಂದ ಮಾತ್ರ ಸಾಧ್ಯವಿಲ್ಲ. ಸಮುದಾಯದ ಸಹಕಾರ ಇದ್ದಾಗ ಮಾತ್ರ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬಹುದಾಗಿದೆ. ಇಲಾಖೆಯು ಶೈಕ್ಷಣಿಕ ಪ್ರಗತಿಗಾಗಿ ಅನೇಕ ರೀತಿಯ ಕಾರ್ಯಕ್ರಮಗಳನ್ನು …
Read More »ರವಿವಾರ ಮೂಡಲಗಿಗೆ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿಯವರ ಬೇಟಿ
ಮೂಡಲಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿಯವರು ರವಿವಾರ ದಿ. ಏ ೧೦ ರಂದು ಮದ್ಯಾಹ್ನ ೦೨:೩೦ ಕ್ಕೆ ಪಟ್ಟಣದ ತಹಶೀಲ್ದಾರ ಕಛೇರಿಗೆ ಗೌರವ ಸ್ವೀಕರಿಸುವ ಸಲುವಾಗಿ ಆಗಮಿಸುವರು. ನೂತನ ತಾಲೂಕಿಗೆ ಪ್ರಥಮ ಬಾರಿಗೆ ಆಗಮಿಸುತ್ತಿದ್ದು, ನೌಕರರ ಸಂಘಟನೆಯ ಪದಾಧಿಕಾರಿಗಳು ವಿವಿಧ ಇಲಾಖೆಗಳ ನೌಕರ ಬಂಧುಗಳು ಆಗಮಿಸಬೇಕೆಂದು ತಾಲೂಕಾ ಘಟಕದ ಅಧ್ಯಕ್ಷ ಆನಂದ ಹಂಚ್ಯಾಗೋಳ ಮತ್ತು ಕಾರ್ಯದರ್ಶಿ ಕೆ.ಆರ್ ಅಜ್ಜಪ್ಪನವರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Read More »ಏ. ೧೧ ರಿಂದ ಸಿದ್ಧ ಸಮಾಧಿ ಯೋಗ ಶಿಬಿರ : ಅರುಣ ಗುರೂಜೀ
ಮೂಡಲಗಿ: ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಬೆಂಗಳೂರಿನ, ಶಾಖೆ ಮೂಡಲಗಿಯ ಅರುಣ ಗುರೂಜೀ ಅವರ ಮಾರ್ಗದರ್ಶನದಲ್ಲಿ ಏ. ೧೧ ರಿಂದ ಸಾಯಂಕಾಲ ೫.೩೦ಕ್ಕೆ ‘ಸಿದ್ಧ ಸಮಾಧಿ ಯೋಗ-ಎಸ್‌ಎಸ್‌ವೈ’ ಶಿಬಿರವನ್ನು ಸ್ಥಳೀಯ ಶಿವಬೋಧರಂಗ ಮಠದ ಆವರಣದಲ್ಲಿ ಏರ್ಪಡಿಸಿರುವರು. ಪ್ರಾಣಾಯಾಮ, ಧ್ಯಾನ, ಯೋಗಾಸನ, ಸೂರ್ಯ ನಮಸ್ಕಾರ, ಗಾಯತ್ರಿ ಮಹಾಮಂತ್ರೋಪದೇಶ ಇವುಗಳ ಜೋತೆಗೆ ಉದ್ವೇಗ, ಒತ್ತಡ ನಿವಾರಣೆ, ಆಹಾರ ಕ್ರಮ, ವಿವಿಧ ಕಾಯಿಲೆಗಳ ನಿವಾರಣೋಪಾಯಗಳಿಗೆ ಶಿಬಿರದಲ್ಲಿ ಹೇಳಿಕೊಡುವರು. ಶಿಬಿರದ ಬಗ್ಗೆ ಪರಿಚಯ ಕಾರ್ಯಕ್ರಮವು ರವಿವಾರ …
Read More »ಜಿಲ್ಲಾ ಮಟ್ಟದ ವಿಕಲಚೇತನ ನೌಕರರ ಕ್ರೀಡಾಕೂಟ
ಕೊಪ್ಪಳ: ಸರಕಾರಿ ನೌಕರರ ಸಂಘದ ವತಿಯಿಂದ ಏ.೧೩ ರ ಬುಧವಾರ ಬೆಳಗ್ಗೆ ೧೦ ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ವಿಕಲಚೇತನ ನೌಕರರ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದೆ ಎಂದು ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರಾದ ನಾಗರಾಜ.ಆರ್.ಜುಮ್ಮಣ್ಣನ್ನವರ ತಿಳಿಸಿದ್ದಾರೆ. ಕಬ್ಬಡ್ಡಿ,ಓಟದ ಆಟ,ಕುರ್ಚಿ ಆಟ,ಗುಂಡು ಎಸೆತ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದೆ. ಜಿಲ್ಲೆಯ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುವ ವಿಕಲಚೇತನ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ …
Read More »ಮೂಡಲಗಿ ಶ್ರೀ ಶಿವಬೋಧರಂಗ ಕೋ.ಆಪ್ ಸೊಸೈಟಿಗೆ ರೂ. ೪.೧೧ ಕೋಟಿ ಲಾಭ
ಮೂಡಲಗಿ: ಮೂಡಲಗಿಯ ಶ್ರೀ ಶಿವಬೋಧರಂಗ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯು ೨೦೨೨ರ ಮಾರ್ಚ್ ಅಂತ್ಯಕ್ಕೆ ರೂ. ೪.೧೧ ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಅಧ್ಯಕ್ಷ ರೇವಪ್ಪ ಕುರಬಗಟ್ಟಿ ಅವರು ತಿಳಿಸಿದರು. ಸೊಸೈಟಿಯ ಪ್ರಗತಿಯ ಕುರಿತು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸದ್ಯ ಸೊಸೈಟಿಯು ರೂ. ೪.೮೨ ಕೋಟಿ ಶೇರು ಬಂಡವಾಳ, ರೂ. ೧೯.೭೪ ಕೋಟಿ ಕಾಯ್ದಿಟ್ಟ ನಿಧಿಗಳು, ರೂ. ೨೪೧.೬೭ ಕೋಟಿ ಠೇವುಗಳನ್ನು ಹೊಂದಿದೆ ಎಂದರು. …
Read More »ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮದಡಿ ರಾಜ್ಯದಲ್ಲಿ ೧೩,೨೦೦ ಉದ್ಯೋಗ ಸೃಷ್ಠಿ- ಸಂಸದ ಈರಣ್ಣ ಕಡಾಡಿ
ಮೂಡಲಗಿ: ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಒಂದು ಪ್ರಮುಖ ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ ಕಾರ್ಯಕ್ರಮವಾಗಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ನಿರುದ್ಯೋಗಿ ಯುವಕ-ಯುವತಿಯರಿಗೆ ಸಹಾಯ ಮಾಡುವ ಮೂಲಕ ಕೃಷಿಯೇತರ ವಲಯದಲ್ಲಿ ಸೂಕ್ಷ್ಮ ಉದ್ಯಮಗಳ ಸ್ಥಾಪನೆಯ ಮೂಲಕ ಸ್ವಯಂ-ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದೆ ಎಂದು ಕೇಂದ್ರ ಸೂಕ್ಷö್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವ ಭಾನು ಪ್ರತಾಪ್ ಸಿಂಗ್ ಅವರು ಲಿಖಿತ ಉತ್ತರದಲ್ಲಿ ಮಾಹಿತಿ …
Read More »ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಿ: ಬೀರಪ್ಪ ಅಂಡಗಿ ಚಿಲವಾಡಗಿ ಒತ್ತಾಯ
. ಮುಧೋಳ: ೧ನೇ ಎಪ್ರಿಲ್ ೨೦೦೬ ರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಿರುವ ಎನ್.ಪಿ.ಎಸ್.ಯೋಜನೆಯನ್ನು ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷರು ಹಾಗೂ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಸರಕಾರವನ್ನು ಒತ್ತಾಯಿಸಿದ್ದಾರೆ. ಅವರು ಬಾಗಲಕೋಟ ಜಿಲ್ಲೆಯ ಮುಧೋಳದಲ್ಲಿ ಮಾತನಾಡಿ,೧ ನೇ ಎಪ್ರಿಲ್ ೨೦೦೬ ರ ನಂತರ ನೇಮಕಗೊಂಡ ರಾಜ್ಯ …
Read More »